ಯುರೋಪ್ ಸಂಸತ್‌ನಲ್ಲಿ ಗಮನ ಸೆಳೆದ ಕನ್ನಡತಿ ಡಾ.ಸ್ನೇಹಾ

ನಿಜಕ್ಕೂ ಇದು ಇಡೀ ನಾಡೇ ಹೆಮ್ಮೆ ಪಡುವ ಸಂಗತಿ. ಬೆಂಗಳೂರಿನ ಯುವ ಉದ್ಯಮಿ ಡಾ.ಸ್ನೇಹಾ ರಾಕೇಶ್ ಯುರೋಪ್‌ನ ಸಂಸತ್‌ನಲ್ಲಿ ಕನ್ನಡದ ಧ್ವನಿ ಮೊಳಗಿಸಿ ಬಂದಿದ್ದಾರೆ.

ಇತ್ತೀಚೆಗೆ ಬೆಲ್ಜಿಯಂನ ಬು ಸೆಲ್ಸ್‌ನಲ್ಲಿರುವ ಯೂರೋಪ್ ಪಾರ್ಲಿಮೆಂಟ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಯುರೋಪ್ ಇಂಡಿಯಾ ಬ್ಯೂಸಿನೆಸ್ ಲೀಡರ್ಸ್ ಕಾನ್ಫೆರೆನ್ಸ್‌ನಲ್ಲಿ ಗ್ರಾಮೀಣ ಉದ್ಯಮಶೀಲತೆಯ ಕುರಿತಾಗಿ ತಮ್ಮ  ಆಲೋಚನೆಗಳನ್ನ ಪ್ರಸ್ತುತ ಪಡಿಸುವ ಮೂಲಕ ಅಪರೂಪದ ಸಾಧನೆಗೈದ  ಮೊದಲ ಭಾರತೀಯರು ಎನಿಸಿಕೊಂಡು ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದಾರೆ.

vaividya-sneha1ಯುರೋಪಿಯನ್ ದೇಶಗಳ ನಡುವೆ ವಿಶೇಷವಾಗಿ ಉದ್ಯಮಿಗಳು ಹಾಗೂ ಸಣ, ಮಾಧ್ಯಮ ಉದ್ಯಮಿಗಳಿಗೆ ಏಕೀಕೃತ ವೀಸಾ ನೀತಿ ನಿಯಮಾವಳಿಗಳಿದ್ದರೆ ಅವರು ಇಲ್ಲಿನ ಮಾರುಕಟ್ಟೆಯನ್ನ ಅರ್ಥಮಾಡಿಕೊಳ್ಳಲು, ಅಭ್ಯಾಸ ಮಾಡಲು ಮತ್ತು ಮೌಲ್ಯಮಾಪನ ಮಾಡಲು ಹೆಚ್ಚು ಸಹಕಾರಿಯಾಗಲಿದೆ. “ದುಬಾರಿ ನಿರ್ವಹಣಾ ವೆಚ್ಚ, ಕಟ್ಟುನಿಟಿ ನ ಕಾರ್ಮಿಕ ಮಾರುಕಟ್ಟೆಗಳು, ತೆರಿಗೆಗಳು ಮತ್ತು ಕಠಿಣ ನಿಬಂಧನೆಗಳಿಗೆ ಪ್ರಾರಂಬಿಕ ಹಂತಗಳಲ್ಲಿಯೇ ಸಹಾಯ ಬೇಕಿದೆ. ಸಣ , ಮಧ್ಯಮ ಉದ್ಯಮಿಗಳು ಮತ್ತು ವಾಣಿಜ್ಯೋದ್ಯಮಿಗಳಿಗೆ ಹಣ ಹೂಡಲು ಆರಂಭಿಕ ಹಂತಗಳಲ್ಲಿಯೇ ಐರೋಪ್ಯ ಬ್ಯಾಂಕುಗಳಿಂದ ಹೂಡಿಕೆಗೆ ಸುಲಭ ಪ್ರಕ್ರಿಯೆ ಹಾಗೂ ಬೆಂಬಲ ದೊರಕಬೇಕು.

