ಮೋದಿ ಟೀಕೆ- ಪಾಕ್ ಸಚಿವನಿಗೆ ತರಾಟೆ

ನವದೆಹಲಿ, ಆ. ೨೪- ಫ್ರಾನ್ಸ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಗುತ್ತಿರುವ ಸ್ವಾಗತ ಪರಿಯನ್ನು ಕಂಡು ಪಾಕ್ ಬೆಚ್ಚಿ ಬಿದ್ದಿದೆ.
ಪ್ರಧಾನಿ ಮೋದಿ ಅವರು ಫ್ರಾನ್ಸ್‌ಗೆ ಭೇಟಿ ನೀಡಿದ್ದನ್ನು ಹಾಗೂ ಫ್ರಾನ್‌ನಿಂದ ದೊರೆತಿರುವ ಅಭೂತಪೂರ್ವ ಸ್ವಾಗತವನ್ನು ಸಹಿಸಿಕೊಳ್ಳಲಾಗದ ಪಾಕ್ ಸಚಿವ ಮಾಡಿದ್ದ ಟ್ವೀಟ್‌ಗೆ ಭಾರಿ ವಿರೋಧ ವ್ಯಕ್ತವಾಗಿದೆ.
ಪಾಕ್‌ನ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಫಾವದ್ ಹುಸೇನ್, ಮೋದಿಯವರ ವೀಡಿಯೋ ಟ್ವೀಟ್‌ವೊಂದನ್ನು ರೀ ಟ್ವೀಟ್ ಮಾಡಿ ಈ ನಾಟಕಕ್ಕೆ ಎಷ್ಟು ಹಣ ಖರ್ಚಾಗಿದೆ ಎನ್ನುವ ವಿವಾದಾತ್ಮಕ ಒಕ್ಕಣಿಕೆಯನ್ನು ನಮೂದಿಸಿದ್ದ.
ಆದರೆ, ಸಚಿವನ ಈ ಟ್ವೀಟ್‌ಗೆ ಭಾರತದ ಮೇಲೆ ನಿಮಗಿರುವ ಹೊಟ್ಟೆಕಿಚ್ಚು ಇದರಿಂದ ಸಾಬೀತಾಗಿದೆ. ನೀವೊಬ್ಬ ಬಿಕಾರಿ, ಭಾರತ ವಿಶ್ವದ ೫ನೇ ಶಕ್ತಿಶಾಲಿ ರಾಷ್ಟ್ರ. ನಿಮಗೇನು ಗೊತ್ತು ಭಾರತದ ಶಕ್ತಿ. ಇಂತಹ ಹಲವಾರು ಟ್ವೀಟ್‌ಗಳು ಹರಿದು ಬರುವ ಮೂಲಕ ಭಾರತದ ನಡೆಯನ್ನು ಪ್ರಶಂಸಿಲಾಗಿದ್ದು, ಪಾಕಿಸ್ತಾನವನ್ನು ಬಿಕಾರಿ ದೇಶವೆಂದು ಹೀಯಾಳಿಸಿದ್ದಾರೆ..
ಜಮ್ಮು-ಕಾಶ್ಮೀರ ವಿಶೇಷಾಧಿಕಾರ ರದ್ಧತಿ ನಂತರ ವಿಶ್ವದ ಇತರ ರಾಷ್ಟ್ರಗಳ ಮುಸ್ಲಿಮರ ವಿರೋಧ ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಭಾರತಕ್ಕೆ ಪಾಕ್ ನೀಡಿತ್ತು. ಆದರೆ, ಫ್ರಾನ್ಸ್ ರಾಜಧಾನಿ ಪ್ಯಾರೀಸ್ ವಿಮಾನ ನಿಲ್ದಾಣದಲ್ಲಿ ವೊಹರಾ ಮುಸ್ಲಿಮರು ಭಾರತದ ತ್ರಿವರ್ಣ ಧ್ವಜದೊಂದಿಗೆ ‘ಭಾರತ್ ಮಾತಾಕಿ ಜೈ’ ಎನ್ನುವ ಘೋಷಣೆ ಕೂಗಿ ಪ್ರಧಾನಿ ಮೋದಿಯವರನ್ನು ಅದ್ದೂರಿಯಾಗಿ ಸ್ವಾಗಿತಿಸಿದ್ದರು.
೩೭೦ ವಿಧಿ ರದ್ದತಿಗೆ ಸಂಬಂಧಿಸಿದಂತೆ ಫ್ರಾನ್ಸ್ ಮತ್ತು ಅರಬ್ ಸಂಯುಕ್ತ ರಾಷ್ಟ್ರಗಳು ಈಗಾಗಲೇ ಭಾರತಕ್ಕೆ ತಮ್ಮ ಬೆಂಬಲ ಸೂಚಿಸಿದೆ.

Leave a Comment