ಮೋದಿಗೆ ಸೋಲಿನ ರುಚಿ ಕಾಂಗ್ರೇಸ್ ವಿಶ್ವಾಸ

ನವದೆಹಲಿ, ಸೆ.೧೦ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ೨೦೧೯ರ ಲೋಕ ಸಭಾ ಚುನಾವಣೆಯಲ್ಲಿ ಸೋಲಿಸುವ ಭರವಸೆ ಇದೆ ಎಂದು

ಕಾಂಗ್ರೇಸ್ ಹಿರಿಯ ನಾಯಕ ಆನಂದ್ ಶರ್ಮಾ ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯ ಕಾರಿಣಿಯಲ್ಲಿ ಕಾಂಗ್ರೇಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳ ಮಹಾ ಘಟ ಬಂಧನ ಕುರಿತಂತೆ ಪ್ರಧಾನಿ ಮೋದಿ ಅವರು ಮಾಡಿದ್ದ ಗೇಲಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿ ಮಾತನಾಡಿರುವ ಶರ್ಮಾ, “೧೦ ವರ್ಷಗಳ ಕಾಂಗ್ರೇಸ್ ಆಡಳಿತ
ಅವಧಿಯಲ್ಲಿ ದೇಶ ಅದ್ಭುತ ಅಭಿವೃದ್ಧಿ ಸಾಧಿಸಿತ್ತು ಎಂಬುದನ್ನು ಅಂಕಿ ಅಂಶಗಳೇ ಹೇಳುತ್ತವೆ. ಜಗತ್ತು ಅದನ್ನು ಅನುಮೋದಿಸಿದೆ. ನಮ್ಮ ದೂರ ದೃಷ್ಟಿ ಸ್ಪಷ್ಟ
ವಾಗಿತ್ತು . ನಾವು ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ನಂಬಿಕೆ ಇಟ್ಟಿದ್ದೆವು. ದೇಶದ ಏಕತೆ ಮತ್ತು ಸಮಗ್ರತೆ ನಮ್ಮ ಸಿದ್ದಾಂತ ವಾಗಿತ್ತು” ಎಂದಿದ್ದಾರೆ.
ಇದೇ ವೇಳೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ “ಇದು ಅವರ ಉದ್ಘಟತನ ತೋರಿಸುತ್ತದೆ. ಚುನಾವಣೆ ಪ್ರತಿ ೫ ವರ್ಷಕ್ಕೊಮ್ಮೆ ಬರುತ್ತದೆ. ಜನಾ ಇಂತಹ ಉದ್ಘಟತನವನ್ನು ಸಹಿಸಿಕೊಳ್ಳುವುದಿಲ್ಲ ” ಎಂದಿದ್ದಾರೆ. ನಿನ್ನೆ ಬಿಜೆಪಿ ಪಕ್ಷದ ಅಚಲತೆ ಕುರಿತಂತೆ ಮಾತನಾಡಿದ್ದ ಶಾ, ” ಬಿಜೆಪಿ ೨೦೧೯ ರ ಚುನಾವಣೆಯನ್ನು ಗೆದ್ದ ನಂತರ ಮುಂದಿನ ೫೦ ವರ್ಷಗಳು ಯಾರೂ ಪಕ್ಷವನ್ನು ಸೋಲಿಸಲಾರರು ” ಎಂದಿದ್ದರು.
ಕಾಂಗ್ರೇಸ್ ಕರೆ ನೀಡಿರುವ ಇಂದಿನ ಭಾರತ್ ಬಂದ್ ಅನ್ನು ಸಮರ್ಥಿಸಿಕೊಂಡಿರುವ ಆನಂದ್ ಶರ್ಮಾ” ದೇಶದ ಜನತೆಯ ಅಳಲಿಗೆ ಕಿವಿ ಮುಚ್ಚಿಕೊಂಡಿರುವ
ಸರಕಾರವನ್ನು ಎಚ್ಚರಿಸುವುದು ವಿರೋಧ ಪಕ್ಷದ ಕರ್ತವ್ಯ” ಎಂದಿದ್ದಾರೆ.

Leave a Comment