ಮೋದಿಗೆ ಕಾಂಗ್ರೆಸ್ ಜೆಡಿಎಸ್‍ನಿಂದ ಎಂಟು ಪ್ರಶ್ನೆ

 

ಕಲಬುರಗಿ ಮಾ 5: ನಾಳೆ ನಗರಕ್ಕೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 8 ಪ್ರಶ್ನೆಗಳಿಗೆ ಉತ್ತರಿಸುವಂತೆ ಕಾಂಗ್ರೆಸ್ ಮುಖಂಡ ಅಳಂದ ಮಾಜಿ ಶಾಸಕ ಬಿ.ಆರ್ ಪಾಟೀಲ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಬಸವರಾಜ ತಡಕಲ್ ಮತ್ತಿತರ ಮುಖಂಡರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

1) ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಠಿಸುವದಾಗಿ ಹೇಳೀದ್ದೀರಿ .ಅದನ್ನು ಈಡೇರಿಸಿಲ್ಲ ಯಾಕೆ? 2) ನಿಮ್ಮ 5 ವರ್ಷದ   ಅಧಿಕಾರದ ಅವಧಿಯಲ್ಲಿ ಲೋಕಪಾಲ ನೇಮಿಸಿಲ್ಲವೇಕೆ ? 3) ಅಧಿಕಾರಕ್ಕೆ ಬಂದ 100 ದಿನದಲ್ಲಿ ವಿದೇಶದಲ್ಲಿನ ಕಪ್ಪುಹಣ ತಂದು ಜನರ ಖಾತೆಗೆ 15 ಲಕ್ಷ ರೂ ಹಾಕುವ ಭರವಸೆ ನೀಡಿದ್ದೀರಿ. ಅದು ಏನಾಯ್ತು ? 4)ಭಾರತ ಮಾತೆಯ ಹೆಮ್ಮೆಯ ಪುತ್ರರೆಂದು 56 ಇಂಚಿನ ಎದೆ ಉಬ್ಬಿಸಿ ಹೇಳಿಕೊಳ್ಳುವ ತಾವು, ದಿಲ್ಲಿಯಲ್ಲಿ  ಸಂವಿಧಾನ ಪ್ರತಿ ಸುಟ್ಟಾಗ ,ಉತ್ತರಪ್ರದೇಶದಲ್ಲಿ ಮಹಾತ್ಮಾ ಗಾಂಧಿ ಹತ್ಯೆಯ ಅಣಕು ಪ್ರದರ್ಶನ ಮಾಡಿದವರ ಕುರಿತು ಮೌನ ತಳೆದದ್ದು ಏಕೆ? 5)ಬಿಜೆಪಿ ಸರ್ಕಾರಗಳ ಅವಧಿಯಲ್ಲಿಯೇ ಕಾರ್ಗಿಲ್ ಯುದ್ಧ ನಡೆಯಿತು. ಭಯೋತ್ಪಾದಕನೊಬ್ಬನನ್ನು ಒಯ್ದು ಕಂದಹಾರಕ್ಕೆ ಬಿಟ್ಟು ಬಂದಿರಿ. ಸಂಸತ್ ಮೇಲೆ ದಾಳಿ, ಉರಿ ಮತ್ತು ಪುಲ್ವಾಮಾ ದಾಳಿ ನಡೆದವು.ಇದು ನಿಮ್ಮ ಸುಭದ್ರ ಸರ್ಕಾರದ ಲಕ್ಷಣವೇ ?6) ರಾಜ್ಯದ ಬಿಜೆಪಿಯ 9 ಲಿಂಗಾಯತ ಎಂಪಿಗಳಲ್ಲಿ ಒಬ್ಬರಿಗೂ ಸಚಿವ ಸ್ಥಾನ ಮತ್ತು ಡಾ ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ನೀಡಲಿಲ್ಲವೇಕೆ ? 7) ರಫೆಲ್ ಹಗರಣದ ಬಗ್ಗೆ ಜಂಟಿ ಸದಸ ಸಮಿತಿ ರಚಿಸಲು ಒಪ್ಪದೇ ಹಗರಣದಲ್ಲಿ ಭಾಗಿಯಾದ ನೀವು ಕರ್ನಾಟಕಕ್ಕೆ ಬರಲು ಯಾವ ನೈತಿಕತೆ ಇದೆ.? 8) ಜನಬಳಕೆ ವಸ್ತುಗಳ ಬೆಲೆ ಹೆಚ್ಚುತ್ತಿರುವದಕ್ಕೆ ಕಾರಣ ? ಈ ಪ್ರಶ್ನೆಗಳಿಗೆ ಪ್ರಾಮಾಣಿಕತೆಯಿಂದ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಉತ್ತರಿಸುವಂತೆ  ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಅಲ್ಲಮಪ್ರಭು ಪಾಟೀಲ, ಸಿಬಿ ಪಾಟೀಲ ಓಕಳಿ, ಪ್ರೊ ಆರ್ ಕೆ ಹುಡಗಿ,ಗಣೇಶ ಪಾಟೀಲ ಉಪಸ್ಥಿತರಿದ್ದರು..

Leave a Comment