ಯುವತಿಗೆ ಬ್ಲಾಕ್‌ಮೇಲ್ ಆರೋಪಿ ಬಂಧನ

ಬೆಂಗಳೂರು, ಫೆ. ೨೩- ಯುವತಿಯ ಖಾಸಗಿ ವೀಡಿಯೋ ತೋರಿಸಿ, ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಕೆಆರ್ ಪುರಂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ದೀಪಕ್ ಎಂದು ಗುರುತಿಸಲಾಗಿದೆ. ದೀಪಕ್ ಯುವತಿಯೋರ್ವಳ ಖಾಸಗಿ ಫೋಟೋವನ್ನು ತೋರಿಸಿ, ಯುವತಿಗೆ ಹಣ ನೀಡುವಂತೆ ಒತ್ತಾಯಿಸುತ್ತಿದ್ದ ಮತ್ತು ಹಣ ನೀಡದಿದ್ದರೆ, ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಡುವುದಾಗಿ ಎದುರಿಸುತ್ತಿದ್ದ ಇದರಿಂದ ಬೇಸತ್ತ ಯುವತಿ ಕೆಆರ್ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ಈ ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಭಟ್ಟರ ಹಳ್ಳಿಯಲ್ಲಿರುವ ದೀಪಕ್ ರೂಂಗೆ ತೆರಳಿದ್ದಾಗ ನನ್ನ ಗಮನಕ್ಕೆ ಬಾರದಂತೆ ಸ್ನಾನ ಮಾಡುತ್ತಿದ್ದ ವೀಡಿಯೋವನ್ನು ಸ್ವೀಕರಿಸಿದ್ದಾರೆ. ಹಾಗೂ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡದಿರಲು 3ಲಕ್ಷ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ನೀಡಿದ್ದಳು.
ದೂರು ಸ್ವೀಕರಿಸಿರುವ ಪೊಲೀಸರು ಐಪಿಸಿ 354(ಸಿ) 509, 506, 66ಇ, ಐಟಿ ಆಕ್ಟ್ ಪ್ರಕರಣ ದಾಖಲಿಸಿಕೊಂಡಿದ್ದರು. ಆ ನಂತರ ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಹಾಗೂ ಪ್ರಕರಣಕ್ಕೆ ಸಂಬಂಧಿಸಿ, ಸಂಗ್ರಹಿಸಿದ ಸಾಕ್ಷಿ ಆಧಾರದ ಮೇಲೆ ದೀಪಕ್‌ನನ್ನು ಬಂಧಿಸಲಾಗಿದೆ. ಮೂಲತಃ ದೀಪಕ್ ಮಧ್ಯಪ್ರದೇಶದ ಬೇತುಲ್ ನಗರ ವಾಸಿಯಾಗಿದ್ದು, ಬೆಂಗಳೂರಿನಲ್ಲಿ ಬಿಎಸ್‌ಸಿ ಜನಟಿಕ್ಸ್ ಪದವಿ ವ್ಯಾಸಂಗ ಮಾಡಿದ್ದಾನೆ. ಮತ್ತು ವೈಟ್‌ಫಿಲ್ಡ್‌ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.
ಯುವತಿಯ ಖಾಸಗಿ ವೀಡಿಯೋ ಚಿತ್ರೀಕರಿಸಿ ಆಕೆಯನ್ನು ಹೆದರಿಸಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದ ಪೊಲೀಸರು ಆತನ ಕರೆಗಳ ಟವರ್ ಲೋಕೇಷನ್ ಆಧರಿಸಿ ಆತ ಇರುವ ಸ್ಥಳ ಪತ್ತೆಹಚ್ಚಿ ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್‌ನ್ನು ಸಹ ವಶಪಡಿಸಿಕೊಂಡಿದ್ದಾರೆ.
