ಮೋದಿ ‘ಬಯೋಪಿಕ್’ ನಲ್ಲಿ ಜಶೋದಾ ಬೆನ್ ಯಾರು?

ನವದೆಹಲಿ, ಫೆ 12- ಪ್ರಧಾನಿ ನರೇಂದ್ರ ಮೋದಿಯವರ ಜೀವನಾಧರಿತ ಕುರಿತು ಬರುತ್ತಿರುವ ಚಿತ್ರದಲ್ಲಿ ಕಿರುತೆರೆ ತಾರೆ ಬರ್ಕಾ ಬಿಸ್ಟ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರದಲ್ಲಿ ವಿವೇಕ್ ಒಬೆರಾಯ್ ನಟಿಸುತ್ತಿದ್ದು, ಮೋದಿ ಪತ್ನಿ ಜಶೋದಾ ಬೆನ್ ಪಾತ್ರದಲ್ಲಿ ಬರ್ಕಾ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ನಿರ್ಮಾಪಕರು ಚಿತ್ರದ ತಾರಾಗಣದ ಸಂಪೂರ್ಣ ವಿವರವನ್ನು ಈಗ ಪ್ರಕಟಿಸಿದ್ದಾರೆ. ಬೊಮನ್ ಇರಾನಿ, ಝರೀನಾ ವಹಾಬ್, ಬರ್ಕಾ ಬಿಸ್ಟ್ ಸೇನ್ ಗುಪ್ತಾ, ಮನೋಜ್ ಜೋಶಿ, ಪ್ರಶಾಂತ್ ನಾರಾಯಣ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ‘ಪಿಎಂ ನರೇಂದ್ರ ಮೋದಿ’ ಎಂದು ಶೀರ್ಷಿಕೆ ನೀಡಲಾಗಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಜನವರಿ 7 ರಂದು ಅನಾವರಣಗೊಂಡಿದೆ.

Leave a Comment