ಯಶಸ್ವೀ ಸಂಕಷ್ಟ

ಸಂಕಷ್ಟಹರ ಗಣಪತಿ ಚಿತ್ರ ಬಿಡುಗಡೆಯಾಗಿದ್ದ ಎಲ್ಲಾ ಕೇಂದ್ರಗಳಲ್ಲಿ ಯಶಸ್ವಿಯಾಗಿದ್ದು ಚಿತ್ರತಂಡದ ಮುಖದಲ್ಲಿ ಮಂದಹಾಸದ ನಗೆ ಮೂಡಿಸಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಮುಂದಿನವಾರದಿಂದ ವಿದೇಶಗಳಲ್ಲಿಯೂ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶವೊಂದಿದೆ.

ನಿಖಿತ್ ಶೆಟ್ಟಿ ಮತ್ತು ಶೃತಿ ಗೊರಾಡಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಿತ್ರ ಯಶಸ್ವಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಅರ್ಜುನ್ ಕುಮಾರ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಚಿತ್ರಕ್ಕೆ ಗೆಲುವಿನ ಸಿಂಚನ ಸಿಕ್ಕಿರುವುದು ಕಲಾವಿದರಿಗೆ ಮತ್ತಷ್ಟು ಉತ್ಸಾಹ ಮತ್ತು ಹುಮ್ಮಸ್ಸು ನೀಡಿದೆ. ಚಿತ್ರದ ಎಲ್ಲಾ ಕಲಾವಿದರಿಗೆ ಅವಕಾಶ ಬಂದಿದೆ. ಇದು ಸಂತಸದ ಸಂಗತಿ ಎಂದು ನಿರ್ದೇಶಕರು ಹೇಳಿಕೊಂಡರು.

ನಾಯಕ ನಿಖಿತ್ ಶೆಟ್ಟಿ, ವಿಚಿತ್ರ ಕಾಯಿಲೆಯಿಂದ ಬಳಲುವ ವ್ಯಕ್ತಿಯ ಪಾತ್ರ ಮಾಡಿದ್ದೆ. ಪಾತ್ರ ಮಾಡುವಾಗ ಸವಾಲಿನಿಂದ ಕೂಡಿತ್ತು. ಚಿತ್ರ ಯಶಸ್ವಿಯಾಗಿರುವುದು ಸಂತಸ ತಂದಿದೆ ಎಂದರು.

ನಾಯಕಿ ಶೃತಿ ಗೊರಾಡಿಯಾ, ಪಂಜಾಬಿ ಹುಡುಗಿ ಆದರೂ ಕನ್ನಡದಲ್ಲಿ ಸಿಕ್ಕ ಪ್ರೀತಿ ವಿಶ್ವಾಸ ಖುಷಿ ಕೊಟ್ಟಿದೆ. ಇದರಿಂದ ಇನ್ನಷ್ಟು ಸ್ಪಷ್ಟವಾಗಿ ಕನ್ನಡ ಕಲಿಯಲು ಸಹಕಾರಿಯಾಗಿದೆ ಎಂದು ಹೇಳಿಕೊಂಡರು.

pavitra-naik

ಉದ್ದಿಶ್ಯ

ಛೇರ್ ಶೋ ನೆಸ್ ಎಂಟರ್‌ಟೈನ್ಮೆಂಟ್ ಲಾಂಛನದಲ್ಲಿ ಹೇಮನ್ (ಹೇಮಂತ್ ಕೃಷ್ಣಪ್ಪ) ನಿರ್ಮಿಸಿ ನಿರ್ದೇಶಿಸಿರುವ “ಉದ್ದಿಶ್ಯ’

ಚಿತ್ರಕ್ಕೆ  ಸೆನ್ಸಾರ್ ಮಂಡಳಿಯು ‘ಎ’ ಸರ್ಟಿಫಿಕೆಟ್ ನೀಡಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಸಸ್ಪೆನ್ಸ್-ಥ್ರಿಲ್ಲರ್ ಕಥಾವಸ್ತುವುಳ್ಳ ಈ ಚಿತ್ರದ ನಿರ್ದೇಶನ ಮೇಲ್ವಿಚಾರಣೆ-ಸಾಹುರಾಜ್ ಸಿಂಧೆ, ಸಹ ನಿರ್ಮಾಪಕರು – ಗ್ಯಾರಿ ಗ್ರಿಫಿನ್ & ಕಾರ್ಲಸ್ ಹೆಜಿನ್, ಛಾಯಾಗ್ರಹಣ ? ಚೇತನ್ ರಘುರಾಮ್, ಮೂಲ ಕಥೆ ? ರಾಬರ್ಟ್ ಗ್ರಿಫಿನ್, ಸಂಕಲನ-ವೆಂಕಟೇಶ್ ಯು.ಡಿ.ವಿ,  ಸಿಂಕ್ ಸೌಂಡ್- ಅದಮ್ಯ ಚೇತನ್, ಸಂಗೀತ – ಶದ್ರಚ್ ಸಾಲೊಮನ್, ತಾರಾಗಣದಲ್ಲಿ – ಹೇಮಂತ್, ಅರ್ಚನಾ ಗಾಯಕ್ವಾಡ್, ಅಕ್ಷತಾ, ಅನಂತವೇಲು, ಅಶ್ವತ್‌ನಾರಾಯಣ್, ವಿಜಯ್ ಕೌಂಡಿನ್ಯ, ಮುಂತಾದವರಿದ್ದಾರೆ.

Leave a Comment