ಮೌಲ್ಯಮಾಪನ ಬಹಿಷ್ಕಾರ ಪಿಯು ಶಿಕ್ಷಕರ ಬೆದರಿಕೆ

ಬೆಂಗಳೂರು, ಫೆ. ೧೩- ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ವೇತನ ತಾರತಮ್ಯವನ್ನು ಸರ್ಕಾರ ಶೀಘ್ರ ಬಗೆಹರಿಸಬೇಕು ಇಲ್ಲದಿದ್ದರೆ ಮೌಲ್ಯಮಾಪನ ಬಹಿಷ್ಕರಿಸಲಾಗುವುದು ಎಂದು ಉಪನ್ಯಾಸಕರ ಸಂಘ ಇಂದಿಲ್ಲಿ ಬೆದರಿಕೆ ಹಾಕಿದೆ.

  • ವೇತನ ತಾರತಮ್ಯ ಬಗೆಹರಿಸುವಂತೆ ಆಗ್ರಹ.
  • ಮೌಲ್ಯ ಮಾಪನ ಬಹಿಷ್ಕಾರದ ಬೆದರಿಕೆ.
  • ಜೈಲಿಗೆ ಹೋಗಲು ಸಿದ್ಧ.
  • ಎಸ್ಮಾಗೂ ಹೆದರುವುದಿಲ್ಲ.
  • ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಬೇಕು.
  • ಮುಂದಿನ ಅನಾಹುತಗಳಿಗೆ ಸರ್ಕಾರವೆ ನೇರ ಹೊಣೆ.
  • ಉಪನ್ಯಾಸಕರ ಸಂಘ ರಾಜ್ಯಸರ್ಕಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ.

ಮೌಲ್ಯ ಮಾಪನದ ವಿಷಯದ ಕುರಿತು ಸರ್ಕಾರ ಎಸ್ಮಾ ಜಾರಿ ಮಾಡಿದರೂ ಹೆದರುವುದಿಲ್ಲ. ಜೈಲಿಗೆ ಹೋಗಲೂ ಸಿದ್ಧ ಆದರೆ. ನಮ್ಮ ಸಮಸ್ಯೆಗಳನ್ನು ಹಾಗೂ ವೇತನ ತಾರತಮ್ಯವನ್ನು ಬಗೆಹರಿಯುವತನಕ ಹೋರಾಟ ಮುಂದುವರೆಯಲಿದೆ ಎಂದು ಸಂಘದ ಅಧ್ಯಕ್ಷ ತಿಮ್ಮಯ್ಯ ಪುಱ್ಲೆ ಸರ್ಕಾರಕ್ಕೆ ಎಚ್ಚರಿಕೆ ಮಾಡಿದ್ದಾರೆ.

ನಗರದ ಮೌರ್ಯ ಸರ್ಕಲ್ ಬಳಿ ವೇತನ ತಾರತಮ್ಯ ನಿವಾರಣೆಗಾಗಿ ಒತ್ತಾಯಿಸಿ ಕರಾಳ ಶಿವರಾತ್ರಿ ಆಚರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ ಉಪನ್ಯಾಸಕರು ಮತ್ತು ಪ್ರಾಂಶುಪಾಲರುಗಳು ವೇತನ ತಾರತಮ್ಯವನ್ನು ಸರ್ಕಾರ ಶೀಘ್ರ ನಿವಾರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಸಮಸ್ಯೆ ನಿವಾರಣೆಗೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಅನಿವಾರ್ಯವಾಗಿ ಮೌಲ್ಯಮಾಪನ ಬಹಿಷ್ಕಾರ ಮಾಡುವುದು ಹಾಗೂ ಈ ಸಂಬಂಧ ಜೈಲಿಗೆ ಹೋಗಲೂ ಕೂಡ ಉಪನ್ಯಾಸಕರು ಹಾಗೂ ಪ್ರಾಂಶುಪಾಲರ ಸಂಘದ ಎಲ್ಲರೂ ನಿರ್ಧರಿಸಿದ್ದಾರೆ.

ಈ ವಿಷಯದಲ್ಲಿ ಹಿಂದೆ ಸರಿಯುವ ಯಾವುದೇ ಪ್ರಮೇಯವೇ ಇರುವುದಿಲ್ಲ. ಸರ್ಕಾರ ಶೀಘ್ರ ಸಮಸ್ಯೆಯನ್ನು ಬಗೆಹರಿಸಿ ಮುಂದಾಗುವ ಸಮಸ್ಯೆಗಳು ಹಾಗೂ ತೊಂದರೆಗಳನ್ನು ನಿವಾರಿಸಲು ಗಮನ ಕೊಡಬೇಕು ಎಂದು ಎಚ್ಚರಿಕೆ ನೀಡಿದರು.

Leave a Comment