ಯಾದವ ಸಂಘದ ಕೃಷ್ಣನ ಗುಡಿಗೆ ದ್ವಾರಕಾ ಮಾದರಿ ಧ್ವಜ

ರಾಯಚೂರು.ಫೆ.13- ನಗರದ ಎಲ್‌ವಿಡಿ ಕಾಲೇಜಿನ ಮುಂಭಾಗದಲ್ಲಿರುವ ಯಾದವ ಸಂಘದ ಆವರಣದಲ್ಲಿ ಶ್ರೀ ಕೃಷ್ಣನ ಗುಡಿಗೆ ದ್ವಾರಕೆಯ ಮಾದರಿನಲ್ಲಿ ಧ್ವಜವನ್ನು ಅನಾವರಣೆಗೊಳಿಸಲಾಯಿತು.
ಭಾರತ ಹುಣ್ಣಿಮೆಯ ನಿಮಿತ್ಯ ಹಳದಿ ಬಣ್ಣದ ಬಟ್ಟೆಯಲ್ಲಿ ಸೂರ್ಯಚಂದ್ರರ ಲಾಂಛನವಿರುವ ಧ್ವಜವನ್ನು ಶಾಸ್ತ್ರೋಕ್ತವಾಗಿ ಗೋಪುರಕ್ಕೆ ಆರೋಹಣ ಮಾಡಲಾಯಿತು. ಇನ್ನೂ ಮುಂದೆ ಪ್ರತಿ ಹುಣ್ಣಿಮೆಗೆ ಹೊಸ ಧ್ವಜಾರೋಹಣ ಮಾಡಲಾಗುತ್ತಿದ್ದು, ಇದರಲ್ಲಿ ಭಕ್ತರೂ ಪಾಲ್ಗೊಳ್ಳಬಹುದೆಂದು ಸಮಿತಿ ತಿಳಿಸಿದೆ.
ದ್ವಾರಕೆಯ ಶ್ರೀ ಕೃಷ್ಣನ ಗುಡಿಗೆ ಪ್ರತಿ ದಿನ 5 ಸಾರಿ ಧ್ವಜಾರೋಹಣ ಮಾಡಲಾಗುತ್ತದೆ. ಇದರಲ್ಲಿ ಭಕ್ತರ ಹೆಸರಿನಲ್ಲಿ, ಭಕ್ತರೇ ಪಾಲ್ಗೊಳ್ಳುವ ಪದ್ಧತಿ ಇದೆ. ಇದೇ ಮಾದರಿಯಲ್ಲಿ ಇಲ್ಲಿಯೂ ಪ್ರತಿ ಹುಣ್ಣಿವೆಗೆ ಒಂದು ಬಾರಿ ಧ್ವಜಾರೋಹಣ ಮಾಡಲು ತೀರ್ಮಾನಿಸಿದ್ದು, ಭಕ್ತರು ಈ ಬಗ್ಗೆ ದೇವಸ್ಥಾನ ಕಮಿಟಿಯನ್ನು ಭೇಟಿಯಾಗಿ ವಿವರ ಪಡೆಯಬಹುದು. ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಕೆ.ಹನುಮಂತಪ್ಪ, ಕಾರ್ಯದರ್ಶಿ ಜಿ.ಹನುಮಂತಪ್ಪ, ತಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಯಾದವ್ (ಜಿಮ್), ಬೇದಾಲ ಅಂಜಿನಯ್ಯ, ಡಿ.ವೆಂಕಟೇಶ, ಸುರೇಂದ್ರ, ಡಾ.ನಾಗೇಶ ಮತ್ತು ಅರ್ಚಕರಾದ ವೆಂಕಟೇಶ ರವರು ಪಾಲ್ಗೊಂಡಿದ್ದರು.

Leave a Comment