ಯುಪಿಯಲ್ಲಿ ಪಾಕ್  ಐಎಸ್‌ಐ ಏಜೆಂಟ್   ಬಂಧನ

ವಾರಣಾಸಿ, ಜ 20- ಉತ್ತರ ಪ್ರದೇಶ  ಭಯೋತ್ಪಾದನಾ ನಿಗ್ರಹ ದಳ

 ಪಕ್ಕದ ಚಂದೌಲಿ ಜಿಲ್ಲೆಯ ಪರವಾ ಪ್ರದೇಶದಿಂದ ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಏಜೆಂಟನೊಬ್ಬನನ್ನು ಬಂಧಿಸಿದೆ.

ಮುಗಲ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ಚೌರ್ಹತ್ ಮೂಲದ ಆರೋಪಿ ರಶೀದ್ ಅಹ್ಮದ್ ಎಂಬಾತ   2018 ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿರುವ ಅವರ ಚಿಕ್ಕಮ್ಮನ ನಿವಾಸಕ್ಕೆ ಭೇಟಿ ನೀಡಿದ್ದು,  ಅಲ್ಲಿ ಆತ  ಐಎಸ್ಐ ಜೊತೆ ಸಂಪರ್ಕದಲ್ಲಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅದರ ನಂತರ ಮಾರ್ಚ್ 2019 ರಿಂದ ರಶೀದ್  ಸೇನಾ ಪ್ರದೇಶಗಳು ಸೇರಿದಂತೆ ಭಾರತದ ಪ್ರಮುಖ ಸ್ಥಳಗಳ ಚಿತ್ರಗಳನ್ನು ಮತ್ತು ವೀಡಿಯೊಗಳನ್ನು ಕಳುಹಿಸುತ್ತಿದ್ದು,  ಪಾಕಿಸ್ತಾನಕ್ಕೆ ಕಳುಹಿಸಿದ ಇಂತಹ ಹಲವು  ಚಿತ್ರಗಳು ಮತ್ತು ದಾಖಲೆಗಳನ್ನೂ ಎಟಿಎಸ್ ವಶಪಡಿಸಿಕೊಂಡಿದೆ.

ಹೆಚ್ಚಿನ ವಿಚಾರಣೆಗಾಗಿ ಎಟಿಎಸ್ ರಶೀದ್‌ನನ್ನು ಲಕ್ನೋಗೆ ಕರೆದೊಯ್ಯಲಾಗಿದೆ ಮತ್ತು ಮಿಲಿಟರಿ ಇಂಟೆಲಿಜೆನ್ಸ್ ಮತ್ತು ಐಬಿ ಕೂಡ ಆತನ  ವಿಚಾರಣೆ ಮಾಡುತ್ತಿದೆ.

ಜೋಧಪುರದಲ್ಲಿ ಸೇನಾ ಚಳುವಳಿಯ ಬಗ್ಗೆ ರಶೀದ್ ಪ್ರಮುಖ ಮಾಹಿತಿ ನೀಡಿದ್ದು, ವಾರಣಾಸಿ ಕಂಟೋನ್ಮೆಂಟ್ ಮತ್ತು ಅಮೆಥಿಯ ಸಿಆರ್‌ಪಿಎಫ್ ಕೇಂದ್ರದ ಮಾಹಿತಿಯನ್ನು ಐಎಸ್‌ಐಗೆ ನೀಡಿದ್ದಾನೆ  ಎಂದು ಮೂಲಗಳು ತಿಳಿಸಿವೆ. ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ವಾಟ್ಸಾಪ್ ಮೂಲಕ ಕಳುಹಿಸಲಾಗಿದೆ.

ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳನ್ನು ತಯಾರಿಕೆ ಕೆಲಸ  ಮಾಡುವ ರಶೀದ್, 2017 ರಲ್ಲಿ ಎರಡು ಬಾರಿ ಪಾಕಿಸ್ತಾನಕ್ಕೆ ಹೋಗಿದ್ದ,  ಪಾಕಿಸ್ತಾನ ಹ್ಯಾಂಡ್ಲರ್ ರಶೀದ್‌ಗೆ ಎರಡು ಸಿಮ್ ಕಾರ್ಡ್‌ಗಳನ್ನು ನೀಡಿದ್ದರು. ಐಎಸ್‌ಐ ಪೇಟಿಎಂ ಮೂಲಕ ರಶೀದ್‌ಗೆ ಕಳುಹಿಸಿದ 5 ಸಾವಿರ  ರೂಗಳನ್ನು  ವಶಪಡಿಸಿಕೊಳ್ಳಲಾಗಿದೆ ಎಂದೂ  ಮೂಲಗಳು ಹೇಳಿವೆ.

Leave a Comment