ಯಾರು ಕೋಮುವಾದಿಗಳು ?: ಬಾಬುರಾವ ಪ್ರಶ್ನೆ

ಕಲಬುರಗಿ ಅ 12: ಬಿಜೆಪಿ ಕೋಮುವಾದಿಗಳನ್ನು ನಂಬಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಚಿತ್ತಾಪುರದ Àಲ್ಲಿ ನೀಡಿದ ಹೇಳಿಕೆಯನ್ನು ಪ್ರಶ್ನಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಜಿ ಸಚಿವ ಬಾಬುರಾವ ಚವ್ಹಾಣ, ಕೋಮುವಾದಿಗಳು ಯಾರು  ? ಎಂದು ಕಾಂಗ್ರೆಸ್‍ನವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರು.

ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಗಳಾದ ಬಳಿಕ ಕೋಮುಗಲಭೆಗಳು ನಿಂತುಹೋಗಿವೆ.ಕಾಂಗ್ರೆಸ್ ಪಕ್ಷದವರು ಕೋಮುಗಲಭೆಗೆ ಕುಮ್ಮಕ್ಕು ನೀಡಿ, ಅದನ್ನು ಬಿಜೆಪಿ ತಲೆಗೆ ಕಟ್ಟುತ್ತಾರೆ ಎಂದವರು ಇಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಜಿಲ್ಲಾಡಳಿತವು ಜಿಲ್ಲಾ ಉಸ್ತುವಾರಿ ಸಚಿವರ ಕೈಗೊಂಬೆಯಂತಾಗಿದ್ದು, ಕಲಬುರಗಿವಿಮಾನ ನಿಲ್ದಾಣದ ಕಾಮಗಾರಿ ಪೂರ್ತಿಯಾಗದೇ ಇಲ್ಲಿ ವಿಮಾನ ಚಾಲನೆಗೆ ಅನುಮತಿ ನೀಡಿದ್ದು ಯಾಕೆ ?ಸರ್ಕಾರಿ ಅಧಿಕಾರಿಗಳ ಮೇಲೆ ಅವರು ಸಭೆಯೊಂದರಲ್ಲಿ ತೋರಿಸಿದ ದರ್ಪ ಕಂಡು ಸರ್ಕಾರಿ ನೌಕರರು ಕಲಬುರಗಿಗೆ ಬರಲು ಹೆದರುತ್ತಿದ್ದಾರೆ ಎಂದರು

ಸಮ್ಮಿಶ್ರ ಸರ್ಕಾರದ ಸಚಿವ ಎನ್ ಮಹೇಶ್ ರಾಜೀನಾಮೆ ನೀಡಿದ್ದು, ಜಾಸ್ತಿ ದಿವಸ ಈ ಸರ್ಕಾರ ಇರೋದಿಲ್ಲ.ರೈತರ ಸಾಲಮನ್ನಾ ಮಾಡುವದಾಗಿ ಹೇಳುತ್ತಿರುವ ಈ ಸರ್ಕಾರ ಕಾಗದದ ಹುಲಿಯಾಗಿದೆ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಛತ್ರು ವಕೀಲ,ತುಳಸಿರಾಮ ಪವಾರ,ಪ್ರವೀಣಕುಮಾರ,ರಾಜಶೇಖರ ರಾಜೇಶ್ವರ ಡೊಂಗರಗಾಂವ ಸೇರಿದಂತೆ ಹಲವರಿದ್ದರು..

Leave a Comment