ಯುವತಿ ನಾಪತ್ತೆ

ತುಮಕೂರು, ಮೇ ೨೩- ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಸಬಾ ಹೋಬಳಿಯ ಕುಪ್ಪೂರು ಗ್ರಾಮದ ಸುಮಾರು 19 ವರ್ಷದ ಗಂಗಮ್ಮ ಎಂಬ ಯುವತಿಯು ಮೇ 19 ರಂದು ಕಾಲೇಜಿಗೆ ಹೋಗಿ ಬರುತ್ತೇನೆಂದು ಹೋದವಳು ಮನೆಗೆ ವಾಪಸ್ ಬಂದಿರುವುದಿಲ್ಲ ಎಂದು ಈಕೆಯ ತಾಯಿ ಮಂಜಮ್ಮ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾದ ಯುವತಿಯು ಸುಮಾರು 5 ಅಡಿ ಎತ್ತರ, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೋಗುವಾಗ ಅರಿಶಿನ ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಯುವತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು ಎಂದು ಪೊಲೀಸ್ ಸಬ್ಇನ್ಸ್‌ಪೆಕ್ಟರ್ ಮನವಿ ಮಾಡಿದ್ದಾರೆ.

Leave a Comment