ಯುವಕರು ಮತದಾನದ ಹಕ್ಕನ್ನು ಅರಿತುಕೊಳ್ಳಿ

ರಾಷ್ಟ್ರೀಯ ಮತದಾರರ ದಿನಾಚರಣೆ
ರಾಯಚೂರು.ಜ,25.- ಭಾರತದ ಮತದಾನದ ಹಕ್ಕನ್ನು ನಾಗರಿಕರು ಅರಿತುಕೊಳ್ಳಬೇಕೆಂದು ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬೈಲೂರು ಶಂಕರ್ ರಾಮ್ ಅವರು ಹೇಳಿದರು.
ಅವರಿಂದು ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಯುವಕರು ಆರಿತುಕೊಳ್ಳಬೇಕು.
ಜನರಿಂದ ಜನರಿಗಾಗಿ ನಿರ್ಮಿಸಲ್ಪಟ್ಟ ಪ್ರಜಾಪ್ರಭುತ್ವ ನಮ್ಮದಾಗಿತ್ತು ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಶಕ್ತಿಯೂ ನಮ್ಮ ದೇಶದ ನಾಗರಿಕರ ಕೈಯಲ್ಲಿದೆ.. 18 ವರ್ಷ ತುಂಬಿದ ಮೇಲೆ ನಮ್ಮ ದೇಶದಲ್ಲಿ ಮತ ಚಲಾಯಿಸುವ ಹಕ್ಕುನ್ನು ನೀಡಲಾಗಿದೆ. ದೇಶದಲ್ಲಿ ಶೇಕಡಾ 64 ರಷ್ಟು ಯುವಕರದ್ದು ನಿಮ್ಮ ಮತದಾನದಿಂದ ದೇಶವನ್ನಾಳಲು ಉತ್ತಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ ದೇಶವು ಅಭಿವೃದ್ಧಿಯಾಗುತ್ತದೆಂದರು.
ನಂತರ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಅವರು ಮಾತನಾಡುತ್ತಾ ಮತದಾರರ ದಿನಾಚರಣೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ದೇಶದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತಿದ್ದು, ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಶಕ್ತಿಯೂ ನಮ್ಮ ಸಂವಿಧಾನವು ನಾಗರಿಕರಿಗೆ ನೀಡಿದೆ. ಮತದಾರರು ಜಾತಿ ಮತ ಧರ್ಮ ಕುಲ ನೋಡದೆ ಮತ ಚಲಾಯಿಸಬೇಕು ಹಾಗೂ ದೇಶದಲ್ಲಿ 18 ವರ್ಷ ತುಂಬಿದ ಯುವಕರಿಗೆ ಮತದಾನದ ಹಕ್ಕನ್ನು ನೀಡಲಾಗಿದೆ. 18 ವರ್ಷ ತುಂಬಿದ ಮತಚಲಾಯಿಸುವ ಹಕ್ಕನ್ನು ಬೇರೆ ದೇಶಗಳಲ್ಲಿ ಇಲ್ಲ ಹಾಗೂ ಕೆಲವೊಂದು ದೇಶಗಳಲ್ಲಿ ಮಹಿಳೆಯರಿಗೂ ಮತದಾನದ ಹಕ್ಕಿಲ್ಲವೆಂದರು.
ನಗರ ಪ್ರದೇಶದಲ್ಲಿ ಶೇಕಡ 50 ರಷ್ಟು ಮಾತ್ರ ಮತದಾನವಾಗುತ್ತಿದೆ. ಬೇಸರದ ಸಂಗತಿಯಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಮತದಾನ ದಿನಾಚರಣೆ ಅಂಗವಾಗಿ ಮತದಾರರ ಗುರುತಿನ ಚೀಟಿಯನ್ನು ವಿತರಿಸಿ , ಜಿಲ್ಲೆಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ಸಿರವಾರ ತಾಲೂಕಿನ ಮಾಡಗಿರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನಿಸರ್ಗ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ದುರ್ಗೇಶ,ಸಂತೋಷ್ ಕಾಮಗೌಡ ,ತಹಸೀಲ್ದಾರ್ ಡಾ.ಹಂಪಣ್ಣ ಸಜ್ಜನ, ಡಿಡಿಪಿಐ ಎಂಎಸ್ ಗೋನಾಳ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment