ಯುಎಸ್ ಓಪನ್ : ಸೆಮಿಗೆ ಸಾನಿಯಾ ಜೋಡಿ, ವೀನಸ್ ಔಟ್

ನ್ಯೂಯಾರ್ಕ್, ಸೆ.೮: ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ವಿಭಾಗದಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಚೀನಾದ ಶುಯಿ ಪೆಂಗ್ ಜೋಡಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ.
ಒಂದು ಗಂಟೆ ಹಾಗೂ ೫೬ ನಿಮಿಷಗಳ ಕಾಲ ನಡೆದ ಏಕಪಕ್ಷಿಯ ಹೋರಾಟದಲ್ಲಿ ನಾಲ್ಕನೇ ಶ್ರೇಯಾಂಕಿತ ಸಾನಿಯಾ-ಶುಯಿ ಜೋಡಿ, ಹಂಗೇರಿಯಾದ ತಿಮೇವೋ ಬಾಬೋಸ್ ಹಾಗೂ ಚೆಕ್ ಗಣರಾಜ್ಯದ ಆಂಡ್ರಿಯಾ ಹೆಲ್ನಿಕೊವಾ ಜೋಡಿಯನ್ನು ೭-೬, ೬-೪ ನೆರ ಸೆಟ್‌ಗಳಲ್ಲಿ ಸೋಲಿಸಿ ಮುನ್ನಡೆದರು.
ಮರ್ಟಿನಾ ಹಿಂಗಿಸ್- ವೈ. ಚೆನ್ ಹಾಗೂ ಎಚ್.ಎ.ಚಾನ್ -ಎಸ್. ಝಂಗ್ ಜೋಡಿ ನಡುವೆ ನಡೆಯುವ ಮತ್ತೊಂದು ಕ್ವಾರ್ಟರ್ ಪಂದ್ಯದಲ್ಲಿನ ವಿಜಯಿಗಳನ್ನು ಸಾನಿಯಾ ಜೋಡಿ ಸೆಮಿಫೈನಲ್‌ನಲ್ಲಿ ಎದುರಿಸಲಿದ್ದರೆ.

ಫೈನಲ್ ಫೈಟ್‌ನಿಂದ ವೀನಸ್ ಔಟ್: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯೆನಿಸಿದ್ದ ವೀನಸ್ ವಿಲಿಯಮ್ಸ್ ಸೆಮಿ ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ. ಸೋಲನೆ ಸ್ಟೀಫನ್ಸ್ ವಿರುದ್ಧ ೬-೧, ೦-೬, ೭-೫ ಸೆಟ್‌ಗಳ ಅಂತರದಲ್ಲಿ ಎಡವಿದ ವೀನಸ್, ತೀವ್ರ ನಿರಾಸೆ ಅನುಭವಿಸಿದರು. ಮತ್ತೊಂದು ಸೆಮಿಪೈನಲ್‌ನಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್ ತಮ್ಮ ದೇಶದವರೇ ಆದ ಕೊಕೊ ವಾಂಡೆವೆಘೆ ವಿರುದ್ಧ ೬-೧, ೬-೨ ನೇರ ಸೆಟ್ ಅಂತರದಲ್ಲಿ ಸುಲಭವಾಗಿ ಗೆದ್ದು ಪ್ರಶಸ್ತಿ ಸುತ್ತು ತಲುಪಿದ್ದಾರೆ.

ಯುಎಸ್ ಫೈನಲ್: ಈ ಬಾರಿಯ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮಹಿಳಾ ವಿಭಾಗದಲ್ಲಿ ಅಮೆರಿಕದವರೇ ಫೈನಲ್ ತಲುಪಿರುವುದು ಮತ್ತೊಂದು ವಿಶೇಷ. ೧೯೮೧ರಲ್ಲಿ ಮೊದಲ ಬಾರಿಗೆ ನಾಲ್ವರು ಅಮೆರಿಕದ ಅಟಗಾರ್ತಿಯರು ಇಲ್ಲಿ ಸೆಮಿಫೈನಲ್ ಆಡಿದ್ದರು.

Leave a Comment