ಮೌಲ್ಯಗಳ ಜಗತ್ತು ನಿರ್ಮಾಣದ ಕನಸು ಕಂಡಿದ್ದ ವಚನಕಾರರು

ದಾವಣಗೆರೆ.ಅ.11; ಮೌಲ್ಯಗಳ ಜಗತ್ತು ನಿರ್ಮಾಣವಾಗ ಬೇಕೆಂಬ ಕನಸು ಕಂಡವರು ವಚನಕಾರರರು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಅಧ್ಯಾಪಕ ಡಾ.ಪ್ರಕಾಶ್ ಹಲಗೇರಿ ಹೇಳಿದರು.
ನಗರದ ಎಆರ್‍ಜಿ ಕಾಲೇಜಿನಲ್ಲಿಂದು ಶರಣಸಾಹಿತ್ಯ ಪರಿಷತ್ ನಿಂದ ಹಮ್ಮಿಕೊಂಡಿದ್ದ ಶರಣರು, ಶರಣ ಸಾಹಿತ್ಯ, ಸಂಸ್ಕøತಿ ಆಚಾರ ವಿಚಾರಧಾರೆಗಳ ಕುರಿತ ದತ್ತಿ ಉಪನ್ಯಾಸ ಮತ್ತು ವಚನ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ದಿನಗಳಲ್ಲಿ ಹಣಗಳಿಕೆಯೇ ದೊಡ್ಡ ಸಾಧನೆಯಾಗಿದೆ. ಹಿಂದೆ 12 ನೇ ಶತಮಾನದಲ್ಲಿ ಶರಣರು ಶ್ರಮದ ಮೂಲಕ ಕಾಯಕ ಮಾಡುತ್ತಿದ್ದರು ಹಾಗೂ ಬದುಕಿನ ಅನುಭವಗಳ ಮೂಲಕ ವಚನಗಳನ್ನು ಕಟ್ಟಿಕೊಟ್ಟಿದ್ದರು. ಆ ವೇಳೆಯಲ್ಲೂ ಸಹ ಅಪಮೌಲ್ಯಗಳಿದ್ದವು ಅದು ಇಂದಿಗೂ ಮುಂದುವೆರೆದಿರುವುದು ದುರಂತ. ಹಲವಾರು ವಚನಕಾರರು ವಚನ ಪರಿಸರದ ಮೂಲಕ ಕಾಯಕ ಪ್ರಜ್ಞೆಯನ್ನು ಬೆಳೆಸಿದವರು. ಇಂದು ವಸ್ತುಗಳಿಗೆ ಪ್ರಾಮುಖ್ಯತೆ ನೀಡಿದಷ್ಟು ಭಾವನೆಗಳಿಗೆ ಮಾನ್ಯತೆ ನೀಡುತ್ತಿಲ್ಲವೆಂದು ವಿಷಾಧಿಸಿದರು.
ವಚನಕಾರರು ಸೀಮಿತ ಚೌಕಟ್ಟಿನಲ್ಲಿ ಇರಲಿಲ್ಲ.ವಚನ ಸಾಹಿತ್ಯದ ಮೂಲಕ ಇಡೀ ಜಗತ್ತಿಗೆ ಪ್ರಜ್ಞೆ ಮೂಡಿಸಿದ್ದರು. ಆದರಿಂದು ಸ್ವಾರ್ಥ, ಹಣಗಳಿಕೆಯ ಹಿಂದೆ ಬಿದ್ದಿದ್ದೇವೆ. ವಚನಕಾರರು ಸ್ವಾರ್ಥಕ್ಕಾಗಿ ಬದುಕಿದ್ದರೆ ಇಂದು ಭಾರತೀಯರು ವಿಶ್ವದಲ್ಲೇ ತಲೆಎತ್ತಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ವಚÀನ ಸಾಹಿತ್ಯದ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಶರಣರು ಶ್ರಮಿಸಿದ್ದದರು ಎಂದರು.
ಈ ಸಂದರ್ಭದಲ್ಲಿ ಎಆರ್ ಜಿ ಕಾಲೇಜಿನ ಪ್ರಾಂಶುಪಾಲ ಪ್ರೋ.ಕೆ.ಎಸ್ ಬಸವರಾಜಪ್ಪ, ನಿವೃತ್ತ ಡಿವೈಎಸ್ಪಿ ಮುರುಗಣ್ಣವರ್,ಪ್ರೋ.ಜೆ.ಕೆ ಮಲ್ಲಿಕಾರ್ಜುನ ಜವಳಿ, ಬೊಮ್ಮಣ್ಣ,ಚಿಕ್ಕೋಳ್ ಈಶ್ವರಪ್ಪ ಮತ್ತಿತರರಿದ್ದರು.

Leave a Comment