ವೈಟ್‌ಫೀಲ್ಡ್‌ನ ಡಿಸಿಪಿ ಎಂ.ಎನ್. ಅನುಚೇತ್, ಎ.ಸಿ.ಪಿ. ಮನೋಜ್ ಕುಮಾರ್, ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಅಂಬರೀಶ್, ನೇತೃತ್ವದಲ್ಲಿ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಮುಖ್ಯಪೇದೆ ನಾರಾಯಣಸ್ವಾಮಿ, ಯಾಸೀನ್ ಕರಬುಡ್ಡಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಂತ ವೈದ್ಯನ ಪ್ರಿಯತಮೆ ಆತ್ಮಹತ್ಯೆಗೆ ಶರಣು
ಬೆಂಗಳೂರು, ಫೆ. ೨೩- ದಂತವೈದ್ಯನೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡಿದ್ದ ರಾಜಾಜಿನಗರ ನಿವಾಸಿ ವೈದ್ಯ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೆ ತಾನೂ ಸಹ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬಿಎಂಟಿಸಿ ಬಸ್ ಚಾಲಕ ಸುಧೀಂದ್ರ ಅವರ ಪತ್ನಿ ಹರ್ಷಿತಾಳೆ ದಂತವೈದ್ಯ ರೇವಂತ್‌ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ನಿನ್ನೆ ಮನೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಶರಣಾಗಿದ್ದಾಳೆ. ಇದಕ್ಕೂ ಮೊದಲು ಪತಿ ಸುಧೀಂದ್ರ ವಿರುದ್ಧ ಆರೋಪಿಸಿ ಡೆತ್‌ನೋಟ್ ಸಹ ಬರೆದಿಟ್ಟಿದ್ದಾಳೆ. ಈ ಸಂಬಂಧ ಆರ್‌ಆರ್ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಹರ್ಷಿತಾಳೊಂದಿಗೆ ದಂತವೈದ್ಯ ಡಾ. ರೇವಂತ್ ಅಕ್ರಮ ಸಂಬಂಧ ಹೊಂದಿದ್ದ. ಪ್ರಿಯತಮೆಗಾಗಿ ತನ್ನ ಪತ್ನಿ ಕವಿತಾಳಿಗೆ ಇಂಜೆಕ್ಷನ್ ನೀಡಿ ಕತ್ತು ಸೀಳಿ ಹತ್ಯೆ ಮಾಡಿ ಕಳ್ಳತನದ ಪ್ರಕರಣವೆಂದು ಬಿಂಬಿಸಲು ಪ್ರಯತ್ನ ನಡೆಸಿದ್ದ. ಆನಂತರ ಹೆಂಡತಿಯ ಹತ್ಯೆ ಮಾಡಿದ ದಂತವೈದ್ಯ ಡಾ. ರೇವಂತ್, ಬೆದರಿ ಬಂಡಿಕೊಪ್ಪಲು ರೈಲ್ವೆ ಗೇಟ್ ಸಮೀಪ ಹಳಿಗಳ ಪಕ್ಕ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದ.
ರೈಲು ಹಳಿ ಬಳಿ ನಿಂತಿದ್ದ ವೈದ್ಯನ ಕಾರನ್ನು ನೋಡಿ ಪೊಲೀಸರು ರೇವಂತ್ ಎಂದು ಪತ್ತೆ ಹಚ್ಚಿದ್ದರು. ನಂತರ ಕಡೂರು ಪೊಲೀಸರು ಮಾಹಿತಿ ಕಲೆ ಹಾಕಿದ್ದರು.
ದಂತವೈದ್ಯನ ಆತ್ಮಹತ್ಯೆ ಹಾಗೂ ವೈದ್ಯನಿಂದಲೇ ಹತ್ಯೆಗೊಳಗಾದ ಆಕೆಯ ಪತ್ನಿ ಕವಿತಾಳ ಸಾವಿನಿಂದ ಬೆದರಿರುವ ವೈದ್ಯನ ಪ್ರಿಯತಮೆ, ಬೆಂಗಳೂರಿನ ರಾಜಾಜಿನಗರ ನಿವಾಸಿ ಹರ್ಷಿತಾ ಸಹ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಪ್ರಕರಣ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು.

 

 

 

Leave a Comment