ಯುಜಿಸಿ ಸೂಚನೆ ಮೀರಿ ನೇಮಕಾತಿ ಪ್ರಕ್ರಿಯೆ ಸುಪ್ರೀಂ ಕೋರ್ಟು ತೀರ್ಪಿಗೆ ಬದ್ಧವಾಗಿ ವಿಎಸ್‍ಕೆ ವಿವಿಯಲ್ಲಿ ಭೋಧನಾ ಸಿಬ್ಬಂದಿ ಸಂದರ್ಶನ

ಬಳ್ಳಾರಿ,ಸೆ.6: ಸುಪ್ರೀಂಕೋರ್ಟ್ ಆದೇಶಕ್ಕೆ ಬದ್ಧರಾಗಿರ ಬೇಕು ಎಂಬ ಷರತ್ತು ವಿಧಿಸಿ ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ನಿನ್ನೆಯಿಂದ ಭೋಧನಾ ಸಿಬ್ಬಂದಿಯ ನೇಮಕಾತಿಯ ಸಂದರ್ಶನ ಪ್ರಕ್ರಿಯೆ ಆರಂಭಗೊಂಡಿದೆ.

ವಿಭಾಗವಾರು ಮೀಸಲಾತಿ ಸಂಬಂಧ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರ ಮತ್ತು ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದೆ. ಈ ಅರ್ಜಿ ಇತ್ಯರ್ಥ

ವಾಗುವವರೆಗೂ ದೇಶದ ಎಲ್ಲಾ ವಿಶ್ವವಿದ್ಯಾಲಯದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ, ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು ಕಳೆದ ಜುಲೈ 18ರಂದು ಪತ್ರ ಬರೆದಿದೆ. ಆದರೂ ಇಲ್ಲಿನ ವಿವಿಯ ಕುಲಪತಿಗಳು ನೇಮಕಾತಿ ಸಂಬಂಧ 17 ಪ್ರಾಧ್ಯಾಪಕರು, 28 ಸಹ ಪ್ರಾಧ್ಯಾಪಕರು ಮತ್ತು 44 ಸಹಾಯಕ ಪ್ರಾಧ್ಯಾಪಕರ ಸಂದರ್ಶನ ಮತ್ತು ಪ್ರಮಾಣ ಪತ್ರಗಳ ಪರಿಶೀಲನೆ ಕಾರ್ಯವನ್ನು ಆರಂಭಿಸಿರುವುದು ಹಲವರನ್ನು ಹು8ಬ್ಬೇರಿಸುವಂತೆ ಮಾಡಿದೆ.

ಈ ಹುದ್ದೆಗಳ ನೇಮಕಾತಿಗೆ ಜೂನ್ 14ರಂದು ಅಧಿಸೂಚನೆ ಪ್ರಕಟಿಸಿತ್ತು. ಇದೇ ಹುದ್ದೆಗಳಿಗೆ ಕಳೆದ, ಎರಡು ವರ್ಷಗಳಲ್ಲಿ ವಿಶ್ವವಿದ್ಯಾಲಯ ಪ್ರಕಟಿಸಿದ್ದ ನಾಲ್ಕನೇ ಅಧಿಸೂಚನೆ ಇದಾಗಿದೆ.

ಸುಪ್ರೀಂ ಕೋರ್ಟಿನಲ್ಲಿರುವ ಪ್ರಕರಣದ ಇತ್ಯರ್ಥ ಯಾವಾಗ ಆಗುವುದೋ ತಿಳಿಯಲ್ಲ. ವಿವಿಯಲ್ಲಿ ಸಿಬ್ಬಂದಿ ಕೊರತೆ ಇದೆ. ನ್ಯಾಕ್ ಸಮಿತಿಗೆ ಸಿಬ್ಬಂದಿ ನೇಮಕಾತಿ ಬಗ್ಗೆ ವಿವರ ತಿಳಿಸಬೇಕಿದೆ. ಅದಕ್ಕಾಗಿ ಈಗ ನೇಮಕಾತಿಗೆ ಸಂದರ್ಶನ ನಡೆಸುವವರಿಗೆ ಸುಪ್ರೀಂಕೋರ್ಟ್ ಆದೇಶಕ್ಕೆ ಬದ್ಧರಾಗಿರ ಬೇಕು ಎಂಬ ಷರತ್ತು ವಿಧಿಸಿ ನೇಮಕಾತಿ ಆದೇಶ ನೀಡಲಿದೆ ಎಂದು ಕುಲಪತಿ ಪೆÇ್ರ.ಎಂ.ಎಸ್. ಸುಭಾಷ್ ಹೇಳುತ್ತಾರೆ.

Leave a Comment