ಮೋಗಾ  ದಲ್ಲಿ ಕೃಷಿ ತ್ಯಾಜ್ಯ ಸುಟ್ಟ 1,500 ಕ್ಕೂ ಪ್ರಕರಣಗಳು ದಾಖಲು

 ಮೋಗಾ ,  ನ 7 – ಜಿಲ್ಲೆಯಲ್ಲಿ ಗುರುವಾರ ಕೃಷಿ ತ್ಯಾಜ್ಯ ಸುಟ್ಟ 493 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಈ ಪ್ರಕರಣಗಳ ಸಂಖ್ಯೆ 1,500ಕ್ಕೇರಿದೆ.

  ಕೃಷಿ ತ್ಯಾಜ್ಯ ಸುಡುವಿಕೆಗೆ ಸಂಬಂಧಿಸಿ 300 ಎಫ್‌ಐಆರ್ ಗಳನ್ನು ದಾಖಲಿಸಲಾಗಿದೆ. ತಮ್ಮ ಹೊಲಗಳಲ್ಲಿ ಒಣಹುಲ್ಲು ಸುಟ್ಟ  90 ರೈತರನ್ನು ಈವರೆಗೆ ಬಂಧಿಸಲಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆ ವಿಜ್ಞಾನಿ ಜೆ.ಎಸ್. ಬ್ರಾರ್ ತಿಳಿಸಿದ್ದಾರೆ.

  ಕೃಷಿ ತ್ಯಾಜ್ಯ ಬೆಂಕಿಯನ್ನು ಪರಿಶೀಲಿಸಲ ಹೊಲಕ್ಕೆ ಭೇಟಿ ನೀಡಿದ ವೇಳೆ ಕೃಷಿ ಇಲಾಖೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ರೋಡ್ ಗ್ರಾಮದ ಆರು ರೈತರ ವಿರುದ್ಧ ಸ್ಮಾಲ್ಸರ್ ಪೊಲೀಸರು ಮತ್ತೊಂದು ಎಫ್‌ಐಆರ್ ದಾಖಲಿಸಿದ್ದು,

 ಇದುವರೆಗೆ ಯಾರನ್ನೂ ಬಂಧಿಸಿಲ್ಲ.

  ಪಂಜಾಬ್‍, ಹರಿಯಾಣ ಮತ್ತು ದೆಹಲಿ ಪ್ರಾಂತ್ಯದಲ್ಲಿ ಭತ್ತ ಮತ್ತು ಕಬ್ಬು ಅವಶೇಷಗಳನ್ನು ಸುಡುತ್ತಿರುವುದು ಮುಂದುವರೆದಿರುವುದರಿಂದ ರಾಷ್ಟ್ರ ರಾಜಧಾನಿ ಸೇರಿದಂತೆ  ಸೇರಿದಂತೆ ಉತ್ತರ ಭಾರತದ ಕೆಲ ಭಾಗಗಳಲ್ಲಿ ವಾಯು ಮಾಲಿನ್ಯ ಮಿತಿ ಮೀರಿದ್ದು, ಸಂಬಂಧಿತ ಸರ್ಕಾರಗಳು ಇದನ್ನು ತಡೆಗಟ್ಟಲು ಕಠಿಣ ಕ್ರಮಕ್ಕೆ ಮುಂದಾಗಿವೆ.

Leave a Comment