ಯುವತಿ ಮೇಲೆ ಅತ್ಯಾಚಾರ

ಮಧುಗಿರಿ, ಮಾ. ೨೦- ಕೂಲಿ ಕೆಲಸಕ್ಕೆಂದು ಹೋಗಿದ್ದ ಯುವತಿಯ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣ ತಾಲ್ಲೂಕಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ದೊಡ್ಡೇರಿ ಹೋಬಳಿಯ ಬೋರಾಗುಂಟೆ ಗ್ರಾಮದಲ್ಲಿ ಈ ಪ್ರಕರಣ ನಡೆದಿದ್ದು, ಕೂಲಿ ಕೆಲಸ ಮುಗಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಅದೇ ಗ್ರಾಮದ ರಂಗನಾಥ ಎಂಬಾತ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಈ ಹಿಂದೆ ಆರೋಪಿಯು ಹಲವು ಬಾರಿ ಈ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದೆ.

ಈ ಸಂಬಂಧ ಬಡವನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

@12bc = ಮಟ್ಕಾ: ಬಂಧನ

ತಾಲ್ಲೂಕಿನ ಸಜ್ಜೆಹೊಸಹಳ್ಳಿ ಗ್ರಾಮದಲ್ಲಿ 1 ರೂ.ಗೆ 70 ರೂಪಾಯಿ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಮಹರುಪ್ಕಾನ್ ಎಂಬಾತನನ್ನು ಬಂಧಿಸಲಾಗಿದೆ. ಈತನಿಂದ ಮಟ್ಕಾ ಆಟಕ್ಕೆ ಬಳಸಿದ್ದ 1060 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಬಡವನಹಳ್ಳಿ ಪಿಎಸ್ಐ ಪ್ರಭಾಕರ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Leave a Comment