ಯಶ್ ಖದರ್ ಲುಕ್‌ಗೆ ಅಭಿಮಾನಿಗಳು ಫಿದಾ

ಬೆಂಗಳೂರು, ನ ೨೯- ಕೆಜಿಎಫ್ ಚಿತ್ರದ ಮೂಲಕ ಮತ್ತಷ್ಟು ಹವಾ ಸೃಷ್ಟಿಸಿದ ರಾಕಿಂಗ್ ಸ್ಟಾರ್ ಯಶ್ ವಿಭಿನ್ನವಾಗಿ ಕ್ಯಾಮಾರಗೆ ಫೋಸ್ ಕೊಟ್ಟಿರುವ ಪೋಟೋಗಳು ವೈರಲ್ ಆಗಿವೆ. ಚಂದನವನ ಮಾತ್ರವಲ್ಲದೇ ಕಾಲಿವುಡ್, ಟಾಲಿವುಡ್, ಬಾಲಿವುಡ್‌ನಲ್ಲೂ ಸಕತ್ ಸೌಂಡ್ ಮಾಡುತ್ತಿರುವ ಯಶ್‌ಗೆ ಇದೀಗ ಅಭಿಮಾನಿ ಬಳಗ ದೊಡ್ಡದಾಗಿದೆ. ಇತ್ತೀಚೆಗೆ ಜಿಕ್ಯೂ ಇಂಡಿಯಾದ ೫೦ ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರಲ್ಲಿ ಯಶ್ ಕೂಡ ಸ್ಥಾನ ಪಡೆದು ಗಮನ ಸೆಳೆದಿದ್ದರು.
ಯೂತ್ ಐಕಾನ್ ಎಂದೇ ಬಿಂಬಿತವಾಗಿರುವ ಯಶ್ ಸಾಮಾಜಿಕ ಜಾಲತಾಣದಲ್ಲೂ ಅಭಿಮಾನಿಗಳ ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ. ಇದೀಗ ಯಶ್ ಜನಪ್ರಿಯತೆಯಿಂದ ವಿದೇಶಗಳಲ್ಲೂ ರಾಕಿಂಗ್ ಸ್ಟಾರ್‌ಗೆ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ.
ಕ್ಲಾಸ್, ಮಾಸ್‌ಗೆ ತಕ್ಕ ಯಶ್ ಬೇಕೇಬೇಕು ಎನ್ನುತ್ತಿದ್ದಾರೆ ಅಭಿಮಾನಿಗಳು. ಸದ್ಯ ‘ಕೆಜಿಎಫ್ ಚಾಪ್ಟರ್ ೨’ ಸಿನಿಮಾದ ಚಿತ್ರೀಕರಣದಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ರಾಕಿಭಾಯ್ ಸೋಷಿಯಲ್ ಮಿಡಿಯಾದಲ್ಲಿ, ವಿಭಿನ್ನ ಲುಕ್‌ನಲ್ಲಿ ಪೋಟೋ ಶೂಟ್ ಮಾಡಿಸಿ ಶೇರ್ ಮಾಡಿದ್ದು, ಹೊಸ ಲುಕ್ ಕಂಡ ದೇಶ-ವಿದೇಶದ ಅಭಿಮಾನಿಗಳು ಬೆರಗಾಗಿದ್ದಾರೆ. ಅಲ್ಲದೇ ಕನ್ನಡದ ರಾಕಿಬಾಯ್‌ಗೆ ಫಿಟ್‌ನೆಸ್‌ಗೆ, ಸ್ಟೈಲ್‌ಗೆ, ಖದರ್‌ಗೆ ಮಾರುಹೋಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಾನು ನಿಮ್ಮ ಸಂದೇಶವನ್ನು ಓದುತ್ತಿದ್ದೇನೆ. ಅನೇಕರು ನನ್ನ ಸ್ಟೈಲ್ ಬಗ್ಗೆ ಕೇಳಿದ್ದೀರಿ. ‘ನನ್ನ ಸ್ಟೈಲ್ ನನ್ನ ವ್ಯಕ್ತಿತ್ವದ ಒಂದು ಭಾಗ, ನನ್ನ ವರ್ತನೆ ಅದು ನನ್ನ ಜೀವನದ ಒಂದು ಭಾಗ’ ಎಂದು ಬರೆದುಕೊಂಡಿದ್ದಾರೆ.
ಈಗ ಈ ಕುತೂಹಲಕ್ಕೂ ಮಾಸ್ಟರ್ ಪೀಸ್ ಬ್ರೇಕ್ ಹಾಕಿದ್ದು, ಖದರ್ ಲುಕ್, ಉದ್ದನೆಯ ಗಡ್ಡ, ಡಿಫರೆಂಟ್ ಕಾಸ್ಟ್ಯೂಮ್‌ನಲ್ಲಿರುವ ಹೊಸ ಫೋಟೋ ಶೇರ್ ಮಾಡಿ ತಮ್ಮ ಸ್ಟೈಲ್ ಸಿಕ್ರೇಟ್ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ.

Leave a Comment