ಯರಮರಸ್ ದಂಡು : ವಿಮಾನ ನಿಲ್ದಾಣ ನಿರ್ಮಾಣ ಸಾಧ್ಯವೇ?

* ತಾಂತ್ರಿಕ ಕಾರಣ : ಜಮೀನು ಮಾರಾಟಕ್ಕೆ ತಂತ್ರ
ರಾಯಚೂರು.ಡಿ.02- ಕಾಯ್ದಿರಿಸಿದ ಯರಮರಸ್ ದಂಡುವಿನಲ್ಲಿ ವಿಮಾನ ನಿಲ್ದಾಣ ಸಾಧ್ಯವೇ?
ಕಳೆದ ಎರಡು ದಿನಗಳ ಹಿಂದೆ ನಗರಕ್ಕೆ ಭೇಟಿ ನೀಡಿದ ಕೆಎಸ್ಐ‌ಐಡಿಸಿ ವಿಮಾನ ತಜ್ಞರಾದ ಕ್ಯಾಪ್ಟೆನ್ ಎನ್.ಶ್ಯಾಮಂತ್ ಅವರ ತಂಡ ಯರಮರಸ್ ದಂಡು ಪ್ರದೇಶದ ಸ್ಥಳ ಪರಿಶೀಲಿಸಿತು. 420 ಎಕರೆ ಜಮೀನು ವಿಮಾನ ನಿಲ್ದಾಣಕ್ಕೆ ಸೂಕ್ತವಾಗಿದೆ ಎನ್ನುವ ಅಭಿಪ್ರಾಯವೇನು ವ್ಯಕ್ತಪಡಿಸಿದ ಅವರು, ವಿಮಾನ ನಿಲ್ದಾಣ ಸ್ಥಾಪನೆಗೆ ಇರುವ ತಾಂತ್ರಿಕ ಸಮಸ್ಯೆಗಳನ್ನು ಅಷ್ಟೆ ಗಂಭೀರವಾಗಿ ಮುಂದಿಟ್ಟಿದ್ದಾರೆ.
ವಿಮಾನ ಹಾರಾಟಕ್ಕಿರುವ ನಾಲ್ಕು ದಿಕ್ಕುಗಳಲ್ಲಿ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ವೈಟಿಪಿಎಸ್ ಚಿಮಣಿ ಅಡ್ಡಿ ಈ ದಿಕ್ಕಿನಲ್ಲಿ ವಿಮಾನ ಹಾರಾಟ ಅಸಂಭವ ಎನ್ನುವುದನ್ನು ಖಚಿತ ಪಡಿಸಿದ್ದಾರೆ. ಆದರೆ, ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ವಿಮಾನ ಹಾರಾಟ ಸಾಧ್ಯತೆಗಳಿದ್ದರೂ, ಇಲ್ಲಿ ಅಳವಡಿಸಲಾದ ಕೆಪಿಸಿಎಲ್ ಹೈಟೆನ್ಷನ್ ತಂತಿ ಮತ್ತು ಕಂಬ ವಿಮಾನ ಹಾರಾಟಕ್ಕೆ ಮತ್ತೊಂದು ಅಡ್ಡಿಯಾಗಿರುವುದು ಅವರು ಬಹಿರಂಗ ಪಡಿಸಿದ್ದಾರೆ.
ಈಗೀರುವ ಹೈಟೆನ್ಷನ್ ಕಂಬ ಮತ್ತು ತಂತಿಗಳನ್ನು ಸ್ಥಳಾಂತರಿಸುವ ಸಾಧ್ಯತೆಗಳೇನು ಇವೆ. ಆದರೆ ಜುರಾಲಾ ಜಲವಿದ್ಯುತ್ ಘಟಕದಿಂದ 220 ಕೆವಿ ಹೈಟೆನ್ಷನ್ ಲೈನ್ ಹಾದು ಹೋಗುವುದು ವಿಮಾನ ನಿಲ್ದಾಣ ಸ್ಥಾಪನೆಗೆ ಬಹುದೊ‌‌ಡ್ಡ ಸವಾಲಾಗಿದೆ. ಜುರಾಲಾ 220 ಕೆವಿ ಲೈನ್ ಮಾರ್ಗವನ್ನು ಈಗಾಗಲೇ ಯರಮರಸ್ ದಂಡು ವಿಮಾನ ನಿಲ್ದಾಣ ದಿಕ್ಕಿನಲ್ಲಿ ಅಳವಡಿಸಲಾಗಿದೆ. ಇದು ಪೂರ್ವ, ಪಶ್ಚಿಮ ವಿಮಾನ ಹಾರಾಟಕ್ಕೆ ಅಡ್ಡಿಯಾಗುವುದರಿಂದ ಯರಮರಸ್ ದಂಡುವಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಅಸಾಧ್ಯ ಎನ್ನುವ ಪರಿಸ್ಥಿತಿ ತಂದೊಡ್ಡಿದೆ.
ಸ್ಥಳೀಯ ಜನಪ್ರತಿನಿಧಿಗಳಿಗೂ ಯರಮರಸ್ ಕ್ಯಾಂಪಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಆಸಕ್ತಿಯಿಲ್ಲ. ವಿಮಾನ ನಿಲ್ದಾಣಕ್ಕಾಗಿ ಕಾಯ್ದಿರಿಸಿದ ಜಮೀನನ್ನು ಕೆಐಡಿಬಿಗೆ ವಹಿಸಿಕೊಡುವ ಮೂಲಕ ಈ ಸ್ಥಳವನ್ನು ಕೈಗಾರಿಕಾಭಿವೃದ್ಧಿ ಅಥವಾ ಇನ್ನಿತರ ಉದ್ದೇಶಗಳಿಗೆ ಬಳಸಬೇಕೆನ್ನುವ ಉದ್ದೇಶ ಪ್ರಬಲವಾಗಿದೆ. ಈ ಹಿನ್ನೆಲೆಯಲ್ಲಿ ಯರಮರಸ್ ದಂ‌ಡುವಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಬಹುತೇಕ ಅಸಂಭವ ಎನ್ನುವುದು ಸಾರ್ವಜನಿಕರ ವಲಯದ ಪ್ರಮುಖ ಚರ್ಚೆಯಾಗಿದೆ.
ಯರಮರಸ್ ದಂಡುವಿನಲ್ಲಿ ವಿಮಾನ ನಿಲ್ದಾಣದಿಂದ ನಿರ್ಮಾಣಕ್ಕೆ ನಿಜವಾಗಿಯೂ ತಾಂತ್ರಿಕ ಸಮಸ್ಯೆಗಳಿವೆಯೇ? ಅಥವಾ ಕೇವಲ ಅನ್ಯ ಉದ್ದೇಶಕ್ಕೆ ಬಳಸಬೇಕೆನ್ನುವ ಕಾರಣಕ್ಕೆ ತಾಂತ್ರಿಕ ಸಮಸ್ಯೆಯನ್ನು ಸೃಷ್ಟಿಸಲಾಗುತ್ತದೆಯೇ? ಎನ್ನುವುದು ಈಗ ಅನುಮಾನಕ್ಕೆಡೆ ಮಾ‌ಡಿದೆ. ಸಿಂಗನೋಡಿ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜನಪ್ರತಿನಿಧಿಗಳ ಆಸಕ್ತಿಯ ಕೊರತೆ ವಿಮಾನ ನಿಲ್ದಾಣ ಕೈ ತಪ್ಪುವ ಸಾಧ್ಯತೆಗಳಿವೆ.
ದಂಡುವಿನಲ್ಲಿರುವಂತಹ 420 ಎಕರೆ ಜಮೀನು ಮಾರಾಟದಿಂ ಹಣದಲ್ಲಿ ಸಿಂಗನೋಡಿ ಭಾಗದಲ್ಲಿ ವಿಮಾನ ನಿಲ್ದಾಣಕ್ಕೆ ಸ್ಥಳ ಖರೀದಿಸುವ ಉದ್ದೇಶ ಸಾರ್ವಜನಿಕರಲ್ಲಿ ಭಾರೀ ಅಸಮಾಧಾನ ಮೂಡಿಸಿದೆ. ಈವೊಂದು ಷಡ್ಯಂತ್ರದಲ್ಲಿ ಸಿಂಗನೋಡಿ ಭಾಗದಲ್ಲಿ ಸ್ಥಳ ಖರೀದಿಸದೇ, ಇರುವ ಸ್ಥಳವನ್ನು ಮಾರಾಟ ಮಾಡಿ, ಹಣ ಬೇರೆ ಉದ್ದೇಶಕ್ಕೆ ಬಳಕೆ ಮಾಡಿದರೇ, ಜಿಲ್ಲೆ ಶಾಶ್ವತವಾಗಿ ವಿಮಾನ ನಿಲ್ದಾಣ ಯೋಜನೆಯಿಂದಲೇ ವಂಚಿತಗೊಳ್ಳಬೇಕಾಗುವ ಸಾಧ್ಯತೆಗಳ ಬಗ್ಗೆಯೂ ಜನ ಆತಂಕ ಪಟ್ಟಿದ್ದಾರೆ.

Leave a Comment