ಮೋದಿ ಜನ ವಿರೋಧಿ ಆರ್ಥಿಕ ನೀತಿಗೆ ಖಂಡನೆ

ರಾಯಚೂರು.ಅ.17- ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ತಪ್ಪು ಮತ್ತು ಜನ ವಿರೋಧಿ ಆರ್ಥಿಕ ನೀತಿಯಿಂದಾಗಿ ಪ್ರತಿಯೊಂದು ರಂಗವೂ ತೀವ್ರ ಮುಗ್ಗಟ್ಟಿಗೆ ಗುರಿಯಾಗಿ, ಹಲವು ಉದ್ಯಮಿಗಳು ಬಾಗಿಲು ಮುಚ್ಚಿ, ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುತ್ತಿರುವುದಾಗಿ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಭಂಡಾರಿ ಹಾಗೂ ಜಿಲ್ಲಾ ಉಸ್ತುವಾರಿ ಎಂ.ಆರ್. ಭೇರಿ ಅವರು ಆರೋಪಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮುಕ್ತ ವ್ಯಾಪಾರ ಒಪ್ಪಂದದಡಿ ಸುಂಕ ರಹಿತ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿರುವುದು ಕೇಂದ್ರದ ನಿಲುವು ರೈತರ ಆತ್ಮಹತ್ಯೆ ದುಪ್ಪಟ್ಟುಗೊಳಿಸಲಿದೆ. ಹೈನುಗಾರಿಕೆ, ಕೌಟುಂಬಿಕ, ಆದಾಯದ ಮೂಲವಾಗಿದೆ. ಉತ್ಪಾದಕರಿಗೆ ಕೊಡಲಿ ಪೆಟ್ಟು ನೀಡಿದಂತಾಗುತ್ತದೆಂದು ಬಹುಜನ ಸಮಾಜದ ಪಕ್ಷದ ಜಿಲ್ಲಾ ಉಸ್ತುವಾರಿ ಎಂ.ಆರ್. ಭೇರಿ ಅವರು ಮಾತನಾಡುತ್ತಾ, ದೇಶದ ದೊಡ್ಡ ಹಾಲು ಉತ್ಪಾದನೆ ಸಂಸ್ಥೆಗಳಾದ ಗುಜರಾತಿನ ಅಮೂಲ್, ಕರ್ನಾಟಕದ ಕೆಎಂಎಫ್ ಹೆಚ್ಚಿನ ಅಗತ್ಯ ಪ್ರಮಾಣದ ಹಾಲು ಉತ್ಪಾದಿಸುತ್ತಿವೆ. ದೇಶದ್ಯಾದಂತ 10 ಕೋಟಿ ಕುಟುಂಬಗಳು ಹೈನುಗಾರಿಕೆ ಅಳವಡಿಸಿಕೊಂಡಿದ್ದಾರೆ. ವಿದೇಶಗಳಿಂದ ಹಾಲು ಉತ್ಪಾದನಾ ಸಾಮಾಗ್ರಿಯನ್ನು ಆಮದು ಮಾಡಿಕೊಂಡರೆ, ಇದನ್ನು ನಂಬಿಕೊಂಡ ದೇಶಿಯ ಹಾಲು ಉತ್ಪಾದನೆಗಳ ಕುಟುಂಬಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ.
ಕೃಷಿಗೆ ಹಣ ಹೂಡುವ ರೈತರಿಗೆ ಬರುವ ಬೆಳೆಯಿಂದ ಲಾಭ ಸಿಗದೇ ರೈತರು ನಷ್ಟಗೊಳ್ಳುತ್ತಿದ್ದಾರೆ. ಭೀಕರ ಬರ ಮತ್ತು ಅತಿವೃಷ್ಠಿಯ ಪರಿಣಾಮ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಈ ನೀತಿ ಕೆಎಂಎಫ್ ಮತ್ತು ಅಮೂಲ್ ಸಹಕಾರಿ ಸಂಸ್ಥೆಗಳನ್ನು ನಂಬಿಕೊಂಡ ಜನರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಅತ್ಯಾಧುನಿಕ ಮತ್ತು ಭಾರೀ ಪ್ರಮಾಣದ ಹೈನುಗಾರಿಕೆಯಲ್ಲಿ ತೊಡಗಿರುವ ನ್ಯೂಜಿಲ್ಯಾಂಡ್ ಶೇ.93 ಹಾಗೂ ಆಸ್ಟೇಲಿಯಾ ಶೇ.95 ರಷ್ಟು ಹಾಲು ಉತ್ಪಾದನೆಗಳನ್ನು ರಫ್ತು ಮಾಡುತ್ತವೆ. ಅಗ್ಗದ ದರಕ್ಕೆ ಹಾಲು ದೊರೆಯತರೇ, ದೇಶಿಯ ರೈತರಿಗೆ ತೀವ್ರ ತೊಂದರೆಯಾಗುತ್ತದೆಂದು ಆತಂಕ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಕೇಂದ್ರ ಸರ್ಕಾರ ಹಾಲು ಉತ್ಪಾದನಾ ಆಮದು ನೀತಿ ತಡೆಯಬೇಕು. ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ.ಬಸವರಾಜ ಭಂಡಾರಿ, ಹನುಮಂತಪ್ಪ ವಕೀಲರು, ವೆಂಕನಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment