ಮೋಡಬಿತ್ತನೆಗೆ ಆಗ್ರಹ; ವಿಕರವೇ ಪ್ರತಿಭಟನೆ

ದಾವಣಗೆರೆ, ಜು. 18; ಮೋಡಬಿತ್ತನೆಗೆ ಆಗ್ರಹಿಸಿ ವಿಶ್ವಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ಯತರು ಇಂದು ಜಯದೇವವೃತ್ತದಲ್ಲಿ ಪ್ರತಭಟನೆ ನಡೆಸಿ ರಾಜ್ಯ ಸರ್ಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಮಲೆನಾಡು, ಕರಾವಳಿ ಭಾಗದಲ್ಲಿ ಬಿಟ್ಟರೆ ಬಹುತೇಕ ಜಿಲ್ಲೆಗಳಲ್ಲಿ ಸಮರ್ಪಕವಾಗಿ ಮುಂಗಾರು ಮಳೆಯಾಗಿಲ್ಲ, ಇದರಿಂದಾಗಿ ಕುಡಿಯುವ ನೀರಿನ ಕೊರತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ರಾಜ್ಯದ ಸಾವಿರಾರು ಗ್ರಾಮಗಳಿಂದ ಜನರು ನಗರ, ಪಟ್ಟಣ, ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮತ್ತು ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರದಂತಹ ಪ್ರದೇಶಗಳಲ್ಲಿ ಮುಂಗಾರು ಕ್ಷೀಣವಾಗಿದೆ. ರಾಜ್ಯದ ಅನೇಕ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಕುಸಿದೆ. ಬೋರ್ ವೆಲ್ ಗಳಲ್ಲಿ ಅಂತರ್ಜಾಲ ಪಾತಳಕ್ಕಿಳಿದಿದೆ. ರಾಜ್ಯದ್ಯಂತ ಅನೇಕ ದೇವಸ್ಥಾನಗಳಲ್ಲಿ ಮಳೆಗಾಗಿ ವಿಶೇಷ ಪೂಜೆಗಳು ನಡೆಯುತ್ತಿದೆ. ಕೆಲವು ಗ್ರಾಮಗಳಲ್ಲಿ ಮಳೆಗಾಗಿ ಕತ್ತೆಗಳ ಮದುವೆ ಮುಂತಾದ ಆಚರಣೆಗಳನ್ನು ಮಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಮತ್ತು ವಿರೋಧ ಪಕ್ಷಗಳು ರಾಜ್ಯದ ರೈತರ ಮತ್ತು ಜನರು ಹಿತಸಕ್ತಿ ಕಾಪಾಡುವುದು ಮರೆತು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ಇನ್ನು ಮೋಡಬಿತ್ತನೆಯ ಹೊಣೆ ಹೊತ್ತಿರುವ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಜೂನ್ ಮತ್ತು ಜುಲೈನಲ್ಲಿ ಮೋಡಬಿತ್ತನೆ ಮಾಡುತ್ತೇವೆ ಎಂದು ಸುಳ್ಳು ಆಶ್ವಾಸನೆ ಕೊಡುತ್ತಲೇ ಇದ್ದಾರೆ. ರಾಜ್ಯ ಸರ್ಕಾರ ಮೋಡ ಬಿತ್ತನೆ ಮಾಡಲು 91 ಕೋಟಿ ರೂ ಮೊತ್ತದ ಟೆಂಡರ್ ಜೂನ್ ತಿಂಗಳಲ್ಲೇ ರಾಜ್ಯ ಸಚಿವ ಸಂಪುಟದ ಅನುಮೋದನೆಯನ್ನು ಸಹ ಪಡೆದುಕೊಂಡಿದೆ. ಆದರೆ ಅಧಿಕಾರಿಗಳು ಬೆಂಗಳೂರಿನ ಜಿಕೆವಿಕೆ, ಗದಗ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ರಾಡರ್ ಅಳಡಿಕೆ ಮಾಡುತ್ತಿದ್ದೇವೆ. ಅಮೇರಿಕದಿಂದ ವಿಮಾನಗಳು ಬರಲಿವೆ ಎಂದು ಸಬೂಬು ಹೇಳುತ್ತಲೇ ಇದ್ದಾರೆ. ಇನ್ನೇನು ಮುಂಗಾರು ಕೊನೆಗೊಳ್ಳಲಿದೆ. ತೇವಾಂಶವಿರುವ ಮೋಡಗಳು ಇಲ್ಲದಿದ್ದರೆ ಇವರು ಮೋಡ ಬಿತ್ತನೆ ಮಾಡಲು ಹೇಗೆ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಳೆದ 2003 ರಲ್ಲಿ ಅದೇ ರೀತಿ ವಿಳಂಬ ಮಾಡಿದ್ದರಿಂದ ಆಗ ಮಾಡಿದ ಮೋಡ ಬಿತ್ತನೆ ಯಶಸ್ವಿಯಾಗಿಲಿಲ್ಲ, ಜಾನುವಾರುಗಳು ಮೇವಿಲ್ಲದೆ ಸಾಯುತ್ತಿದೆ. ರೈತರು ಸರಿಯಾದ ಮಳೆ ಬಾರದಿದ್ದರೆ ಹತಾಶರಾಗಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಅಸ್ಥಿರತೆಯಿಂದ ಕೂಡಿದ್ದರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಕೂಡಲೇ ಮೋಡ ಬಿತ್ತನೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ, ಅಮ್ಜದ್ ಅಲಿ, ಕೆ.ಹೆಚ್.ಮಹಬೂಬ್, ದಯಾನಂದ್, ಎಂ.ರವಿ, ಸಂತೋಷ್ ದೊಡ್ಮನಿ, ಬಿಲಾಲ್, ಗದಿಗೆಪ್ಪ, ಆಜಿಮ್ ರಜ್ವಿ, ಬಾಬುರಾವ್, ಪ್ರವೀಣ್, ಸೋಮಶೇಖರ್,ನಾಗರಾಜ್, ಸ್ವಾಮಿ, ವಿಜಯಕುಮಾರ್, ಮಂಜು ಗಂಗೂರ್ ಸೇರಿದಂತೆ ಮತ್ತಿತರರಿದ್ದರು.
ಬಾಕ್ಸ್
ರಾಜ್ಯ ಸರ್ಕಾರ ಕುಂಟು ನೆಪಗಳನ್ನು ಹೇಳುವುದನ್ನು ಬಿಟ್ಟು ಆದಷ್ಟು ಬೇಗ ಮೋಡ ಬಿತ್ತನೆಗೆ ಮುಂದಾಗಬೇಕು. ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಅಧಿಕಾರ ದಾಹಕ್ಕಾಗಿ ಏನಾದರು ಮಾಡಿಕೊಳ್ಳಲಿ ಆದಷ್ಟು ಬೇಗ ಮೋಡ ಬಿತ್ತನೆ ಮಾಡಬೇಕು.ತೇವಾಂಶ ಕಡಿಮೆಯಾದ ನಂತರ ಮೋಡ ಬಿತ್ತನೆ ಕೈಗೊಳ್ಳಲು ಸಾಧ್ಯವಿಲ್ಲ. ಈ ವರ್ಷ ರಾಜ್ಯದಲ್ಲಿ ಮುಂಗಾರು ವಿಫಲವಾಗಿದೆ. ಶೇ.30 ರಷ್ಟು ಮಳೆಯಾಗಿಲ್ಲ, ಒಂದು ತಿಂಗಳಿನಿಂದ ಮೋಡ ಬಿತ್ತನೆ ಮಾಡುವುದಾಗಿ ಸುಳ್ಳು ನೆಪ ಹೇಳುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಮೋಡ ಬಿತ್ತನೆಗೆ ಕ್ರಮಕೈಗೊಂಡಿಲ್ಲ, ಇದೆಲ್ಲಾ ಸುಳ್ಳು ಭರವಸೆ ಕೈಬಿಟ್ಟು ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ಮುಂದಾಗಬೇಕಾಗಿದೆ. -ಕೆ.ಜಿ.ಯಲ್ಲಪ್ಪ ರಾಜ್ಯಾಧ್ಯಕ್ಷರು,ವಿಕರವೇ.

Leave a Comment