ಯಶ್ ಪುತ್ರಿ ಐರಾಗೆ ಹುಟ್ಟುಹಬ್ಬ ಸಂಭ್ರಮ

ಬೆಂಗಳೂರು, ಡಿ ೨- ಇತ್ತೀಚೆಗೆ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ದಂಪತಿ ಪುತ್ರಿ ಐರಾಳಿಗೆ ಇಂದು ಮೊದಲು ವರ್ಷದ ಹುಟ್ಟುಹಬ್ಬ ಸಂಭ್ರಮ.
ಡಿ ೨ರಂದು ಜನಿಸಿದ ಐರಾ ಹುಟ್ಟಿದಾಗಿನಿಂದಲೂ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದ್ದು, ಈ ಪುಟಾಣಿ ಅಪ್ಪಅಮ್ಮನಂತೆಯೇ ಭಾರಿ ಅಭಿಮಾನಿ ಬಳಗವನ್ನು ಹೊಂದಿದ್ದು, ಹುಟ್ಟುಹಬ್ಬಕ್ಕೆ ಶುಭಾಶಯದ ಮಹಾಪೂರವೇ ಹರಿದು ಬಂದಿದೆ.
ರಾಧಿಕಾ ಪಂಡಿತ್ ಐರಾಳ ಕ್ಯೂಟ್ ಕ್ಯೂಟ್ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಪ್ರತಿ ವಿಡಿಯೋನಲ್ಲಿ ಐರಾಳ ಮುದ್ದು, ಚುರುಕುತನಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಹಾಗಾಗಿ ಐರಾ ಜಾಲತಾಣದಲ್ಲಿ ಹೊಸ ಹವಾ ಸೃಷ್ಟಿಸಿದ್ದಳು. ಇತ್ತೀಚೆಗಷ್ಟೇ ಐರಾ, ಬಿಸಿಲಿನಲ್ಲಿ ಹೇಗೆ ನೋಡುವುದು ಎಂಬುದನ್ನು ಎಕ್ಸ್ ಪ್ರೆಶನ್ ಮೂಲಕ ತೋರಿಸಿದ್ದು, ಆಕೆಯ ವಿಡಿಯೋಗೆ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು.
ಐರಾಳ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ರಾಕಿಂಗ್ ದಂಪತಿ ನಿರ್ಧಾರಿಸಿದ್ದಾರೆ ಎನ್ನಲಾಗಿದೆ. ತಮ್ಮ ಮುದ್ದು ಮಗಳಿಗೆ ತಾಯಿ ರಾಧಿಕ ಪಂಡಿತ್ ಜಾಲತಾಣದಲ್ಲಿ ತಮ್ಮ ಮತ್ತು ಮಗಳ ಹಳೆಯ ಫೋಟೋವೊಂದನ್ನು ಪೋಸ್ಟ್ ಮಾಡಿ,” ನನ್ನ ಹೃದಯ ಮತ್ತು ಆತ್ಮದ ಭಾಗವಾಗಿರುವ ನನ್ನ ಮುದ್ದಿನ ದೇವತೆಗೆ ಹ್ಯಾಪಿ ಬರ್ತ್ಡೇ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ದೇಶದ್ಯಾದಂತ ಯಶ್ ಲಕ್ಷಾಂತರ ಅಭಿಮಾನಿಗಳು ಲೈಕ್ ಮಾಡಿ ಶೇರ್ ಮಾಡಿ ಹುಟ್ಟುಹಬ್ಬಕ್ಕೆ ಶುಭಕೊರಿದ್ದಾರೆ.

Leave a Comment