ವಿಕೃತಕಾಮಿ ಬಂಧನ

ಮೈಸೂರು, ನ.೯- ಮಹಿಳಾ ಸಂಘ ಸಂಸ್ಥೆಗಳ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಯುವತಿಯರನ್ನು ಕಾಮತೃಷೆ ತೀರಿಸಲು ಬಳಸಿಕೊಂಡು ಯಾರಿಗೂ ಗೊತ್ತಾಗದ ರೀತಿಯಲ್ಲಿ ವಂಚನೆ ಮುಂದುವರಿಸಿಕೊಂಡು ಹೋಗಿದ್ದ ಶಿವಶಂಕರಾಚಾರಿ ಎಂಬ ವಿಕೃತ ಕಾಮಿಯನ್ನು ಮೈಸೂರು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ ಘಟನೆ ನಡೆದಿದ್ದು, ಇದೀಗ ಸಮಾಜ ಸೇವಕರೋರ್ವರು ಸಹಕಾರ ಸಂಘಗಳ ಉಪನಿಬಂಧಕರಿಗೆ ಈತನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಬೆಂಗಳೂರು ಮೂಲದ ಮೈಸೂರಿನ ಹಿನಕಲ್ ನಲ್ಲಿ  ಹಾಲಿ ವಾಸವಿರುವ ಮುನೇಶ್ವರಾಚಾರಿ ಮಗ ಶಿವಶಂಕರಾಚಾರಿ ಎಂಬಾತ ಬೆಂಗಳೂರಿನ ಪ್ರಮಾನ ಪತ್ರ ಬೈಲಾ ಮತ್ತು ಯಾರದೋ ಓಟಿಪಿ ನಂಬರ್ ಗಳನ್ನು ನೀಡಿ ಅಧಿಕೃತ ಹಾಗೂ ಕಾನೂನು ಬಾಹಿರವಾಗಿ ಈಗಾಗಲೇ ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಸರಿ ಸುಮಾರು 30-40 ಸಂಘಗಳಹೆಸರಿನಲ್ಲಿ ಅಮಾಯಕ ಹಾಗೂ ಮುಗ್ಧ ಹೆಣ್ಣು ಮಕ್ಕಳನ್ನು ಪ್ರಚೋದಿಸಿ ವಂಚಿಸುವ ಮೂಲಕ ಬೇರೆ ಬೇರೆ ರೀತಿಯಲ್ಲಿ ಆಮಿಷಗಳನ್ನೊಡ್ಡಿ, ಹಣ ವಸೂಲಿ ಮಾಡುತ್ತಿರುವುದಲ್ಲದೇ ವೇಶ್ಯಾವಾಟಿಕೆಗೆ ದೂಡುತ್ತಿದ್ದಾನೆ.

ಅಧಿಕೃತವಲ್ಲದ ಕಲಾ ಪ್ರತಿಭಾನ್ವೇಷಣೆ ಸಂಸ್ಥೆ ಎಂಬ ಹೆಸರಿನಡಿ ಸರ್ಕಾರ ಮತ್ತು ಅಧಿಕಾರಿಗಳು ಯಾವುದೇ ಅನುಮತಿ ನೀಡದಿದ್ದರೂ ಕಾನೂನು ಬಾಹಿರವಾಗಿ ಸ್ವತಃ ಈತನೇ ಆಯಾಯ ಗ್ರಾಮದ ಮಹಿಳೆಯರ ಮನೆಗಳಿಗೆ ಹೋಗಿ ನಾನು ನಿಮಗೆ ಮಹಿಳಾ ಸಂಘಗಳನ್ನು ನೋಂದಣಿ ಮಾಡಿಸಿಕೊಡುವ ಮೂಲಕ ಸಂಘದ ಪ್ರತಿಯೊಬ್ಬ ಸದಸ್ಯರಿಗೂ ಸರ್ಕಾರ ಮತ್ತು ಅಧಿಕಾರಿಗಳ ಮಟ್ಟದಲ್ಲಿ ಹೊಲಿಗೆ ಯಂತ್ರ, ಸಬ್ಸಿಡಿ ಸಾಲ, ಆಶ್ರಯ ಮನೆಗಳು ಸಮುದಾಯ ಭವನಗಳು, ವೈದ್ಯಕೀಯ ಚಿಕಿತ್ಸೆ, ವಿದ್ಯಾವಂತ ನಿರುದ್ಯೋಗಿ ಮಹಿಳೆಯರಿಗೆ ಸರ್ಕಾರಿ ಕೆಲಸವಾಗಿದೆ.

ರಾಜಕೀಯ ಕ್ಷೇತ್ರದಲ್ಲಿ ಅವಕಾಸಗಳು ಹೀಗೆ ಹತ್ತಾರು ಸವಲತ್ತುಗಳನ್ನು ಕೊಡಿಸುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತೇನೆ ಮತ್ತು ಸಿನಿಮಾ ಧಾರವಾಹಿ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಿಕೊಡುತ್ತೇನೆ ಎಂದು ಹೇಳಿ ಸಂಘ ಸಂಸ್ಥೆಗಳನ್ನು ನಿಯಮ ಬಾಹಿರವಾಗಿ ಒಂದು ಸಂಘದಲ್ಲಿ 30ಜನ ಮಹಿಳೆಯರಂತೆ ಸೇರಿಸಿಕೊಂಡು ಪ್ರತಿಸಂಘದ ಸದಸ್ಯರಲ್ಲಿ ತಲಾ ಒಬ್ಬರಿಗೆ 1,200ರೂ.ಗಳಿಂದ 3,000ರೂ.ಗಳವರೆಗೆ ಅಕ್ರಮವಾಗಿ ಹಣ ವಸೂಲಿ ಮಾ‌ಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ಸಾಲದೆಂಬಂತೆ ಸಂಘದ ಮಹಿಳೆಯರು ಮತ್ತು ಸಂಘದ ಸದಸ್ಯರ ಮನೆಯಲ್ಲಿರುವ ಸುಮಾರು 13,14,15ರ ಪ್ರಾಯದ ಹೆಣ್ಣು ಮಕ್ಕಳನ್ನು ಪುಸಲಾಯಿಸಿ ಸಿನಿಮಾ ಕ್ಷೇತ್ರದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಅವರನ್ನು ನಂಬಿಸಿ ವಂಚಿಸಿದ್ದಾನೆ. ಅವರೊಟ್ಟಿಗೆ ದೈಹಿಕ ಸಂಪರ್ಕ ಬೆಳೆಸಿ ವೈಶ್ಯಾವಾಟಿಕೆಗೆ ದೂಡಿದ್ದು, ಆ ಮೂಲಕ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸಿದ್ದಾನೆ. ಈತ ನೀಡುವ ಯಾವುದೇ ಸಂಘಗಳನ್ನು ನೋಂದಾಯಿಸದೆ ನಿರಂತರವಾಗಿ ದಂಧೆ ಮತ್ತು ಮೋಸದ ಜಾಲದಲ್ಲಿ ತೊಡಗಿರುವ ದಂದೆಕೋರರನ್ನು ಕಾನೂನಿನ ವಶಕ್ಕೆ ಒಪ್ಪಿಸಿ ನೂರಾರು ಅಮಾಯಕ ಕುಟುಂಬಗಳನ್ನು ರಕ್ಷಿಸುವ ಮೂಲಕ ಈ ಜಾಲವನ್ನು ಭೇದಿಸಿ ಕಾನೂನಿನ ಘನತೆಯನ್ನು ಎತ್ತಿ ಹಿಡಿಯಬೇಕೆಂದು ಕೋರಿದ್ದಾರೆ.

Leave a Comment