ಮೋರಿಗೆ ಬಿದ್ದ ಹಸು ರಕ್ಷಣೆ

ಮೈಸೂರು. ಜ.13- ಮೇಯುತ್ತ ಮೇಯುತ್ತ ಹಸುವೊಂದು ಏಳು ಅಡಿ ಆಳದ ಮೋರಿಗೆ ಬಿದ್ದ ಘಟನೆ ತ್ಯಾಗರಾಜ ರಸ್ತೆಯಲ್ಲಿ ನಡೆದಿದೆ.
ಶುಕ್ರವಾರ ಬೆಳಿಗ್ಗೆ ತ್ಯಾಗರಾಜ ರಸ್ತೆಯಲ್ಲಿರುವ ಏಳು ಅಡಿ ಆಳದ ದೊಡ್ಡ ಮೋರಿಯಲ್ಲಿ ಹಸುವೊಂದು ಮುಗ್ಗರಿಸಿ ಬಿದ್ದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಹಸು ಮೋರಿಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಮಹಾನಗರ ಪಾಲಿಕೆಗೆ ಕರೆ ಮಾಡಿ ತಿಳಿಸಿದ್ದು, ಧನುಷ್ ತಂಡ ಸ್ಥಳಕ್ಕಾಗಮಿಸಿ ಹಸುವನ್ನು ಮೇಲಕ್ಕೆತ್ತಿದ್ದಾರೆ. ಧನುಷ್ ತಂಡ ಮಳೆಗಾಲದಲ್ಲಿ ಮರ ಧರೆಗುರುಳಿದರೆ ಸ್ಥಳಕ್ಕೆ ತೆರಳಿ ತೆರವುಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಕಾರ್ಯನಿರ್ವಹಿಸುತ್ತಿತ್ತು. ಇದೀಗ ಹಸುವನ್ನು ಮೇಲಕ್ಕೆತ್ತಿ ಮೂಕಪ್ರಾಣಿಯನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದು ಸಾರ್ವಜನಿಕರ ಶ್ಲಾಘನೆಗೆ ಕಾರಣವಾಗಿದೆ.

Leave a Comment