ಯರಬಳ್ಳಿ ಗ್ರಾ.ಪಂಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

ಚಿತ್ರದುರ್ಗ.ಮಾ.13; ದುಷ್ಕರ್ಮಿಗಳ ದುಷ್ಕøತ್ಯಕ್ಕೆ ಹಿರಿಯೂರು ತಾಲ್ಲೂಕಿನ ಯರಬಳ್ಳಿ ಗ್ರಾ.ಪಂ ನ ಕಡತಗಳು, ದಾಖಲೆಪತ್ರಗಳು ಹಾಗೂ ಪೀಠೋಪಕರಣಗಳು ದ್ವಂಸ ಗೊಂಡಿರುವ ಘಟನೆ ನಡೆದಿದೆ. ಹಿರಿಯೂರು ಪಟ್ಟಣಕ್ಕೆ ಕೆಲವೇ ದೂರದ ಅಂತರದಲ್ಲಿರುವ ಯರಬಳ್ಳಿ ಗ್ರಾ.ಪಂ ನಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಒಂದೇ ವಾರದಲ್ಲಿ 2 ಬಾರಿ ಪಂಚಾಯಿತಿಗೆ ಬೆಂಕಿ ಹಚ್ಚಿ ದಾಖಲೆ ಪತ್ರಗಳನ್ನು ಸುಡಲಾಗಿದೆ.ಪಂಚಾಯಿತಿಯಲ್ಲಿ 6 ತಿಂಗಳಿಗೊಮ್ಮೆ ಪಿಡಿಓ ಗಳು ಬದಲಾವಣೆಯಾಗುತ್ತಿದ್ದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಾಮರಸ್ಯವಿಲ್ಲದೇ ಪದೇಪದೇ ಗಲಾಟೆಗಳು ನಡೆಯುತ್ತಿದ್ದವು. ಈ ಪಂಚಾಯಿತಿ ವ್ಯಾಪ್ತಿಗೊಳಪಡುವ ಗಾಳಿಯಂತ್ರ ಕಂಪನಿಗಳಿಗೆ ಮನಸೋ ಇಚ್ಚೆ ಜಾಗಗಳನ್ನು ನೀಡಿ ಅಕ್ರಮವೆಸಗಲಾಗಿದೆ. ಇದರಿಂದ ಪಂಚಾಯಿತಿಗೆ ಬಾರಿ ಪ್ರಮಾಣದಲ್ಲಿ ನಷ್ಟವಾಗಿದೆ. ಅಲ್ಲದೇ ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಕೆಲಸ ನೀಡದೇ ಕೆಲವೇ ವ್ಯಕ್ತಿಗಳು ಮಾತ್ರ ದಾಖಲೆಗಳನ್ನು ಸೃಷ್ಠಿಸಿ ಸರ್ಕಾರದಿಂದ ಹಣ ಪಡೆದು ವಂಚನೆ ಮಾಡಿದ್ದಾರೆ. ಈ ಕುರಿತು ಸಾಮಾನ್ಯ ಸಭೆಗಳಲ್ಲಿ ಪ್ರಶ್ನಿಸಿದರೆ ಅಧಿಕಾರಿಗಳು ಮತ್ತು ಆಡಳಿತಾರೂಢ ಪಕ್ಷದವರು ಸಮಂಜಸ ಉತ್ತರ ನೀಡುತ್ತಿಲ್ಲ ಈ ಬಗ್ಗೆ ಮಾಹಿತಿ ಹಕ್ಕು ಕಾಯಿದೆ ಅಡಿ ದಾಖಲೆಗಳನ್ನು ಕೇಳಿದರೂ ಸಹ ನೀಡದೆ ಅಧಿಕಾರಿಗಳು ಬೇಜವಾಬ್ದಾರಿತನದ ಉತ್ತರ ನೀಡುತ್ತಿದ್ದಾರೆ ಈ ಎಲ್ಲಾ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಗ್ರಾ.ಪಂ ಕಚೇರಿ ಒಳಭಾಗದಲ್ಲಿ ಕಿಟಕಿಯಿಂದ ಪೆಟ್ರೋಲ್ ಸುರಿದು ಬೆಂಕಿಹಚ್ಚಿದ್ದಾರೆ ಪರಿಣಾಮ ಅಪಾರ ಪ್ರಮಾಣದ ದಾಖಲೆ ಪತ್ರಗಳು ಹಾಗೂ ಪೀಠೋಪಕರಣಗಳು ಸುಟ್ಟುಹೋಗಿವೆ. ಕಳೆದ ಮಾ.8 ರಂದು ಸಹ ಬೆಂಕಿ ಹಚ್ಚುವ ಪ್ರಕರಣ ನಡೆದಿತ್ತು.ಪ್ರಕರಣ ಹಿರಿಯೂರು ಠಾಣೆಯಲ್ಲಿ ದಾಖಲಾಗಿದೆ.

Leave a Comment