ಮೌಢ್ಯ ತೊರೆಯುವುದರಿಂದ ಸಮಾಜ ಅಭಿವೃದ್ಧಿ ಸಾಧ್ಯ -ಸತೀಶ

ಚನ್ನಮ್ಮನ ಕಿತ್ತೂರ- ಜ-03 ಬೆಳಗಾವಿ ಜಿಲ್ಲೆ ಸುತ್ತಾಡಿ ಅಲ್ಲಿನ ಕುಂದುಕೊರತೆ ನಿಗಿಸುವಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಪರಿಸರ ಮತ್ತು ಅರಣ್ಯ ಖಾತೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸಮೀಪದ ಬೈಲೂರ ಗ್ರಾಮದ ನಿಷ್ಕಲ ಮಂಟಪದ ವೇದಿಕೆಯಲ್ಲಿ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು.
ಮಾನವ ಧರ್ಮ ಸಾಧನೆಗಾಗಿ ಹಣ ಖರ್ಚು ಮಾಡಬೇಕು. ಗುಡಿ ಮತ್ತು ಮಠ ನಿರ್ಮಾಣ ಮಾಡಬೇಕು. ಆದರೆ ಅಲ್ಲಿಯ ಮೌಢ್ಯಗಳನ್ನು ಬಿಡಬೇಕು ಅಂದಾಗ ಮಾತ್ರ ಈ ಸಮಾಜ ಮುಂದುವರಿಯಲು ಸಾಧ್ಯ. ಈ ನಿಷ್ಕಲ ಮಂಟಪಕ್ಕೆ ಸರಕಾರದ ಜೊತೆ ಚರ್ಚಿಸಿ ಇದಕ್ಕೆ ಸಹಾಯ ಹಸ್ತ ನೀಡಲಾಗುವದೆಂದರು.
ಸಾನಿಧ್ಯ ವಹಿಸಿಕೊಂಡು ಆಶೀರ್ವಚನ ನೀಡಿದ ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ದೇವರ ಮೇಲೆ ನಂಬಿಗೆ ಬಿಟ್ಟು. ಮನುಷ್ಯರ ಮೇಲೆ ನಂಬಿಗೆ ಕೊಡಿ ಆದರೆ ನಾವು ನೂರಕ್ಕೆ ನೂರರಷ್ಟು ಮನುಷ್ಯರಾಗಲು ಸಾಧ್ಯವಿಲ್ಲ. ಅದಕ್ಕಾಗಿ ನಾವು ಮನುಕುಲಕ್ಕೆ ಸಾಧ್ಯವಾದಷ್ಟು ಸಹಾಯ ಮಾಡಬೇಕು. ಯಾವ ಮನುಷ್ಯ ತನ್ನನ್ನು ತಾನು ನೋಡಿಕೋಳ್ಳುತ್ತಾನೆ ಅಂತವರು ಬೇರೆಯವರನ್ನು ಸಹ ನೋಡಿಕೋಳುತ್ತಾ ಜೀವನ ಸಾಗಿಸುತ್ತಾರೆ ಮನುಷ್ಯ ಕಾಣದ ಪ್ರೀತಿ ಮಾಡುತ್ತಿದ್ದಾನೆ ಆದರೆ ದೇವರು ಕಷ್ಟ ಪರಿಹರಿಸುವದಿಲ್ಲಾ ದೇವರು ಕಣ್ಣು, ಬಾಯಿ, ಕೈಯಿ, ಬುದ್ಧಿ ಕೊಟ್ಟಿದ್ದಾನೆ ಅವುಗಳನ್ನು ಉಪಯೋಗಿಸಿಕೊಂಡು ಈ ಸಮಾಜದಲ್ಲಿ ಅಜ್ಞಾನ ಅಳಕಿಸಿ, ಸುಜ್ಞಾನ ಬರಲೆಂದು ನಾವು ಹೋರಾಟ ಮಾಡಬೇಕಾಗಿದೆ. ಸಮಾಜಕ್ಕೆ ಏನಾದರು ಕೊಡುಗೆ ಕೊಡಬೇಕೆಂದು ಮನುಷ್ಯ  ಬದುಕಬೇಕಾಗಿದೆ. ಸಮಾಜದ ಮೂಡನಂಬಿಕೆ ಅಳಿಸಬೇಕಾದರೆ ಬುದ್ಧ, ಬಸವಣ್ಣ, ಅಂಬೇಡ್ಕರ ಎಂಬ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದರು.
ಇದೆ ಸಮಯದಲ್ಲಿ ಸತೀಶ ಜಾರಕಿಹೊಳಿ ಅಭಿಮಾನಿಗಳ ಬಳಗದಿಂದ ಮತ್ತು ಜೆ.ಡಿ.ಎಸ್ ಮುಖಂಡಳು. ಕಸ್ತೂರಿ ನಿಜನಕೋಡ ಇವರಿಂದ ಸಬಿಕರನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಡಾ|| ಚಂದ್ರಶೇಕರ ಸಾಧುನವರ, ಮಾಜಿ ಶಾಸಕರ ಕೊಣರೆಡ್ಡಿ, ಮಾಜಿ ಎ.ಪಿ.ಎಮ್.ಸಿ ಅಧ್ಯಕ್ಷ ಶಿವನಗೌಡ ಪಾಟೀಲ, ಉದ್ಯಮಿ ಹಬೀಬ ಶಿಲ್ಲೇದಾರ, ಕಾಂಗ್ರೆಸ್ ಮುಖಂಡ, ಸುನೀಲ ಹನಮನವರ, ಶಂಕರಗೌಡ ಪಾಟೀಲ, ದುಂಡಪ್ಪ ಕ್ಯಾಸಗೇರಿ ಗ್ರಾಮದ ಪ್ರಮುಖರು ಹಾಗೂ, ಗಣ್ಯರು ಉಪಸ್ಥಿತರಿದ್ದರು.

Leave a Comment