ಯುವಕರು ದೇಶ ಕಟ್ಟುವ ಕೆಲಸ ಮಾಡಲು ಕರೆ-ಮದ್ನೂರ

ಧಾರವಾಡ ಫೆ.28-ಯುವ ಹಾಗೂ ಕ್ರೀಡಾ ಸಚಿವಾಲಯದ  ನೆಹರು ಯುವ ಕೇಂದ್ರ ಧಾರವಾಡ, ಕೆ. ಎಲ್. ಇ. ಮೃತ್ಯುಂಜಯ ಮಹಾವಿದ್ಯಾಲಯದ ರಾಷ್ರ್ಟೀಯ ಸೇವಾ ಯೋಜನಾ ಘಟಕಗಳು ಮತ್ತು ರಾಜ್ಯಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಕೆ. ಎಲ್. ಇ. ಮೃತ್ಯುಂಜಯ ಮಹಾವಿದ್ಯಾಲಯದಲ್ಲಿ ಸಂವಿಧಾನ ದಿನಾಚರಣೆ & ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ, ಯುವಜನರು ಸರಕಾರವು ಕೊಡಮಾಡುವ ಯೋಜನೆಗಳನ್ನು ಸರಿಯಾಗಿ ಸದುಪಯೋಗ ಮಾಡಿಕೊಂಡು, ದೇಶ ಕಟ್ಟುವ ಕೆಲಸದಲ್ಲಿ ತೊಡಗಬೇಕೆಂದು, ಖ್ಯಾತ ನ್ಯಾಯವಾದಿಗಳಾದ  ವೈ. ಪಿ. ಮದ್ನೂರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಡಾ. ವೀಣಾ ಬಿರಾದಾರ ಅವರು ನೆಲ ಜಲ ಸಂರಕ್ಷಣೆಯಲ್ಲಿ ಯುವ ಜನರ ಪಾತ್ರ,  ಡಾ. ಕೆ. ಎಫ್. ಪವಾರ ಅವರು ಸಂವಿಧಾನ ಕಿರು ಪರಿಚಯ, ಪ್ರದೀಪ ಮೇಲ್ಗಡೆ ಅವರು ಭಾರತ ಸರ್ಕಾರದ ಯೋಜನೆಗಳ ಕುರಿತು,  ಪಾಶ್ರ್ವನಾಥ ಅವರು ಆರೋಗ್ಯ ಮತ್ತ ಶಿಕ್ಷಣದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿ  ಎಮ್. ಗೌತಮ ರೆಡ್ಡಿ ಅವರು ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ವಿ.ವಿ. ಪಾಟೀಲ ಅವರು ವಹಿಸಿದ್ದರು. ಪ್ರಾರ್ಥನೆಯನ್ನು ಸುಷ್ಮಾ & ಅಶ್ವಿನಿ ಮಾಡಿದರು. ಎನ್. ಎಸ್. ಎಸ್. ಅಧಿಕಾರಿ ಡಾ. ತಾರಾ ಸರ್ವರನ್ನು ಸ್ವಾಗತಿಸಿದರು. ವಂದನಾರ್ಪಣೆಯನ್ನು  ಎನ್. ಎಸ್. ಎಸ್. ಅಧಿಕಾರಿ ಪ್ರೊ.ಜಿ. ವಿಶ್ವನಾಥ ನೇರವೇರಿಸಿದರು. ಪ್ರೊ. ಶಶಾಂಕ ಹಾದಿಮನಿ ಕಾರ್ಯಕ್ರಮ ನಿರೂಪಿಸಿದರು.

Leave a Comment