ಯುವಕರ ಸಾಧನೆಯಿಂದ ವಿಜಯನಗರ ಸಾಮ್ರಾಜ್ಯ ಗತವೈಭವ

ಸಿರುಗುಪ್ಪ, ಸೆ.4: ಇಲ್ಲಿನ ಪ್ರತಿಯೊಬ್ಬ ಯುವಕರು ಸಾಧನೆ ಮಾಡಿದಾಗ ವಿಜಯನಗರ ಸಾಮ್ರಾಜ್ಯದ ಗತ ವೈಭವ ಮರಳಿ ಬರುತ್ತದೆ ಎಂದು ಬೆಂಗಳೂರಿನ ಪಶ್ಚಿಮ ವಲಯದ ಉಪಪೊಲೀಸ್ ಆಯುಕ್ತ ಶರಣ ರವಿ ಡಿ ಚನ್ನಣ್ಣನವರ್ ಐ.ಪಿ.ಎಸ್ ಯುವಕರಿಗೆ ಸ್ಪೂರ್ತಿಯ ಕರೆ ನೀಡಿದರು.

ನಗರದ ಲಕ್ಷ್ಮಿವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಬಸವಬಳಗ ಟ್ರಸ್ಟ್ ವತಿಯಿಂದ 2018ರ ವಚನ ಶ್ರಾವಣ ಕಾರ್ಯಕ್ರಮದಲ್ಲಿ 2018-19ನೇ ಸಾಲಿನ ರಾಜ್ಯಮಟ್ಟದ ಬಸವಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿ

ಮಾತನಾಡಿ, ಪ್ರಶಸ್ತಿ ಎನ್ನುವುದು ಲಕ್ಷ್ಮಣ ರೇಖೆ ಇದ್ದಂತೆ, ಬಸವಣ್ಣನವರ ಹೆಸರಿನಲ್ಲಿರುವ ಪ್ರಶಸ್ತಿಯನ್ನು ಪಡೆದ ನಂತರ ನನ್ನಲ್ಲಿನ ನಿರೀಕ್ಷೆಗಳು, ಜವಾಬಾರಿಗಳು ಹೆಚ್ಚಾಗುವುದರ ಜತೆಗೆ ಜನತೆಗೆ ನನ್ನ ಮೇಲೆ ಬರುವ ನಂಬಿಕೆಗೆ ತಕ್ಕಂತೆ ಕಾರ್ಯನಿರ್ವಹಿಸುವ ಜವಬ್ದಾರಿಯನ್ನು ಹೊತ್ತಿದ್ದೇನೆ. ಬಸವಾದಿ ಶರಣರ ಆಶಯದಂತೆ ವಿದ್ಯಾರ್ಥಿಗಳ, ದೀನದಲಿತರಿಗೆ ನೆರವಾಗುತ್ತೇನೆ. ವಿದ್ಯಾರ್ಥಿಗಳೇ ಒಬ್ಬ ಜಿಲ್ಲಾಧಿಕಾರಿಯಾದರೆ ಜಿಲ್ಲೆಯಲ್ಲಿ ಭೂಮಿ ಇಲ್ಲದ ಬಡವರಿಗೆ ಭೂಮಿಯನ್ನು ನೀಡಬಹುದು, ದೇವಸ್ಥಾನಗಳಿಗೆ ಅನುದಾನ ನೀಡಬಹುದು, ಹಸಿದವರಿಗೆ ಸಹಾಯಮಾಡಬಹುದು, ಶಿಕ್ಷಣದಿಂದ ವಂಚಿತರಿಗೆ ಶಿಕ್ಷಣ ಕೊಡಿಸಬಹುದು, ಜಿಲ್ಲಾಧಿಕಾರಿ ಒಬ್ಬ ರಾಜರಿದ್ದಂತೆ, ಇಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಗಳು ನಿರಂತರ ಶ್ರಮ ಪಟ್ಟಲ್ಲಿ ತಾಲೂಕಿನಲ್ಲಿ ಕನಿಷ್ಠ 10 ಯುವಕರು ಜಿಲ್ಲಾಧಿಕಾರಿಗಳಾಗಿ ಇತರರಿಗೆ ಮಾದರಿಯಾಗಬಹುದು ಎಂದು ವಿದ್ಯಾರ್ಥಿಗಳಲ್ಲಿ ಕನಸಿನ ಅಶೆಯನ್ನು ಬಿತ್ತಿದರು.

ಹಾಲ್ವಿಯ ಚರಣಗಿರಿ ಸಂಸ್ಥಾನ ಮಠದ ಅಭಿನವ ಮಹಾಂತಸ್ವಾಮಿಗಳು ಮಾತನಾಡಿ. ವಿದ್ಯಾರ್ಥಿಗಳು ಒಳ್ಳೆಯ ಪ್ರತಿಯೊಂದು ವಿಷಯವನ್ನು ತಿಳಿದುಕೊಳ್ಳಬೇಕು, ಯಾರು ಹೆಚ್ಚು ಪುಸ್ತಕವನ್ನು ಅಧ್ಯಯನ ನಡೆಸುತ್ತಾರೋ ಅವರು ಪ್ರತಿಬಾವಂತರಾಗುತ್ತಾರೆ. ಬಸವಾದಿ ಶರಣರು ನೈತಿಕವಾಗಿ, ಧಾರ್ಮಿಕವಾಗಿ ಬದುಕುವುದನ್ನು ತಿಳಿಸಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಬೆಳೆಯಿರಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ ಹಾಗೂ ಬಸವಬಳಗ ಟ್ರಸ್ಟ್‍ನ ಗೌರವಾಧ್ಯಕ್ಷ ಎನ್.ಜಿ.ಲಿಂಗಣ್ಣ, ತಾ.ಆದ್ಯಕ್ಷ ಡಾ.ಎನ್.ಎಂ.ಶಿವಪ್ರಕಾಶ್, ಟ್ರಸ್ಟಿನ ನಾಗನಗೌಡ, ವಿರುಪಾಕ್ಷಿಗೌಡ ಸೇರಿದಂತೆ ಅಕ್ಕನ ಬಳಗದ ಸದಸ್ಯರು ಇದ್ದರು.

ರವಿ ಡಿ ಚನ್ನಣ್ಣನವರ್ ಐ.ಪಿ.ಎಸ್‍ರವರಿಗೆ ಹಾಲ್ವಿ ಚರಣಗಿರಿ ಸಂಸ್ಥಾನ ಮಠದ ಅಭಿನವ ಮಹಾಂತಶ್ರೀ, ಗುರುಬಸವಮಠದ ಬಸವಭೂಷಣಶ್ರೀ ಹಾಗೂ ಬಸವಬಳಗದ ಗೌರವಾಧ್ಯಕ್ಷ ಎನ್.ಜಿ.ಲಿಂಗಣ್ಣ ಪ್ರಶಸ್ತಿ ಪ್ರದಾನ ಮಾಡಿದರು.

Leave a Comment