ಯುವಜನತೆಯನ್ನು ಕಾಡುವ ಮಧುಮೇಹ

ಟೈಪ್ ೨ ಮಧುಮೇಹವು ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಇಂದು ಇದು ೩೦ರ ವಯೋಮಾನದ ಯುವ ಸಮುದಾಯದಲ್ಲಿ ಹೆಚ್ಚಾಗಿ ಕಾಣಲು ಆರಂಭಿಸಿದೆ.  ಬೊಜ್ಜು, ಥೈರಾಯ್ಡ್‌ಗೆ ಸಂಬಂಧಿಸಿದ ಸಮಸ್ಯೆ, ತಿನ್ನುವ ಅಸ್ವಸ್ಥತೆಗಳು, ಜೀವನಶೈಲಿ ಚಟುವಟಿಕೆಯ ಕೊರತೆ, ವಂಶಪಾರಂಪರ್‍ಯವಾಗಿ ಮಧುಮೇಹ ಇದಕ್ಕೆ ಕಾರಣವಾಗಿರಬಹುದು.

ಜನರಲ್ಲಿ ಸಾಮಾನ್ಯವಾಗಿ ಕಂಡುಬರುವ ಇತರೆ ರೀತಿಯ ಮಧುಮೇಹಗಳಿವೆ- ವಯಸ್ಕರಲ್ಲಿ ಸುಪ್ತ ಆಟೋ ಇಮ್ಯೂನ್ ಡಯಾಬಿಟೀಸ್, ನಿಧಾನವಾಗಿ ಪ್ರಗತಿಯಲ್ಲಿರುವ ಸ್ವಯಂ ನಿರೋಧಕ ಮಧುಮೇಹ, ಮತ್ತು ಯುವಕರ ಮೆಚುರಿಟಿ-ಆನ್ಸೆಟ್ ಮಧುಮೇಹ ರೂಪಾಂತರದಿಂದ ಸ್ಥಿತಿಯು ಏರಿಳಿತವಾಗುತ್ತದೆ. ಇನ್ಸುಲಿನ್ ಉತ್ಪಾದನೆಯ ಪ್ರಕ್ರಿಯೆಯನ್ನು ದುರ್ಬಲಗೊಳಿಸುವ ಜೀನ್‌ಗಳಲ್ಲಿ ಒಂದಾಗಿದೆ. ಈ ಕಾರಣದಿಂದಾಗಿ, ದೇಹವು ಆಹಾರದಿಂದ ಸಕ್ಕರೆಯನ್ನು ಬಳಸುವ ಮತ್ತು ಸಂಘ್ರಹಿಸುವ ವಿಧಾನದ ಮೇಲೆ ಪರಿಣಾಮ ಬೀರುತ್ತದೆ ಎಂದು  ಸಕ್ರ ವರ್ಲ್ಡ್ ಆಸ್ಪತ್ರೆಯ ಡಾ. ಸುಬ್ರತಾ ದಾಸ್ ತಿಳಿಸಿದ್ದಾರೆ.

 ಟೈಪ್೧ ಡಯಾಬಿಟಿಸ್ ಒಂದು ದೀರ್ಘಕಾಲದ ಸಮಸ್ಯೆಯ ಸ್ಥಿತಿಯಾಗಿದೆ. ಅಲ್ಲಿ ಮಕ್ಕಳು ಹುಟ್ಟಿನಿಂದ ದೋಶಯುಕ್ತ ಮೇದೋಜ್ಜೀರಕ ಗ್ರಂಥಿಯನ್ನು ಹೊಂದಿರುತ್ತಾರೆ. ಇದರಿಂದಾಗಿ ಈ ಗ್ರಂಥಿಯು ಕಡಿಮೆ ಅಥವಾ ಇನ್ಸುಲಿನ್ ಉತ್ಪಾದನೆಯನ್ನೇ ಮಾಡುವುದಿಲ್ಲ. ಈ ಸ್ಥಿತಿಗೆ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಸಾಮಾನ್ಯ ಜೀವನವನ್ನು ನಡೆಸಲು ಔಷಧಿ ಸಹಾಯ ಮಾಡುತ್ತದೆ. ಅವು ಇನ್ಸುಲಿನ್ ಅವಲಂಬಿತವಾಗಿವೆ ಮತ್ತು ಡಯಾಬಿಟಿಕ್ ಕೀಟೋಆಸಿಡೋಸಿಸ್ ಅನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಹೆಚ್ಚಾಗಿ ಹೊಂದಿವೆ.  ಡಯಾಬಿಟಿಕ್ ಕೀಟೋಆಸಿಡೋಸಿಸ್ ಗಂಭೀರ ಮಧುಮೇಹ ಸ್ಥಿತಿಯಾಗಿದ್ದು, ಇದಕ್ಕೆ ವೈದ್ಯಕೀಯ ನೆರವಿನ ಅಗತ್ಯವಿರುತ್ತದೆ. ಈ ಸ್ಥಿತಿಯಲ್ಲಿ ದೇಹವು ಕೀಟೋನ್ಸ್ ಎಂದೂ ಕರೆಯಲ್ಪಡುವ ಹೆಚ್ಚುವರಿ ರಕ್ತ ಆಮ್ಲವನ್ನು ಉತ್ಪಾದಿಸುತ್ತದೆ. ಹೊಟ್ಟೆ ನೋವು, ವಾಂತಿ, ಆಲಸ್ಯ, ಆಯಾಸ ಮತ್ತು ತಲೆ ಸುತ್ತುವಿಕೆ ಇದರ ಲಕ್ಷಣಗಳಾಗಿವೆ.

 ಆರಂಭಿಕ ಹಂತದಲ್ಲಿ ಇನ್ಸುಲಿನ್ ಚಿಕಿತ್ಸೆ

ಟೈಪ್ ೧ ಡಯಾಬಿಟಿಸ್ ಇರುವವರಿಗೆ ಇನ್ಸುಲಿನ್ ಚಿಕಿತ್ಸೆಯು ಚಿಕಿತ್ಸೆಯ ಕಡ್ಡಾಯ ಭಾಗವಾಗಿದೆ.

– ರೋಗಿಯು ಸಮಯಕ್ಕೆ ಸರಿಯಾಗಿ ಔಷಧಿ ಪಡೆಯುತ್ತಾನೆ ಎಂದು ಗಮನಿಸುವುದು

–  ಹೈಪೊಗ್ಲಿಸಿಮಿಯಾ- ತಲೆ ತಿರುಗುವಿಕೆ, ಬೆವರುವುದು ಮತ್ತು ಗೊಂದಲಗಳಂತಹ ಕಡಿಮೆ ಸಕ್ಕರೆ ಲಕ್ಷಣಗಳನ್ನು ಗಮನಿಸಿ. ರೋಗಿಗಳು ಈ ರೋಗಲಕ್ಷಣ ಅನುಭವಿಸುತ್ತಿದ್ದರೆ ತಕ್ಷಣ ಅವರಿಗೆ ಸರಳವಾದ ಸಕ್ಕರೆಯನ್ನು ನೀಡುವುದು ಸೂಕ್ತವಾಗಿರುತ್ತದೆ. .

– ವೈದ್ಯರ ಸಲಹೆಯಂತೆ ಆಹಾರ ಯೋಜನೆಗೆ ಬದ್ಧವಾಗಿರಿ.

Leave a Comment