ಯಶ್‌ಗೆ ೩೧ನೇ ಹುಟ್ಟಹಬ್ಬ

ಬೆಂಗಳೂರು,ಜ.೮-ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ಯಶ್‌ಗೆ ಇಂದು ೩೧ ನೇ ಹುಟ್ಟುಹಬ್ಬದ ಸಂಭ್ರಮ.
ಇತ್ತೀಚೆಗಷ್ಟೇ ಹೊಸ ಬಾಳಿಗೆ ಅಡಿ ಇಟ್ಟಿದ್ದ ಯಶ್ ಅವರಿಗೆ ತಾರಾ ಪತ್ನಿ ರಾಧಿಕಾ ಪಂಡಿತ್ ಸೇರಿ ಕುಟುಂಬದ ಸದಸ್ಯರು ಶುಭಕೋರಿ ಸಿಹಿ ತಿನ್ನಿಸಿದರು.
ಹೊಸಕರೆಹಳ್ಳಿಯಲ್ಲಿರುವ ನಿವಾಸದಲ್ಲಿ ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಷಯ ಕೋರಲು ನಿನ್ನೆ ರಾತ್ರಿಯಿಂದಲೇ ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ್ದರು. ಮಧ್ಯರಾತ್ರಿಯಿಂದಲೇ ಯಶ್ ನಿವಾಸದ ಮುಂದೆ ಜಮಾಯಿಸಿದ ಜನರು ತಮ್ಮ ನೆಚ್ಚಿನ ನಟನಿಗೆ ಶುಭಕೋರಿದರು. ಕರುನಾಡ ಕಲಾ ವಿಕ್ರಮ ರಾಕಿಂಗ್ ಸ್ಟಾರ್ ಅಭಿಮಾನಿಗಳ ಸಂಘದ ತಂದಿದ್ದ ಭಾರಿ ಗಾತ್ರದ ಕೇಕ್ ಕತ್ತರಿಸಿ ಯಶ್ ಹುಟ್ಟುಹಬ್ಬ ಆಚರಿಸಿಕೊಂಡರು.
ಅಭಿಮಾನಿಗಳಿಗಾಗಿ ಜನ್ಮ ದಿನದ ಕೊಡುಗಡೆಯಾಗಿ ಯಶೋಮಾರ್ಗ ಹೆಸರಿನಲ್ಲಿ ವೆಬ್‌ಸೈಟ್‌ಗೆ ಇದೇ ವೇಳೆ ಚಾಲನೆ ನಿಡಲಾಯಿತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದರು.
ಗಣ್ಯರ ಶುಭಾಷಯ
೩೧ನೇ ಹುಟ್ಟುಹಬ್ಬ ಆಚರಿಸಿಕೊಂಡ ಯಶ್‌ಗೆ ಚಿತ್ರರಂಗದ ಗಣ್ಯರು ಶುಭಕೋರಿದರು.

Leave a Comment