ಮ್ಯಾಕ್ಸ್‌ವೆಲ್ ಚೊಚ್ಚಲು ಶತಕ ನಾನ್ನೂರು ದಾಟಿದ ಆಸ್ಟ್ರೇಲಿಯಾ

ರಾಂಚಿ, ಮಾ.೧೭-ಕ್ಯಾಪ್ಟನ್ ಸ್ಟೀವನ್ ಸ್ಮಿತ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ನಡುವಣ ೧೯೧ ರನ್‌ಗಳ ಜೊತೆಯಾಟದ ಮೂಲಕ ಆಸ್ಟ್ರೇಲಿಯಾ ತಂಡದವರು ಮೂರನೇ ಕ್ರಿಕೆಟ್ ಟೆಸ್ಟ್‌ನ ಎರಡನೆ ದಿನವಾದ ಇಂದು ಚಹಾ ವಿರಾಮಕ್ಕೆ ಸುಮಾರು ಒಂದು ಗಂಟೆ ಮುನ್ನ ಒಟ್ಟು ೧೩೨ ಓವರ್‌ಗಳಲ್ಲಿ ೭ ವಿಕೆಟ್‌ಗೆ ೪೪೧ ರನ್ ಮಾಡಿದ್ದರು.

ಸ್ಮಿತ್ (೩೪೬ ಎಸೆತಗಳಲ್ಲಿ ೧೭ ಬೌಂಡರಿಗಳಿದ್ದ ೧೭೦) ಹಾಗೂ ಸ್ಟೀವ್ ಓ’ಕೀಫ್ (೬೧ ಎಸೆತಗಳಲ್ಲಿ ೫ ಬೌಂಡರಿಗಳಿದ್ದ ೨೪) ೮ನೇ ವಿಕೆಟ್‌ಗೆ ೪೬ ರನ್ ಸೇರಿಸಿ ಆಡುತ್ತಿದ್ದರು.

ಮಿಚೆಲ್ ಮಾರ್ಷ್ ಅವರು ಗಾಯಗೊಂಡಿದ್ದರಿಂದ ತಂಡಕ್ಕೆ ಮರಳಿ ಮೊದಲ ದಿನ ೮೨ ರನ್ ಮಾಡಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಇಂದು ಎಚ್ಚರಿಕೆಯಿಂದ ಆಡುತ್ತಾ, ೯೯ರಲ್ಲಿ ಒಂದು ಓವರ್ ಕಳೆದು ನಂತರ ಉಮೇಶ್ ಯಾದವ್ ಬೌಲಿಂಗ್‌ನಲ್ಲಿ ಬೌಂಡರಿ ಗಳಿಸುವ ಮೂಲಕ ಚೊಚ್ಚಲು ಶತಕ ಗಳಿಸಿದರು. ಮ್ಯಾಕ್ಸ್‌ವೆಲ್ ಇದನ್ನು ೧೮೦ ಎಸೆತಗಳಲ್ಲಿ ೨ ಸಿಕ್ಸರ್, ೯ ಬೌಂಡರಿಗಳ ನೆರವಿನಿಂದ ಸಾಧಿಸಿದರು. ಆದರೆ ೫ ಎಸೆತಗಳಲ್ಲಿ ಮತ್ತೊಂದು ರನ್ ಗಳಿಸಿದ ನಂತರ ಮ್ಯಾಕ್ಸ್‌ವೆಲ್ ನಿರ್ಗಮಿಸಿದರು. ವಿಕೆಟ್‌ಕೀಪರ್ ವೃದ್ಧಿಮಾನ್ ಸಾಹ ನೆರವಿನಿಂದ ಪ್ರವಾಸಿಗರ ೧೯೧ ರನ್‌ಗಳ ೫ನೇ ವಿಕೆಟ್ ಜೊತೆಯಾಟವನ್ನು ಅಂತ್ಯಗೊಳಿಸಿದ ರವೀಂದ್ರ ಜಡೇಜ ಲಂಚ್ ವಿರಾಮಕ್ಕೆ ಮುಂಚೆಯೇ ಒಂದೇ ಓವರ್‌ನಲ್ಲಿ ವೇಡ್ ಹಾಗೂ ಪ್ಯಾಟ್ ಕುಮ್ಮಿನ್ಸ್ ವಿಕೆಟ್ ಗಳಿಸಿದರು.

ಸ್ಕೋರು ವಿವರ

ಆಸ್ಟ್ರೇಲಿಯಾ, ೧ನೇ ಇನಿಂಗ್ಸ್:

೭ ವಿಕೆಟ್‌ಗೆ ೪೪೧

(ಗುರುವಾರ ೪ ವಿಕೆಟ್‌ಗೆ ೨೯೯)

ಸ್ಟೀವನ್ ಸ್ಮಿತ್ ಬ್ಯಾಟಿಂಗ್ ೧೭೦, ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಸಾಹ ಬಿ ಜಡೇಜ ೧೦೫, ಮ್ಯಾಥ್ಯೂ ವೇಡ್ ಸಿ ಸಾಹ ಬಿ ಜಡೇಜ ೩೭, ಪ್ಯಾಟ್ ಕುಮ್ಮಿನ್ಸ್ ಬಿ ಜಡೇಜ ೦, ಸ್ಟೀವ್ ಓ’ಕೀಫ್ ಬ್ಯಾಟಿಂಗ್ ೨೪, ಇತರೆ (ಬೈ ೯, ಲೆಬೈ ೧೧, ನೋಬಾ ೨) ೨೨

ವಿಕೆಟ್ ಪತನ: ೧-೫೦, ವಾರ್ನರ್, ೯.೪), ೨-೮೦ (ರೆನ್‌ಶಾ, ೨೨.೩), ೩-೮೯ (ಮಾರ್ಷ್, ೨೫.೧), ೪-೧೪೦ (ಹ್ಯಾಂಡ್‌ಸ್ಕೊಂಬ್, ೪೨.೨), ೫-೩೩೧ (ಮ್ಯಾಕ್ಸ್‌ವೆಲ್, ೧೦೧.೨), ೬-೩೯೫ (ವೇಡ್, ೧೧೫.೪), ೭-೩೯೫ (ಕುಮ್ಮಿನ್ಸ್, ೧೧೫.೬)

ಬೌಲಿಂಗ್: ಇಶಾಂತ್ ಶರ್ಮ ೨೦-೨-೭೦-೦; ಉಮೇಶ್ ಯಾದವ್ ೨೮-೩-೧೦೩-೨; ಆರ್.ಅಶ್ವಿನ್ ೩೩-೨-೧೧೦-೧; ರವೀಂದ್ರ ಜಡೇಜ ೪೮-೮-೧೨೦-೭-೯೧-೪; ಮುರಳಿ ವಿಜಯ್ ೩-೦-೧೭-೦

 

Leave a Comment