ಮೋಹನ್ ಭಾಗವತ್ ವಿರುದ್ಧ ಖರ್ಗೆ ವಾಗ್ಧಾಳಿ

 

ಕಲಬುರಗಿ,ಅ.9-ದೇಶದಲ್ಲಿ ಅಸಹಿಷ್ಣುತೆ ಸೃಷ್ಟಿಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಯತ್ನ ನಡೆಸುತ್ತಿವೆ ಎಂಬ ಆರ್.ಎಸ್.ಎಸ್.ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಮೋಹನ್ ಭಾಗವತ್ ದೇಶಭಕ್ತರ ಅಥವಾ ದೇಶಪ್ರೇಮೀನಾ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ವಿರುದ್ಧ ಮಾತಾ‌ನಾಡಿದರೆ ಕೇಸ್ ಹಾಕ್ತಾರೆ, ಸರ್ಕಾರ ಉಳಿಸಿಕೊಳ್ಳಲು ಇವರೆಲ್ಲ ಸರ್ಕಸ್ ಮಾಡ್ತಿದಾರೆ. ಮೋದಿ ಮೇಲೆ ನಂಬಿಕೆ ಇಟ್ಟವರು ದೇಶಭಕ್ತರು, ಉಳಿದವರು ದೇಶದ್ರೋಹಿಗಳಾ? ಎಂದು ಖರ್ಗೆ ಪ್ರಶ್ನಿಸಿದರು.

ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಕಡಿಮೆ ಹಣ ಬಿಡುಗಡೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರಗಳು ಕೇಳಿದಷ್ಟು ಹಣ ಕೇಂದ್ರದಿಂದ ನೀಡುವುದಕ್ಕೆ ಸಾಧ್ಯವಿಲ್ಲ. ಹಿಂದೆ ನಮ್ಮ ಸರ್ಕಾರ ಕೂಡ ರಾಜ್ಯ ಸರ್ಕಾರಗಳು ಕೇಳಿದಷ್ಟು ಹಣ ನೀಡಿಲ್ಲ. ರಾಜ್ಯ ಕೇಳಿದ್ದು 38 ಸಾವಿರ ಕೋಟಿ, ಆದರೆ ಕೇಂದ್ರ ಸರ್ಕಾರ ನೀಡಿದ್ದು, 1200 ಕೋಟಿ ಮಾತ್ರ. ಇಷ್ಟೊಂದು ಕಡಿಮೆ ಪರಿಹಾರ ನೀಡಿದ್ದು ಬೇಸರ ತಂದಿದೆ ಎಂದರು.

ಕೇಂದ್ರದ ವಿರುದ್ಧ ಮಾತಾಡಿದಕ್ಕೆ ಅವರದೇ ಪಕ್ಷದ ಶಾಸಕ ಯತ್ನಾಳ್‌ಗೆ ನೋಟಿಸ್ ನೀಡಲಾಗಿದೆ.ಹೀಗಿದ್ದಾಗ ಅನ್ಯಾದ ವಿರುದ್ಧ ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ಯಾರು ಮಾತನಾಡುತ್ತಾರೆ. ಧ್ವನಿ ಎತ್ತಿದರೆ ಸಾಕು ಶೋಕಾಸ್ ನೋಟಿಸ್ ನೀಡುತ್ತಾರೆ. ಇದು ಅವರ ಪಕ್ಷದ ವಿಚಾರ ಇರಬಹುದು. ಆದರೆ ಧ್ವನಿ ಹತ್ತಿಕ್ಕುವ ಕೆಲಸವಿದು ಎಂದರು. ಮೋದಿ ಚಂದ್ರಯಾನ-2 ಉಡಾವಣೆಗೆ ಬಂದಾಗ ನೆರೆಪೀಡಿತ ಪ್ರದೇಶದ ವೈಮಾನಿಕ ಸಮೀಕ್ಷೆ ಏಕೆ ನಡೆಸಲಿಲ್ಲ ಎಂದು ಪ್ರಶ್ನಿಸಿದರು.

Leave a Comment