ಯಾರೊಂದಿಗೂ ವಿರೋಧ ಕಟ್ಟಿಕೊಳ್ಳದ ಕೋಟಿ

ಮೈಸೂರು.ಡಿ.7- ಪತ್ರಕರ್ತರು ತಮ್ಮ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಅನೇಕ ಸಂಧರ್ಭಗಳಲ್ಲಿ ಪರಸ್ಪರ ವಿರೋಧ ಕಟ್ಟಿಕೊಳ್ಳುವುದು ಸಹಜ. ಆದರೆ ದಿ. ರಾಜಶೇಖರ್ ಕೋಟಿಯವರು ಯಾರೊಂದಿಗೂ ವಿರೋಧ ಕಟ್ಟಿಕೊಳ್ಳದೆ ತಮ್ಮದೇ ಆದ ಶೈಲಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಹೇಳಿದರು.
ಅವರು ಇಂದು ಬೆಳಿಗ್ಗೆ ಪತ್ರಕರ್ತರ ಭವನದಲ್ಲಿ ಆಂದೋಲನ ಪತ್ರಿಕೆಯ ಸಂಪಾದಕ ದಿ.ಕೆ.ರಾಜಶೇಖರ ಕೋಟಿ ಅವರ ಪ್ರಥಮ ಪುಣ್ಯ ತಿಥಿಯ ಅಂಗವಾಗಿ ಮೈಸೂರಿನ ಜನನಿ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಸಾಧಕರುಗಳಿಗೆ ಕೋಟಿ ಜನಮನ ಪ್ರಶಸ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಪತ್ರಕರ್ತರು ಬದುಕಿದ್ದಾಲೇ ಅವರೊಂದಿಗೆ ನಿಲ್ಲುವುದು ಕಷ್ಟದ ಸಂಗತಿ ವೃತ್ತಿ ನಿಮಿತ್ತ ಕೆಲವು ಸಂಧರ್ಭಗಳಲ್ಲಿ ಪತ್ರಕರ್ತರು ಪರಸ್ಪರ ವಿರೋಧ ಕಟ್ಟಿಕೊಳ್ಳುವುದು ಸಹಜ. ಈ ದಿಸೆಯಲ್ಲಿ ರಾಜಶೇಖರ ಕೋಟಿಯವರು ತದ್ವಿರುದ್ಧವಾಗಿದ್ದರು. ಅವರು ಯಾರೊಂದಿಗೂ ವಿರೋಧ ಕಟ್ಟಿಕೊಳ್ಳದೆ ಎಲ್ಲರೊಂದಿಗೂ ಸ್ನೇಹಭಾವದಿಂದ ಬೆರೆತು ತಮ್ಮದೇ ಆದ ಶೈಲಿಯಲ್ಲಿ ಸುದ್ದಿಗಳನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಇದರಿಂದಾಗಿ ಅವರನ್ನು ಎಲ್ಲರೂ ಗೌರವಿಸುತ್ತಿದ್ದರು ಎಂದು ಹೇಳಿದ ಮಹೇಂದ್ರರವರು ಕೋಟಿಯವರ ಮಾರ್ಗದರ್ಶನದಂತೆ ನಡೆದಲ್ಲಿ ಹೆಚ್ಚಿನ ಯಶಸ್ಸು ಗಳಿಸಲು ಸಾಧ್ಯ ಎಂದರು.
ಇದಕ್ಕೂ ಮುನ್ನ ಅವರು ದಿ. ಕೆ.ರಾಜಶೇಖರ ಕೋಟಿಯವರು ಭಾವಚಿತ್ರ ಹಿಡಿದು ರಾಜಶೇಖರ್ ಕೋಟಿ ಅಮರ್ ರಹೆ ಎಂದು ಘೋಷಣೆಯನ್ನು ಕೂಗಿದರು ನಂತರ ಅವರ ಭಾವಚಿತ್ರಕ್ಕೆ ಮಹೇಂದ್ರ ಮತ್ತು ಇನ್ನಿತರರು ಪುಷ್ಪಾರ್ಚನೆ ಮಾಡಿದರು.
ಇಂದಿನ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡ ಪ್ರಭ ಪತ್ರಿಕೆಯ ಸಹ ಸಂಪಾದಕ ಅಂಶಿಪ್ರಸನ್ನ ಕುಮಾರ್‍ರವರಿಗೆ ಅತ್ಯುತ್ತಮ ವರದಿಗಾರ, ಹಿರಿಯ ಮಾಧ್ಯಮ ಛಾಯಗ್ರಾಹಕ ಪ್ರಗತಿ ಗೋಪಾಲ ಕೃಷ್ಣರವರಿಗೆ ಅತ್ಯುತ್ತಮ ಪತ್ರಿಕಾ ಛಾಯಾಗ್ರಾಹಕ ಆರ್.ಮಧುಸೂಧನ್ ರವರಿಗೆ ಹಿರಿಯ ಮಾಧ್ಯಮ ಛಾಯಗ್ರಾಹಕ ಪ್ರಶಸ್ತಿ ನೀಡಿ, ನೆನಪಿನ ಕಾಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.
ಇಂದಿನ ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಆರ್.ರಾಜು, ಸಿಟಿ ಕೋ ಆಪರೇಟೀವ್ ಬ್ಯಾಂಕ್ ನಿರ್ದೇಶಕಿ ಡಾ..ಎಸ್.ನಾಗರತ್ನ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಎಂ.ಬಿ.ಸಂತೋಷ್, ಜನನಿ ಟ್ರಸ್ಟ್ ಅಧ್ಯಕ್ಷ ಡಾ..ಎಂ.ಕೆ.ಅಶೋಕ್ ಉಪಸ್ಥಿತರಿದ್ದರು.

Leave a Comment