ಯಡಿಯೂರಪ್ಪ ಸಿ.ಎಂ. ಆಗುವ ಹಗಲುಗನಸು ಕಾಣುತ್ತಿದ್ದಾರೆ

ಬಾದಾಮಿ,ಆ.30-ಕಾಂಗ್ರೇಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ಐದು ವರ್ಷ ಪೂರೈಸಲಿದೆ ಎಂದು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಸಮ್ಮಿಶ್ರ ಸರಕಾರ ಪರ ಬ್ಯಾಟಿಂಗ್ ಮಾಡಿದರು.
ಇಲ್ಲಿನ ಖಾಸಗಿ ಹೊಟೆಲ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂದೆ ನಾನೇ ಸಿಎಂ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಂದಿನ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಸ್ಪಷ್ಟ ಬಹುಮತ ದೊರೆಯಲಿದ್ದು, ಆಗ ಸಿಎಂ ಆಗುತ್ತೇನೆ ಎಂದು ಹೇಳಿದ್ದೇನೆ ಅದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಯಡಿಯೂರಪ್ಪ ಸಿಎಂ ಆಗುತ್ತೇನೆ ಎಂದು ಹಗಲುಗಣಸು ಕಾಣುತ್ತಿದ್ದಾರೆ. ಅದು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು. ನಮ್ಮ ಪಕ್ಷದ ಶಾಸಕರು ಸಿದ್ದರಾಮಯ್ಯ ಸಿಎಂ ಆಗಬೇಕು ಎನ್ನುತ್ತಿದ್ದಾರೆ. ಜೆಡಿಎಸ್ ಪಕ್ಷದ ಶಾಸಕರು ಅನ್ನುತ್ತಿಲ್ಲ. ಕಾಂಗ್ರೇಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಹೇಳಿಕೆ ಸುಳ್ಳು. ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದರು. ಸಿದ್ದರಾಮಯ್ಯಗೆ ರೈತರ ಪರ ಕಾಳಜಿ ಇಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ರಾಮುಲುಗೆ ಭಾಷೆ, ಸಂಸ್ಕೃತಿ, ಅಭಿವೃದ್ಧಿ ಅಂದರೆ ಗೊತ್ತಿಲ್ಲ.  ಬಳ್ಳಾರಿ, ಮೊಳಕಾಲ್ಮೂರುನಲ್ಲಿ ಏನು ಮಾಡಿದ್ದಾರೆ ಹೇಳಿ ಎಂದ ಸಿದ್ದರಾಮಯ್ಯ ಅಭಿವೃದ್ಧಿ ಏನೆ ಇದ್ದರೂ ಕಾಂಗ್ರೇಸ್‍ನಿಂದ ಮಾತ್ರ ಸಾಧ್ಯ ಎಂದರು.
ಮೊಳಕಾಲ್ಮೂರು ಶಾಸಕ ಶ್ರೀರಾಮುಲುಗೆ ಬಹಿರಂಗ ಸವಾಲು ಹಾಕಿದ ಸಿದ್ದರಾಮಯ್ಯ ನಾನು ಬಾದಾಮಿ ಅಭಿವೃದ್ಧಿ ಮಾಡುತ್ತೇನೆ. ನನ್ನಷ್ಟೇ ರಾಮುಲು ಮೊಳಕಾಲ್ಮೂರು ಅಭಿವೃದ್ಧಿ ಮಾಡಲಿ ಎಂದರು. ಬಿಜೆಪಿಯವರ ಅಪಪ್ರಚಾರದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಬೇಕಾಯಿತು. ಪರಮ ಸಹಿಷ್ಣತೆ ಕಾಂಗ್ರೇಸ್‍ನ ಸಂವಿಧಾನ. ಈಶ್ವರ ಅಲಾ ಒಂದೇ ಎನ್ನುವವರು ನಾವು. ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ. ಇಂತಹವರಿಗೆ ಅಧಿಕಾರ ಕೊಡಬೇಡಿ. ಕೇಂದ್ರ ಸಚಿವ ಅನಂತಕುಮಾರ ಇವರಿಗೆ ಕನಿಷ್ಟ ಜ್ಞಾನ ಇಲ್ಲ. ಅವನಿಗೆ ನಾಚಿಕೆಯಾಗಬೇಕು. ಇದು ಸಂವಿಧಾನ, ಮನುಕುಲಕ್ಕೆ ಅವಮಾನ. ಇಂತಹವರನ್ನ ಇಟ್ಟುಕೊಂಡ ಪ್ರಧಾನಿ ಮೋದಿಯವರಿಗೂ ಮಾನ ಮರ್ಯಾದೆ ಇಲ್ಲ. ಬಿಜೆಪಿಯವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು. ಈ ಬಾರಿ ಬಾಗಲಕೋಟ ಲೋಕಸಭೆ ಗೆಲ್ಲಲೇಬೇಕು. ಬಿಜೆಪಿಯವರು ಮೂರು ಕಾಸಿನ ಕೆಲಸ ಮಾಡಿಲ್ಲ. ಮೋದಿ ಮಾತೆತ್ತಿದರೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ ಅಂತಾರೆ.  ವಿಕಾಸ ನಹಿ, ಸಬ್ ಕಾ ವಿನಾಶ್ ಎಂದು ಟೀಕಿಸಿದರು. ಸಾಲ ಮನ್ನಾ ಸೇರಿದಂತೆ ಎಲ್ಲವನ್ನೂ ಮಾಡಿದವರು ನಾವು. ಮೋದಿ ಏನೂ ಮಾಡಲಿಲ್ಲ. ಮೋದಿಗೂ ಮನ್ ಕಿ ಬಾತ್, ನಮ್ಮದು ಕಾಮ ಕಿ ಬಾತ್ ಎಂದು ಹೇಳಿದರು. ನನ್ನ ಫೋನ್ ಕದ್ದಾಲಿಕೆ ಆಗಿದೆ ಅಂದವರಾರು. ನನ್ನ ಫೋನ್ ಕದ್ದಾಲಿಕೆ ಆಗಿಲ್ಲ. ಯಾರು ಫೋನ್ ಕದ್ದಾಲಿಕೆ ಆಗಿದೆ ಎಂದು ಹೇಳಿದವರನ್ನೇ ಕೇಳಿ ಎಂದು ಯಡಿಯೂರಪ್ಪ ಕಡೆಗೆ ಬೊಟ್ಟು ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಮಾಜಿ ಸಚಿವರಾದ ಎಂ.ಬಿ.ಪಾಟೀಲ, ಎಸ್.ಆರ್.ಪಾಟೀಲ, ಉಮಾಶ್ರೀ, ಎಚ್.ವೈ.ಮೇಟಿ, ಬಿ.ಬಿ.ಚಿಮ್ಮನಕಟ್ಟಿ , ಎಂ.ಬಿ.ಹಂಗರಗಿ ಮಹೇಶ ಹೂಸಗೌಡ,ಶಿವಾನಂದ ಕುಳಗೇರಿ, ಡಾ.ಎಂ.ಜಿ. ಕಿತ್ತಲಿ, ಡಾ. ದೇವರಾಜ ಪಾಟೀಲ,ಹೂಳೆಬಸು ಶಟ್ಟರ,ಎಂ.ಡಿ.ಎಲಿಗಾರ ಹಾಜರಿದ್ದರು.
29-ಬಾದಾಮಿ-4,ಎ,ಬಿ, ಖಾಸಗಿ ಹೊಟೆಲ್‍ನಲ್ಲಿ ಸುದ್ದಿಗಾರರೊಂದಿಗೆ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಮಾತನಾಡಿದ

Leave a Comment