ಯಶಸ್ವಿ ಉಚಿತ ನೇತ್ರ ಪರೀಕ್ಷೆ

ಹುಳಿಯಾರು, ಆ. ೧೭- ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಉಚಿತ ನೇತ್ರ ಪರೀಕ್ಷಾ ಶಿಬಿರವನ್ನು ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿರುವ ಸಾಕ್ಷ್ಯ ಕಣ್ಣು ಮತ್ತು ದಂತ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿತ್ತು.

ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಮಂದಿಗೆ ಉಚಿತವಾಗಿ ಬಿಪಿ ಹಾಗೂ ಶುಗರ್ ಪರೀಕ್ಷಿಸಿ, ನಂತರ ನೇತ್ರ ತಪಾಸಣೆ ಮಾಡಲಾಯಿತು. ಬಹುಮುಖ್ಯವಾಗಿ ಈಗಾಗಲೇ ಆಪರೇಷನ್ ಮಾಡಿಸಿ ಲೆನ್ಸ್ ಹಾಕಿಸಿಕೊಂಡಿದ್ದ ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಆಪರೇಷನ್ ಆಗಿದ್ದ ಕಣ್ಣಿನಲ್ಲೇ ಸಮಸ್ಯೆ ಕಾಣಿಸಿಕೊಂಡಿದ್ದು, ಇವರಿಗೆ ಸೂಕ್ತ ಸಲಹೆ ಸೂಚನೆ ನೀಡಲಾಯಿತು.

ಸಾಕ್ಷ್ಯ ಆಸ್ಪತ್ರೆಯ ಲಕ್ಷ್ಮೀ ಮಾತನಾಡಿ, ಬಹಳಷ್ಟು ಮಂದಿ ಕಣ್ಣಿನ ಆರೋಗ್ಯವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಕಣ್ಣಿನ ಪೊರೆ ಬಂದರೂ ತಜ್ಞ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವ ಅರಿವು ಅವರಿಗಿಲ್ಲ. ಹಾಗಾಗಿಯೇ ಮಧ್ಯಮ ವಯಸ್ಸಿನಲ್ಲೇ ದೃಷ್ಠಿ ತೊಂದರೆಗೆ ಒಳಪಡುವವರ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಅರಿವು ಹಾಗೂ ಕಾಳಜಿ ಮೂಡಿಸುವ ಸಲುವಾಗಿ ಉಚಿತವಾಗಿ ತಪಸಣಾ ಶಿಬಿರ ಏರ್ಪಡಿಸಲಾಗಿದೆ ಎಂದರು.

ಡಾ. ಮಧುಸೂಧನ್, ಡಾ. ದೀಪಶ್ರೀ, ಡಾ. ರಾಖೇಶ್ ಹಿರಿಯರಿಗೆ ಉಚಿತವಾಗಿ ಕಣ್ಣು ಮತ್ತು ದಂತ ತಪಾಸಣೆ ನಡೆಸಿ ಸೂಕ್ತ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ರಿಯಾಯಿತಿ ದರದಲ್ಲಿ ಔಷಧಿ ಹಾಗೂ ಕನ್ನಡಕಗಳನ್ನು ವಿತರಿಸಲಾಯಿತು. ಸಾಕ್ಷ್ಯ ಆಸ್ಪತ್ರೆಯ ಶೃತಿ, ಪುಷ್ಪಾ, ನಿಶ್ಚಿತ, ಮಧು, ನವೀನ್, ಇಮ್ರಾನ್, ಪವನ್, ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

Leave a Comment