ಯುಪಿ  ಅತ್ಯಾಚಾರ ಪ್ರಕರಣ:  ಶಾಸಕರ ಸೋದರ ಸಂಬಂಧಿ ಬಂಧನ

ಭಾದೋಹಿ, ಫೆ 22 -ಜ್ಞಾನಪುರ ನಗರದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರ ಸೋದರ ಸಂಬಂಧಿಯನ್ನು ಶನಿವಾರ ಬಂಧಿಸಲಾಗಿದೆ.

ಈ ಪ್ರಕರಣದಲ್ಲಿ ಒಟ್ಟು  ಏಳು ಮಂದಿ ಆರೋಪಿಗಳಾಗಿದ್ದಾರೆ.ಬಂಧನದ ನಂತರ, ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರಾಮ್ ಬದನ್ ಸಿಂಗ್ ಮಾತಾನಾಡಿ,  ತನಿಖೆಯ ಸಮಯದಲ್ಲಿ, ಶಾಸಕರು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ .

ಭಾದೋಹಿ ರವೀಂದ್ರನಾಥ ತ್ರಿಪಾಠಿ, ಜಿಲ್ಲಾ ಪಂಚಾಯತ್ ಸದಸ್ಯ ಸಚಿನ್ ತ್ರಿಪಾಠಿ, ದೀಪಕ್ ತಿವಾರಿ, ಪ್ರಕಾಶ್ ತಿವಾರಿ, ನಿತೇಶ್ ಮತ್ತು ಶಾಸಕರ ಸೋದರ ಸಂಬಂಧಿ  ಸಂದೀಪ್ ತ್ರಿಪಾಠಿ ಮತ್ತು ಓರ್ವ ಚಂದ್ರಭೂಷಣ ತಿವಾರಿ ವಿರುದ್ಧ ಭಡೋಹಿ ಕೊಟ್ವಾಲಿ ವಿರುದ್ಧ  ಪ್ರಕರಣ ದಾಖಲಿಸಲಾಗಿದೆ ಎಂದರು.

ಜನವರಿ 10 ರಂದು ಎಸ್‌ಪಿಗೆ ಕಳುಹಿಸಿದ ದೂರಿನಲ್ಲಿ, ವಾರಣಾಸಿಯ ಮಹಿಳೆಯೊಬ್ಬರು ಸಂದೀಪ್ ಅವರು 2014 ರಿಂದ ಮದುವೆಯ ನೆಪದಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದು  ಒಮ್ಮೆ ಗರ್ಭಪಾತಕ್ಕೂ ಒಳಗಾಗಿರುವುದಾಗಿ  ಅವರು ಆರೋಪಿಸಿದ್ದರು.

2017 ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶಾಸಕ ಸೇರಿದಂತೆ ಹಲವರು  ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದೂ ದೂರಿನಲ್ಲಿ  ಆರೋಪಿಸಲಾಗಿದೆ.

ಇದೆ 9 ರಂದು ಸಂದೀಪ್ ಅವರನ್ನು ಮದುವೆಯಾಗುವಂತೆ ಕೇಳಿದಾಗ ಆತ ನಿರಾಕರಿಸಿದ್ದು,  ಜೊತೆಗೆ   ಬೆದರಿಕೆ ಹಾಕಿದ್ದ ಎಂದೂ ಸಂತ್ರಸ್ತೆ ದೂರಿನಲ್ಲಿ  ಆರೋಪಿಸಿದ್ದಾರೆ.

 

Leave a Comment