ಯುವಕರ ದುಷ್ಚಟಗಳ ಮುಕ್ತಿ ಅವಶ್ಯ- ದೇಸಾಯಿ

ಧಾರವಾಡ ಜ.25-: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದನೆ, ಅಕ್ರಮ ವಲಸಿಗರ ಹಾವಳಿಯೂ ಹೆಚ್ಚಿದೆ. ಅದಕ್ಕೆ ಕಡಿವಾಣ ಹಾಕಲು ಕೇಂದ್ರದ ನರೇಂದ್ರ ಮೋದಿಯವರ  ಸರಕಾರ ದಿಟ್ಟ ಹೆಜ್ಜೆ ಇರಿಸಿದೆ. ಅದರಲ್ಲೂ ವಿಶೇಷವಾಗಿ ಡ್ರಗ್ಸ್ ಮಾಫಿಯಾದಿಂದ ಯುವ ಜನತೆಯನ್ನು ಹೊರತರುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಧಾರವಾಡ ಗ್ರಾಮೀಣ ಶಾಸಕರಾದ ಅಮೃತ ದೇಸಾಯಿ  ಹೇಳಿದರು.
ಸರಕಾರಿ ಪದವಿ  ಕಾಲೇಜಿನಲ್ಲಿ  ಪ್ರಥಮ ಪದವಿ ತರಗತಿ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಿಸಿ ಮಾತನಾಡಿದರು. ಯುವ ಜನತೆಯ ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಪಂಜಾಬ್ ಸ್ಥಿತಿ ನಮಗೆಲ್ಲಾ ಗೊತ್ತಿದೆ. ನಾವು ಕಣ್ಣು ತೆರೆದು ನೋಡಬೇಕಿದೆ. ಅದರಲ್ಲೂ ಗ್ರಾಮಾಂತರ ಪ್ರದೇಶದಿಂದ ಬಂದ ವಿದ್ಯಾರ್ಥಿಗಳು ತಂದೆ ತಾಯಿಯ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಈ ಯೋಜನೆಯಲ್ಲಿ ಕಾಲೇಜಿನ 975  ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಿಸಲಾಗಿದೆ. ಕಾಲೇಜಿನಲ್ಲಿ ಅಧಿಕ ಸಂಖ್ಯೆಯಲ್ಲಿ ಗ್ರಾಮೀಣ ಭಾಗದವರಿದ್ದು, ತಾವು ಯಾರು ಮಾತಿಗೆ ಹಾಗೂ ದುಶ್ಚಟಕ್ಕೆ ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.ಅಲ್ಲದೆ, ಹೆತ್ತ ತಂದೆ ತಾಯಿ ಮತ್ತು ಊರಿಗೆ ಒಳ್ಳೆಯ ಹೆಸರು ತರಬೇಕು ಮತ್ತು  ತಮಗೆ ಏನೆ ತೊಂದರೆ ಕುಂದುಕೊರತೆ ಉಂಟಾದರೂ ನಾನು ನಿಮ್ಮ ಬೆನ್ನೆಲುಬಾಗಿದ್ದೇನೆ ಎಂದು ಅಭಯ ನೀಡಿದರು.ಜೊತೆಗೆ ಎಲ್ಲ ವಿದ್ಯಾರ್ಥಿಗಳು ಫೆಬ್ರವರಿ 15 ರಿಂದ 18 ನೇ ದಿನಾಂಕದ ವರೆಗೆ ಧಾರವಾಡದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕುಸ್ತಿಹಬ್ಬದಲ್ಲಿ ಪಾಲ್ಗೊಳ್ಳ5ಬೇಕು ಎಂದು ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಧಾರವಾಡ ಸರಕಾರಿ ಪ್ರಥಮ ದರ್ಜೆ ಕಾಲೇಜು ಪಾಂಶುಪಾಲರು ಪ್ರೊ. ಮಹ್ಮದ ಅಜಾಜ ಅಹ್ಮದ್,   ಕಾಲೇಜು ಶಿಕ್ಷಣ ಇಲಾಖೆ ಮುಖ್ಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ ಸತ್ಯನಾರಾಯಣ ಹಾಗು ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಕಾಲೇಜು ಸಿಬ್ಬಂದಿ   ಉಪಸ್ಥಿತರಿದ್ದರು .

Leave a Comment