ಯಶ್-ರಾಧಿಕಾಗೆ ತರಾಟೆ

ಬೆಂಗಳೂರು.ಆ೨೩. ನಮ್ಮ ನಾಡಿನಲ್ಲಿ ಜನಿಸಿ ಹೊರ ರಾಜ್ಯ ಅಥಾವ ದೇಶಕ್ಕೆ ಹೋಗಿದ್ದರು ಕೂಡ ಹಲವು ಮಂದಿ ಕನ್ನಡದಲ್ಲಿ ಮಾತನಾಡೋದನ್ನು ನಾವು ಕಾಣಬಹುದಾಗಿದೆ. ಈ ನಡುವೆ ಕೆಲ ದಿವಸಗಳ ಹಿಂದೆ ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಅವರ ತಾಯಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದು ಭಾರಿ ವೈರಲ್ ಆಗಿತ್ತು ಆದರೆ ಈಗ ಸ್ಟಾರ್‌ ದಂಪತಿಗಳಾದ ಯಶ್‌ ಹಾಗೂ ರಾಧಿಕ ಅವರಿಗೆ ಪ್ಲೀಸ್‌ ಕನ್ನಡದಲ್ಲಿ ಮಾತನಾಡಿ ಅಂತ ಅಭಿಮಾನಿಮಗಳ ಮನವಿ ಮಾಡಿಕೊಳ್ಳುವ ಸನ್ನಿವೇಶ ಕಂಡು ಬಂದಿದೆ.

ಹೌದು,. ಇತ್ತೀಚೆಗೆ ಯಶ್ ಮತ್ತವರ ಪತ್ನಿ ರಾಧಿಕಾ ಪಂಡಿತ್ ತಮ್ಮ ಮಗಳಿಗೆ ಸಿಕ್ಕಿರುವ ಉಡುಗೊರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಇಬ್ಬರು ಕೂಡ ಇಂಗ್ಲೀಷ್‌ನಲ್ಲಿ ಮಾತನಾಡಿರೋದು ಈಗ ವಿವಾದಕ್ಕೆ ಕಾರಣವಾಗಿದ್ದು, ಇಬ್ಬರಿಗೂ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ‘ತಾವೀಗ ಇಂಟರ್ನ್ಯಾಷನಲ್ ಸ್ಟಾರ್ ಅಂತ ಗೊತ್ತು ಸಾರ್ ನೀವು ಕನ್ನಡ ಮಾತ್ರ ಮಾತನಾಡಿ ಅಂತ ಕೇಳ್ತಾ ಇಲ್ಲ. ಕನ್ನಡಾನೂ ಸ್ವಲ್ಪ ಮಾತಾಡಿ ಅಂತ ಕೇಳ್ತಿದ್ದೀವಿ ಅಷ್ಟೇ ’ ಅಂತ ಅಭಿಮಾನಿಯೊಬ್ಬರು ಹೇಳಿಕೊಂಡಿದ್ದಾರೆ.

Leave a Comment