ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆಟೋ ಚಾಲಕ ಬಂಧನ

ಬೆಂಗಳೂರು, ನ. 8-ಆಟೋದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ  ಚಾಲಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಮಲ್ಲೇಶ್ವರಂ ನಿವಾಸಿ ಚಂದ್ರು ಬಂಧಿತ ಆರೋಪಿ.

ನವೆಂಬರ್ 2 ರ ರಾತ್ರಿ 12 ಕ್ಕೆ ಶೇಷಾದ್ರಿಪುರಂ ಖಾಸಗಿ ಹೋಟೆಲ್ ಬಳಿಯಿಂದ ಬಾರ್ ನಲ್ಲಿ ಕೆಲಸ ಮುಗಿಸಿಕೊಂಡು, ದೆಹಲಿ ಮತ್ತು ಮಹಾರಾಷ್ಟ್ರ ಮೂಲದ ಇಬ್ಬರು ಯುವತಿಯರು ಬಿಟಿಎಲ್ ಲೇಔಟ್ ನಲ್ಲಿರುವ ತಮ್ಮ ನಿವಾಸಕ್ಕೆ ಆರೋಪಿ ಚಂದ್ರುವಿನ ಆಟೋದಲ್ಲಿ ತೆರಳಿದ್ದಾರೆ.

ಈ ವೇಳೆ ಬಿಟಿಎಮ್ ಲೇಔಟ್ ಕಡೆ ತೆರಳದೇ ಚಂದ್ರು, ಯಶವಂತಪುರ ಮಾರ್ಕೇಟ್ ಕಡೆ ಆಟೋದಲ್ಲಿ ಯುವತಿಯರನ್ನು ಕರೆದುಕೊಂಡು ಹೋಗಿದ್ದಾನೆ.  ಸ್ಥಳ ಬದಲಾವಣೆಯನ್ನು ಪ್ರಶ್ನಿಸಿದ್ದಕ್ಕೆ ಯಶವಂತಪುರ ಬಳಿ ಆಟೋ ನಿಲ್ಲಿಸಿದ ಚಂದ್ರು, ಯುವತಿಯರ ಮೈಮುಟ್ಟಿ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ.

ಗಾಬರಿಗೊಂಡ ಯುವತಿಯರು  ಕಿರುಚಾಡಲು ಆರಂಭಿಸುತ್ತಿದ್ದಂತೆ, ಸ್ಥಳದಲ್ಲೇ ಇಬ್ಬರನ್ನು ಬಿಟ್ಟು ಆಟೋ ಸಮೇತ ಪರಾರಿಯಾಗಿದ್ದ ಎಂದು ಆರೋಪಿಸಲಾಗಿದೆ.

ನಂತರ ಘಟನೆಯ ಕುರಿತು ಯುವತಿಯರು  ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ಜಾಡು ಹಿಡಿದ ಪೊಲೀಸರು ಆರೋಪಿ ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Comment