ಯುವಕನ ವಿರುದ್ಧ ಪೋಕ್ಸೋ ಕೇಸ್! ಲಾಡ್ಜ್‌ನಲ್ಲಿ ಜೋಡಿ ಪತ್ತೆ ಪ್ರಕರಣ

ಮಂಗಳೂರು, ಅ.೨೩- ಪುತ್ತೂರಿನ ವಸತಿಗೃಹವೊಂದರಲ್ಲಿ ಭಿನ್ನಕೋಮಿನ ಜೋಡಿ ಉಳಿದಿರುವ ಬಗ್ಗೆ ಮಾಹಿತಿ ಪಡೆದಿದ್ದ ಬಜರಂಗದಳ ಸಂಘಟನೆ ದಾಳಿ ನಡೆಸಿದ್ದ ಪ್ರಕರಣದಲ್ಲಿ ಯುವಕನ ವಿರುದ್ದ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಮುಂಬೈ ನಿವಾಸಿ ಅಬ್ದುಲ್ ತಯ್ಯದ್(೧೯) ಎಂಬಾತನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ನಗರದಲ್ಲಿ ವಾಸ್ತವ್ಯ ಹೊಂದಿರುವ ರಾಜಸ್ಥಾನ ಮೂಲದ ಕಾಲೇಜು ವಿದ್ಯಾರ್ಥಿನಿಯ ಜೊತೆ ಮುಂಬಯಿಯ ತಯ್ಯದ್ ಸ್ನೇಹ ಬೆಳೆಸಿದ್ದು ಆಕೆಯ ಜೊತೆ ಪುತ್ತೂರಿನ ವಸತಿಗೃಹದಲ್ಲಿ ಉಳಿದುಕೊಂಡಿದ್ದ. ಅನ್ಯಕೋಮಿನ ಜೋಡಿ ಲಾಡ್ಜ್‌ನಲ್ಲಿ ಉಳಿದಿರುವ ಬಗ್ಗೆ ಮಾಹಿತಿ ಪಡೆದ ಬಜರಂಗದಳ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿದ್ದರು. ಜೋಡಿಯನ್ನು ವಶಕ್ಕೆ ಪಡೆದ ಪೊಲೀಸರು ಯುವತಿಯ ಹೆತ್ತವರನ್ನು ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಅರೋಪಿ ತಯ್ಯದ್ ಕಳೆದ ಜೂನ್ ತಿಂಗಳಿನಲ್ಲಿ ಪುತ್ತೂರಿಗೆ ಆಗಮಿಸಿ ಅದೇ ಹೊಟೇಲ್‌ನಲ್ಲಿ ಯುವತಿ ಜೊತೆ ತಂಗಿದ್ದ. ಯುವತಿ ತನ್ನನ್ನು ರೂಮಿಗೆ ಕರೆಸಿದ್ದ ತಯ್ಯದ್ ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ದೂರಿದ್ದಾಳೆ. ಎರಡನೇ ಬಾರಿ ಯುವತಿಯನ್ನು ಪುತ್ತೂರಿನ ಸ್ಥಳೀಯ ಲಾಡ್ಜ್‌ಗೆ ಬರಹೇಳಿದ್ದ ಆತ ಮತ್ತೆ ತನ್ನ ಇಚ್ಛೆಗೆ ವಿರುದ್ದ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

Leave a Comment