ಮೌಂಟ್ ಅಬುವಿನಲ್ಲಿ ರಾರಾಜಿಸಿದ ಕನ್ನಡ ಬಾವುಟ

ಚಾಮರಾಜನಗರ. ಡಿ.3. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಆಧ್ಮಾತ್ಮಿಕ ಸೇವಾ ಸಂಸ್ಥೆಯ ಮೌಂಟ್ ಅಬುವಿನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ರಾರಾಜಿಸಿದವು.
ರಾಜಸ್ತಾನದಲ್ಲಿ ನ. 26 ರಿಂದ 30 ರವರೆಗೆ  ನಡೆದ ರಾಜಯೋಗ ವಿದ್ಯಾರ್ಥಿಗಳ ಅಂತರರಾಷ್ಟ್ರೀಯ ಪ್ರಭು ಮಿಲನ ಮಹೋತ್ಸವದ ಸಂದರ್ಬದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಹಚ್ಚೆವು ಕನ್ನಡ ದೀಪ  ಹಾಡಿಗೆ ನೃತ್ಯ ಮಾಡಿದ  ಕರ್ನಾಟಕ ರಾಜ್ಯದ ರಾಜಯೋಗ ವಿದ್ಯಾರ್ಥಿಗಳು ಕನ್ನಡ ಬಾವುಟದೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಮೈಸೂರು, ಮಂಡ್ಯ, ಬೆಂಗಳೂರು ಕಲಾ ತಂಡಗಳಿಂದ ಹೆಚ್ಚೆವು ಕನ್ನಡ ದೀಪ, ಮಲೈ ಮಹದೇಶ್ವರರ ಜಾನಪದ ಗೀತೆಗಳಿಗೆ  ನೃತ್ಯ ಮಾಡಿ, ರಾಜಸ್ತಾನದಲ್ಲಿ ಕನ್ನಡ ಕಂಪು ಪಸರಿಸಿದರು.
ರಾಜಸ್ಥಾನದ ಮೌಂಟು ಅಬುವಿನಲ್ಲಿ ಮೂರು ದಿನಗಳ ನಡೆದ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳಿಂದ ಹಾಗು ವಿದೇಶಗಳಿಂದಲು ಪ್ರಜಾಪಿತ ಬ್ರಹ್ಮಾಕುಮಾರಿ ರಾಜಯೋಗ ವಿದ್ಯಾರ್ಥಿಗಳು ಆಗಮಿಸಿದ್ದರು. 30 ಸಾವಿರ ಅಸನ ವ್ಯವಸ್ಥೆಯುಳ್ಳ ವಜ್ರ ಮಹೋತ್ಸವ ಭವನದಲ್ಲಿ ಕಾರ್ಯಕ್ರಮ ನಡೆಯಿತು. ಕರ್ನಾಟಕದಿಂದ 10 ಸಾವಿರಕ್ಕೂ ಹೆಚ್ಚು ಮಂದಿ  ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಲ್ಟಿ ಮೀಡಿಯಾ ಅಧ್ಯಕ್ಷರಾದ ಬಿ.ಕೆ. ಕರುಣಾಜೀ,  ಮೈಸೂರು ಉಪ ವಿಭಾಗದ ರಾಜಯೋಗಿನಿ ಬಿ.ಕೆ. ಲಕ್ಷ್ಮಿಜಿ, ಚಾಮರಾಜನಗರದಿಂದ ರಾಜಯೋಗಿನಿ ಬಿ.ಕೆ. ದಾನೇಶ್ವರೀಜಿ, ಶಾರದಾಜೀ,  ಗಾಯಿತ್ರಿಜೀ, ಪ್ರಭಾಮಣಿಜೀ, ರತ್ನಾಜೀ, ಓಂ ಶಾಂತಿ ನ್ಯೂಸ್ ಸರ್ವೀಸ್‍ನ ಬಿ.ಕೆ. ಆರಾಧ್ಯ ಮೊದಲಧವರು ಇದ್ದರು.

Leave a Comment