ಮೋದಿ ಪ್ರಧಾನ ಸಲಹೆಗಾರರಾಗಿ ಸಿನ್ಹಾ ನೇಮಕ

ನವದೆಹಲಿ, ಸೆ. ೧೧- ಕೇಂದ್ರ ಸಂಪುಟ ಸಚಿವಾಲಯದ ನಿವೃತ್ತ ಕಾರ್ಯದರ್ಶಿ ಪಿ.ಕೆ. ಸಿನ್ಹಾ ಅವರನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಪ್ರಧಾನ ಸಲಹೆಗಾರರಾಗಿ ನೇಮಕ ಮಾಡಲಾಗಿದೆ.

ಈ ಸಂಬಂಧ ಇಂದು ಅಧಿಕೃತ ಆದೇಶ ಹೊರ ಬಿದ್ದಿದೆ. ಸಿನ್ಹಾ ಅವರನ್ನು ಕಳೆದ ತಿಂಗಳು ಪ್ರಧಾನಮಂತ್ರಿಯವರ ಕಚೇರಿಯ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು.

ಸಚಿವ ಸಂಪುಟದ ನೇಮಕಾತಿ ಸಮಿತಿ ಸಿನ್ಹಾ ಅವರನ್ನು ಪ್ರಧಾನಮಂತ್ರಿಯವರ ಪ್ರಧಾನ ಸಲಹೆಗಾರರನ್ನಾಗಿ ನೇಮಕ ಮಾಡಲು ಅನುಮೋದನೆ ನೀಡಿದೆ. ಸಿನ್ಹಾ ಅವರ ನೇಮಕಾತಿ ಆದೇಶ ಇಂದಿನಿಂದ ಜಾರಿಗೆ ಬಂದಿದೆ.

Leave a Comment