ಮೋದಿ ಮತ್ತೆ ಪ್ರಧಾನಿಯಾದರೆ ಸಂವಿಧಾನ ಉಳಿಯದು

ಬೆಂಗಳೂರು,ಮಾ. ೧೩- ನರೇಂದ್ರ ಮೋದಿಯವರು ಮತ್ತೊಂದು ಅವಧಿಗೆ ಪ್ರಧಾನಿಯಾದರೆ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಯುವುದಿಲ್ಲ. ಅವರ ವಿರುದ್ಧ ಕರ್ನಾಟಕದಿಂದಲೇ ಜನಾಂದೋಲನ ಆರಂಭವಾಗಬೇಕಾಗಿದೆ ಎಂದು ಹೊಸದಾಗಿ ರಚನೆಗೊಂಡಿರುವ ಸಂವಿಧಾನದ ಉಳಿವಿಗಾಗಿ ಕರ್ನಾಟಕ ಸಂಘಟನೆಯ ಗೌರವಾಧ್ಯಕ್ಷ ಎ.ಕೆ.ಸುಬ್ಬಯ್ಯ ಅವರು ಇಂದಿಲ್ಲಿ ಹೇಳಿದರು.
ಅನೇಕ ಜನಪರ ಸಂಘಟನೆಗಳು ಒಗ್ಗೂಡಿ ರಚಿಸಿರುವ ಸಂವಿಧಾನದ ಉಳಿವಿಗಾಗಿ ಸಂಘಟನೆಯ ಆಶಯಗಳ ಕಿರುಹೊತ್ತಿಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಈ ದೇಶದ ಪ್ರಜಾಪ್ರಭುತ್ವ ಸಂವಿಧಾನ ಒಡೆಯುವಂತಹ ಹಿಂದುತ್ವವಾದಿಗಳು ಅಧಿಕಾರಕ್ಕೆ ಬರದ ಹಾಗೆ ಬಿಜೆಪಿ ಮೇಲುಗೈ ಸಾಧಿಸಿದಂತೆ ಜನಾಂದೋಲನ ಸೃಷ್ಟಿಸುವ ಉದ್ದೇಶದಿಂದ ಪಕ್ಷಾತೀತ ಜಾತ್ಯಾತೀತವಾಗಿ ಈ ಸಂಘಟನೆ ರೂಪಗೊಂಡಿದೆ ಎಂದು ಅವರು ಹೇಳಿದರು.
ಬಿಜೆಪಿಯನ್ನು ಸೋಲಿಸುವ ಕೆಲಸ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಿಂದಲೇ ಜನಾಂದೋಲನ ಆರಂಭವಾಗಬೇಕಿದೆ ಎಂದು ಹೇಳಿದ ಅವರು, ಬಿಜೆಪಿಯು ಓಟುಗಳನ್ನು ಒಡೆಯುವ ಕೆಲಸ ಮಾಡುತ್ತಿದೆ. ಅದು ಹೊಸ ಪಕ್ಷಗಳನ್ನು ಸೃಷ್ಟಿಸಿ ಆ ಎಲ್ಲಾ ಪಕ್ಷಗಳು ಕನಿಷ್ಟ 400 ಮತಗಳನ್ನು ಒಡೆಯುವಂತೆ ಮಾಡಿ  ಬಿಜೆಪಿ ಉಳಿವಿಗೆ ಮಾರ್ಗ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದರು.
ಅಮಿತ್ ಷಾ ರಾಜ್ಯಕ್ಕೆ ಬಂದಾಗ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಬಹಿರಂಗವಾಗಿ ಸಂವಿಧಾನ ಬದಲಾಯಿಸುವ ನೀಡಿಕೆಗಳನ್ನು ಬಿಜೆಪಿ ನೀಡಿದ್ದು ಇದೆ. ಕೇಸರಿಕರಣ ಪ್ರಬಲವಾಗಿ ಒಡೆಯುತ್ತಿವೆ ಎಂದ ಅವರು ಯಾವುದೇ ಕಾರಣಕ್ಕೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಒಡೆಯುವಂತಹ ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಬರದಂತೆ ಜನರ ಬಳಿಗೆ ಹೋಗಿ ಅರಿವು ಮೂಡಿಸುವಂತ ಕೆಲಸವನ್ನು ಈ ಸಂಘಟನೆಯು ಜನಾಂದೋಲನ ರೀತಿಯಲ್ಲಿ ಮಾಡಲಿದೆ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಚನೆಗೊಂಡಿರುವ ಸಂವಿಧಾನ ಉಳಿವಿಗಾಗಿ ಸಂಘಟನೆಗಳು ಪಕ್ಷಾತೀತ ಚಳುವಳಿ ಮಾಡುವ ಉದ್ದೇಶವನ್ನು ಹೊಂದಿದೆ. ಸಂವಿಧಾನ ವಿರೋಧಿಗಳನ್ನು ಮತಾಂಧರವನ್ನು ಸೋಲಿಸಬೇಕು. ಜನಸಾಮಾನ್ಯರ ಹಕ್ಕೋತ್ತಾಯಗಳಿಗಾಗಿ ಧ್ವನಿ ಎತ್ತುವ ಮತ್ತು ಜನರ ನೋವಿಗೆ ಧ್ವನಿಯಾಗುವ ಅಭ್ಯರ್ಥಿಗಳನ್ನು ಗೆಲ್ಲಿಸುವ ಉದ್ದೇಶದಿಂದ ರಚನೆಗೊಂಡಿದೆ.
ಕಾರ್ಯಕ್ರಮದಲ್ಲಿ ಪತ್ರಕರ್ತ ಇಂದುಧರ ಹೊನ್ನಾಪುರ, ಹಿರಿಯ ಲೇಖಕಿ ಡಾ.ವಿಜಯಮ್ಮ, ಮಾಜಿ ಸಚಿವೆ ಲಲಿತಾ ನಾಯಕ, ಪ್ರಜಾತಾಂತ್ರಿಕ ಜನರ ವೇದಿಕೆಯ ಪ್ರೋಫೆಸರ್ ನಗರಿ ಬಾಬಯ್ಯ, ವಿಚಾರವಾದಿಗಳ ಸಂಘದ ಪ್ರೋಫೆಸರ್  ನಗರಗೇರಿ ರಮೇಶ ಮುಂತಾದವರು ಉಪಸ್ಥಿತರಿದ್ದರು.

Leave a Comment