ಯುವಜನಾಂಗಕ್ಕೆ ಗಾಂಧೀಜಿ ವಿಚಾರಗಳ ಪರಿಚಯಿಸಬೇಕು

ಚಿತ್ರದುರ್ಗ.ಸೆ.10; ಬಹಳಷ್ಟು ರಾಜ್ಯಗಳಲ್ಲಿ ಯುವಜನಾಂಗಕ್ಕೆ ಗಾಂಧೀಜಿಯವರ ವಿಚಾರಗಳಲ್ಲಿ ಕೆಲವು ತಪ್ಪು ಮಾಹಿತಿಗಳು ನುಸುಳಿಕೊಂಡು ಅವರನ್ನು ಯೋಚನೆಗೀಡು ಮಾಡುತ್ತಿವೆ, ಗಾಂಧೀಜಿಯವರ ಜೀವನ ಮತ್ತು ಅವರ ಕಾರ್ಯಕ್ರಮಗಳ ಬಗ್ಗೆ ಮಕ್ಕಳಿಗೆ, ಯುವಜನಾಂಗಕ್ಕೆ ತಿಳಿಸಿ ಕೊಡುವುದರಿಂದ, ಅವರ ಮುಂದಿನ ಜೀವನವನ್ನು ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಪರಿಸರವಾದಿ ಡಾ. ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು.
ಅವರು ಮುಂಬಯಿಯ ಕಿಶನ್ ಚಂದ್ ಚೆಲ್ಲಾರಾಂ ಕಾಲೇಜು ಮತ್ತು ಸೇವಾಗ್ರಾಮ, ಗಾಂಧೀಜಿ ಮತ್ತು ಕಸ್ತೂರ್ ಬಾ ಅವರ 15ಂ ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ, ಸಂಯುಕ್ತವಾಗಿ ಆಯೋಜಿಸಿದ್ದ ಗಾಂಧೀಜಿ ಅವರ ಬಗ್ಗೆ ಅಧ್ಯಯನ ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ “ಅರಿಯದ ಗಾಂಧೀಜಿಯವರ ಜೀವನ ಪರಿಶೋದನೆ ” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು. ಗಾಂಧೀಜಿ ಅವರ ಚಿಂತನೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡುವುದನ್ನು, ಇಂದಿನ ಯುವಜನಾಂಗಕ್ಕೆ ತಿಳಿಸಿಕೊಡಬೇಕಾಗಿದೆ, ಅವರ ವಿಚಾರಗಳನ್ನ ಅದ್ಯಯನ ಮಾಡಿ, ಸಮಗ್ರವಾಗಿ ಶೋಧಿಸಿ, ಒಳಹೊಕ್ಕು ನೋಡಿ, ಪರೀಕ್ಷಿಸಿ, ತಿಳಿಯದಿರುವ, ಗೊತ್ತಿಲ್ಲದ, ಪ್ರಸಿದ್ಧವಲ್ಲದ ಬಹಳಷ್ಟು ಸಿದ್ಧಾಂತಗಳನ್ನು ಕಾರ್ಯಗಳನ್ನು ಜನರಿಗೆ ತಲುಪಿಸಬೇಕಾಗಿದೆ. ಗಾಂಧೀಜಿಯವರ ಹುಟ್ಟಿ 15ಂನೇ ವರ್ಷದ ನೆನಪಿಗಾಗಿ, ಪ್ರತಿ ರಾಜ್ಯಗಳಲ್ಲಿ, ಪ್ರತಿ ಶಾಲಾ ಕಾಲೇಜುಗಳಲ್ಲಿ, ಗಾಂಧೀಜಿ ಅವರ ಚಿಂತನೆಗಳ ಬಗ್ಗೆ, ಅಧ್ಯಯನವನ್ನು ರೂಢಿಸಿ, ಕಾರ್ಯಕ್ರಮಗಳ ಮುಖಾಂತರ, ಹೆಚ್ಚು ಉಪಯುಕ್ತವಾದ ಮಾಹಿತಿಯನ್ನು, ಜನರಿಗೆ ತಲುಪಿಸಬೇಕಾಗಿದೆ ಎಂದರು.

Leave a Comment