ಬಾಂಧವ್ಯ ವೃದ್ಧಿಗಾಗಿ ಅಧಿಕ ಸಂಖ್ಯೆಯ ಶೃಂಗಸಭೆಗಳು, ವಿಚಾರ ಸಂಕಿರಣಗಳು ಹಾಗೂ ಭಾರತದ ೧ನೇ ಹಂತ, ೨ನೇ ಹಂತದ ನಗರಗಳಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಯೂರೋಪಿನ ಬಗೆಗೆ ಅರಿವು ಮೂಡಿಸುವುದರಿಂದ ನಿಜಕ್ಕೂ ಹೆಚಿ ನ ಸಹಾಯವಾಗಲಿದೆ ಎಂದು ಸ್ನೇಹಾ ತಿಳಿಸಿದರು. ಹಾಗೇ ಭಾರತದಲ್ಲಿ ವ್ಯಾಪಾರೋದ್ಯಮವನ್ನ ಸ್ಥಾಪಿಸಲು ಮಾರ್ಗದರ್ಶಕರು ಹಾಗೂ ವಕೀಲರ ಸಲಹೆ  ಪಡೆಯುವುದು ಜಾಣ ನಡೆಯಾಗುತ್ತದೆ. ಇದರಿಂದ ಹಲವು ಅಡೆತಡೆಗಳ ನಿವಾರಣೆಯಾಗುವುದರ ಜೊತೆಗೆ ಖರ್ಚು ಕಡಿಮೆಯಾಗಲಿದೆ ಎಂದರು.

vaividya-sneha

ವಿಶೇಷವಾಗಿ ಭಾರತ ವೈವಿಧ್ಯಮಯ ಸಂಸ್ಕೃತಿಯುಳ್ಳದ್ದಾಗಿದ್ದರಿಂದ ಇಲ್ಲಿ ವೈಯಕ್ತಿಕ ಸಂಬಂಧಗಳು ಹೆಚಿ ನ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಸಾಂಸ್ಕೃತಿಕ ಭಿನ್ನತೆಯನ್ನ  ನಾವು ನಕಾರಾತ್ಮಕವಾಗಿ ಚಿಂತಯಿಸುವುದಕ್ಕಿಂತ ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ಈ ದೃಷ್ಟಿಕೋನವು ಎರಡು ದೇಶಗಳಿಗೆ ಲಾಭದಾಯಕವಾಗಿದ್ದು, ವ್ಯವಹಾರದ ನಿಟ್ಟಿನಲ್ಲಿಯೂ ನೆರವಾಗಲಿದೆ ಎಂದು ಸ್ನೇಹಾ ತಿಳಿಸಿದರು.

vaividya-sneha2

ನಾಡಿನ ಚಿಕ್ಕ ಗ್ರಾಮದಿಂದ ಬಂದಿರುವ ಯುವ ಉದ್ಯಮಿ ಅಕರ್ಮಾಕ್ಸ್ ಸಂಸ್ಥೆ ಮೂಲಕ ಡಾ.ಸ್ನೇಹಾ ರಾಕೇಶ ಇಯುಇಂಡಿಯಾ ೪೦ರ ಪಟ್ಟಿಯಲ್ಲಿ ಸ್ಥಾನ ಗಿಟಿ ಸಿಕೊಂಡಿದ್ದಾರೆ.

ಇವರು ತಮ್ಮ ೧೯ನೇ ವಯಸ್ಸಿಗೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಉದ್ಯೋಗ  ಆರಂಭಿಸಿದರು.  ೨೦೧೮ರಲ್ಲಿ ನಿರುದ್ಯೋಗ  ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ತಮ್ಮದು ಕೊಡುಗೆ ಇರಲಿ ಎಂಬ ಕಾರಣದಿಂದ ಸಮಗ್ರಾಭಿವೃದ್ಧಿ ಟ್ರಸ್ಟ್ ಆರಂಭಿಸಿ ಯುವಜನತೆಗೆ ನೆರವಾಗಿದ್ದಾರೆ.

Leave a Comment