ಮೋಜೊಗೆ ಮನ್ನಣೆ

ಮೋಜೊ ಚಿತ್ರ ಇಲ್ಲಿ ಇನ್ನೂ ತೆರೆಕಂಡಿಲ್ಲ ಆಗಲೇ ಫಾಗ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಗಳಿಸಿದೆ. ಜೊತೆಗೆ ಇತರೆ ನಾಲ್ಕು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಇದೇ ರೀತಿಯ ಉತ್ತಮ ಪ್ರತಿಕ್ರಿಯೆ ಇಲ್ಲಿಯ ಪ್ರೇಕ್ಷಕರಿಂದಲೂ ದೊರೆಯುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ನಿರ್ದೇಶಕ ಶ್ರೀಶ. ಸಿಕ್ಸ್ತ್ ಸೆನ್ಸ್ ಕುರಿತಾದ ಕಥಾವಸ್ತುವಿನ ಚಿತ್ರ ಕನ್ನಡದಲ್ಲಿ ಬಂದಿಲ್ಲ. ಸಿಕ್ಸ್ತ್ ಸೆನ್ಸ್‌ನಿಂದಾಗಿ ಒಂದು ಕೊಲೆಯೊಂದಿಗೆ ಕಥೆ ಜೋಡಣೆಗೊಳ್ಳುತ್ತದೆ.

ಇದೊಂದು ಮರ್ಡರ್ ಮಿಸ್ಟ್ರಿ ಥ್ರಿಲ್ಲರ್ ಚಿತ್ರ ಎನ್ನುವ ಶ್ರೀಶ, ಮೋಜೊ ರಾಮರಾಮರೇ, ಯುಟರ್ನ್, ಲಾಸ್ಟ್ ಬಸ್ ಚಿತ್ರಗಳಂತೆ ಹೊಸ ಪ್ರಯೋಗದ   ಚಿತ್ರವೆನ್ನುತ್ತಾರೆ. ಇದೇ ತಿಂಗಳ ೨೭ರಂದು ರಾಜ್ಯದ್ಯಾಂತ ಚಿತ್ರ ಬಿಡುಗಡೆ ಮಾಡುವ ತಯಾರಿ ನಡಸಿದ್ದಾರೆ. ಚಿತ್ರದ ಮನಸು ಬಿಚ್ಚಿ ಹಾಡು ಹಿಟ್ ಆಗಿದೆ. ಚಿತ್ರದ ಸನ್ನಿವೇಶದ ಆಯಾ ಸಂದರ್ಭಕ್ಕೆ ಹೊಂದುವ ರಾಗದಲ್ಲಿಯೇ ಹಾಡುಗಳಿಗೆ ರಾಗ ಸಂಯೋಜಿಸಿರುವುದಾಗ ಹೇಳಿದ್ದಾರೆ ಹಾಡುಗಳ ಸಂಗೀತ ಸಂಯೋಜಕ  ಅರವಿಂದ್.

ಚಿತ್ರದಲ್ಲಿ ರಂಗಭೂಮಿ ಕಲಾವಿದರೇ ಬಹುತೇಕ ನಟಿಸಿದ್ದಾರೆ ನಾಯಕ ಮನು ಕೂಡ ನಾಟಕದಿಂದನೇ ಬಂದವರು. ಇದಕ್ಕೆ ಮೊದಲು ಕಾ ಚಿತ್ರದಲ್ಲಿ ಐದು ಜನ ಹೀರೋಗಳಲ್ಲಿ ಒಬ್ಬರಾಗಿ ನಟಿಸಿದ್ದಾರೆ. ಈ ದೃಷ್ಟಿಯಿಂದ ಅವರಿಗೆ ಮೋಜೊ ಏಕೈಕ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಮೊದಲ ಚಿತ್ರ. ಹಾಗೆ ನಾಯಕಿ ಅನುಷಾಗೆ ನಾಟಕದಲ್ಲಿ ನಟಿಸಿದ ಅನುಭವವಿದೆ ಸಿನೆಮಾ ಇದು ಮೊದಲು. ಇಂಜೀನಿಯರ್ ಆಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು ನಟನೆ ಬಗ್ಗೆ ಅಪಾರ ಸೆಳೆತವಿರುವ ಕಾರಣ ಬಣ್ಣಹಚ್ಚಿ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಈಗ ಸಿನೆಮಾಕ್ಕೆ ಮುಖ ಮಾಡಿದ್ದಾರೆ. ಅವರಿಗೆ ಮೋಜೊ ಚಿತ್ರತಂಡದ ಜೊತೆ ಸಿನೆಮಾಕ್ಕಾಗಿ ಮೊದಲು ಕೆಲಸ ಮಾಡಿದ್ದು ಒಳ್ಳೆಯ ಅನುಭವ ಕೊಟ್ಟಿದೆ
ಯಂತೆ.

Leave a Comment