ಮೋದಿ ಭರವಸೆ: ರೋಸಿಹೋದ ಜನತೆ

ಪಾಟ್ನಾ, ಫೆ. ೩- ಮೂರು ದಶಕಗಳ ಹಿಂದೆ ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಭಾಷಣ ಮಾಡಿದ್ದ ಪಾಟ್ನಾದ ಗಾಂಧಿ ಮೈದಾನದ ವೇದಿಕೆ ಹಿನ್ನೆಲೆಯಿಂದಲೇ ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ `ಜನ್ ಆಕಾಂಕ್ಷಾ ಱ್ಯಾಲಿ` ಯನ್ನುದ್ದೇಶಿಸಿ ಭರ್ಜರಿ ಚುನಾವಣಾ ಪ್ರಚಾರ ಭಾಷಣವನ್ನು ಮಾಡಿದರು.
`ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಬಿಹಾರ ಸರ್ಕಾರ ಬಡವರ್ಗದವರಿಗೆ ಮತ್ತು ಜನಸಾಮಾನ್ಯ ಏನು ಮಾಡಿದೆ? ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ ಈ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಪ್ರಶ್ನೆ ಕೇಳುವ ಹಕ್ಕು ಬಿಹಾರದ ಜನತೆಗೆ ಇದೆ ಎಂದರು. ಪ್ರಧಾನಿ ಮೋದಿಯವರ ಘೋಷಣೆ ಮತ್ತು ಈಡೇರದ ಭರವಸೆಗಳನ್ನು ರೋಸಿ ಹೋಗಿದ್ದಾರೆ ಎಂದೂ ರಾಹುಲ್, ಪ್ರಧಾನಿ ಮೋದಿಯವರ ಈಡೇರದ ಭರವಸೆಗಳನ್ನು ಬಿಚ್ಚಿಟ್ಟರು.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ಆಯೋಜನೆ ಗೊಂಡಿದ್ದ ಬೃಹತ್ ಜನ್ ಆಕಾಂಕ್ಷಿ ಱ್ಯಾಲಿ ವಿರೋಧ ಪಕ್ಷಗಳ ಏಕತೆಗೆ ವೇದಿಕೆಯೂ ಆಗಿತ್ತು.
ಇಂದಿನ ಸಭೆಯಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳ ಮುಖ್ಯಮಂತ್ರಿಗಳಾದ ಅಶೋಕ್ ಗೆಲ್ಹೋಟ್, ಕಮಲ್ ನಾಥ್, ಭೂಕೇಶ್ ಭಾಗೆಲ್, ಆರ್.ಜೆ.ಡಿ ನಾಯಕ ತೇಜಸ್ವಿ ಯಾದವ್, ಉಪೇಂದ್ರ ಖುಷ್ವ್ ವಾವಾ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳ ನಾಯಕರು ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬಿಹಾರದ ಇಂದಿನ ರಾಹುಲ್ ಸಭೆಯನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಕಾಂಗ್ರೆಸ್‌, ಸಂಸದರು, ಶಾಸಕರು, ಪ್ರಧಾನಿ ಕಾರ್ಯಗಳು ಎಲ್ಲಾ ಅವಕಾಶಗಳನ್ನು, ಸಾಧ್ಯತೆಗಳನ್ನು ಬಳಸಿಕೊಂಡು ಯತ್ನಿಸಿದ್ದರು.
ಅವರ ಯತ್ನಕ್ಕೆ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ ಎನ್ನುವುದಕ್ಕೆ ಎಂದು ಸಭೆಯಲ್ಲಿ ಸೇರಿದ್ದ ಹೆಚ್ಚು ಸಂಖ್ಯೆಯ ಸಭಿಕರೇ ಸಾಕ್ಷಿ.

Leave a Comment