ಯುವಕನ ಸಂಶಯಾಸ್ಪದ ಸಾವು

 

ಕಲಬುರಗಿ,ನ.20- ಆಜಾದಪೂರ ಉಮರ ಕಾಲೋನಿಯ ನಿವಾಸಿ ಸೈಯದ ಜುನೈದ ಫೈಜನ (24) ಎಂಬ ಯುವಕ ಸಂಶಯಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಇದೊಂದು ಕೊಲೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

ಇದೇ ಬಡಾವಣೆಯ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ ಈ ಯುವಕನ ಮೇಲೆ ಹುಡುಗಿಯ ಕಡೆವರು ಹಲ್ಲೆ ಮಾಡಿದ್ದರು, ನಿನ್ನೆ ಮನೆಯಿಂದ ಹೊರಗೆ ಹೋಗಿ ಬರುವಷ್ಟರಲ್ಲಿ ತಮ್ಮ ಮಗ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾನೆ. ಇದೊಂದು ಕೊಲೆಯಾಗಿದೆ ಎಂಬ ಸಂಶಯಕ್ಕೆ ಹುಡಗಿಯ ಮನೆಯರು ಯುವಕನ ಮನೆಯ ಎದುರು ತಿರುಗಾಡಿರುವುದು ಶಂಕೆಗೆ ಎಡೆಮಾಡಿಕೊಡುತ್ತಿದೆ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಮೃತ ಯುವಕನ ತಂದೆ ಸೌಧಿಯಲ್ಲಿದ್ದಾನೆಂದು ಹೇಳಲಾಗುತ್ತಿದೆ. ಗುಲಬರ್ಗಾ ವಿಶ್ವವಿದ್ಯಾಲಯದ ಪೊಲೀಸರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶಿಲನ ನಡೆಸಿದ್ದಾರೆ. ಮೃತ ಕುಟುಂಬದವರು ನೀಡಲಿರುವ ದೂರನ್ನು ದಾಖಲಿಸಿ ತನಿಖೆ ಕೈಗೊಳ್ಳುವುದಾಗಿ ಅವರು ಹೇಳುತ್ತಿದ್ದಾರೆ..

Leave a Comment