ಯುವತಿ ಮೇಲೆ ಅತ್ಯಾಚಾರವೆಸಗಿ ಕಟ್ಟಡದಿಂದ ತಳ್ಳಿದ ಕಾಮುಕ

ನವದೆಹಲಿ, ಆ ೧೪- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ನಿರ್ಭಯ ಅತ್ಯಾಚಾರ ಪ್ರಕರಣವನ್ನು ಜನರು ಇನ್ನು ಮರೆತ್ತಿಲ್ಲ ಅಷ್ಟರಲ್ಲಿ  ಮತ್ತೊಂದು ಹೀನ ಕೃತ್ಯ ನಡೆದು ಹೋಗಿದೆ.  ಕಾಮುಕನೋರ್ವ  ಪರಿಚಯಸ್ಥ ಯುವತಿ ಮೇಲೆ ಅತ್ಯಾಚಾರ ಎಸಗಿದಲ್ಲದೇ  ಅರೆ ಬೆತ್ತಲೆಯಲ್ಲೇ ಆಕೆಯನ್ನು ನಾಲ್ಕು ಅಂತಸ್ತಿನ ಕಟ್ಟಡದಿಂದ ಕೆಳಗೆ ತಳ್ಳಿ ಕ್ರೌರ್ಯ ಮೆರೆದಿರುವ ದುರ್ಘಟನೆ ನಡೆದಿದೆ.

ಇಲ್ಲಿನ ರೋಹಿನಿ ಪ್ರದೇಶದ ಬೇಗಂಪುರದಲ್ಲಿ ಆ ೧೧ರ ತಡರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಈಗಾಗಲೇ ಕಾಮುಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆದಿದೆ. ಘಟನೆ ನಡೆದ ದಿನ ಯುವತಿ ತನ್ನ ಪ್ರಿಯಕರ ಹಾಗೂ ಮತ್ತಿಬ್ಬರ ಜೊತೆ ಹೊರಗೆ ಹೋಗಿದ್ದಳು. ನಂತರ ನಾಲ್ಕು ಜನರು ಒಂದೇ ಆಟೋದಲ್ಲಿ ತಮ್ಮ ಮನೆಗಳಿಗೆ ವಾಪಸ್ ಆಗಿದ್ದಾರೆ.

ಈ ವೇಳೆ ಇವರ ಜೊತೆಗಿದ್ದ ೨೨ ವರ್ಷದ ಕಾಮುಕ ಆ ಯುವತಿಯನ್ನು ಆಕೆಯ ಮನೆಗೆ ಡ್ರಾಪ್ ಮಾಡುವುದಾಗಿ ಹೇಳಿದ್ದಾನೆ. ನಮ್ಮ ಮನೆಯಿಂದ ಕಾರು ತೆಗೆದುಕೊಂಡು ಬಂದು ಡ್ರಾಪ್ ಮಾಡುತ್ತೇನೆ ಅಂತಾ ತಿಳಿಸಿದ್ದಾನೆ. ಇವನ ಮಾತು ನಂಬಿದ ಯುವತಿ ಅವನ ಮನೆಗೆ ಹೋಗಿದ್ದಾಳೆ. ಇತ್ತ, ಆಕೆಯ ಪ್ರಿಯಕರ ಹಾಗೂ ಮತ್ತೋರ್ವ ಅದೇ ಆಟೋದಲ್ಲಿ ತಮ್ಮ ಮನೆಗಳತ್ತ ತೆರಳಿದ್ದಾರೆ.

ಆದರೆ, ಆ ಕಾಮುಕ ತನ್ನ ಮನೆಗೆ ಯುವತಿಯನ್ನು ಕರೆದೊಯ್ದು ಅಲ್ಲಿ ಆಕೆಯ ಮೇಲೆ  ಎರಗಿದ್ದಾನೆ. ಅಲ್ಲದೇ, ಇದಾದ ನಂತರ ಆಕೆಯನ್ನು ಮನೆಯ ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ್ದಾನೆ ಎನ್ನಲಾಗಿದೆ. ಸದ್ಯ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಸಂಸತ್ರೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಗೊತ್ತಾಗಿದೆ. ಈ ಘಟನೆ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

 

Leave a Comment