ಮೋಕಗೆ ರೂರ್ಬನ್ ಭಾಗ್ಯ ಯೋಜನೆ ಭಾಗ್ಯ

ಬಳ್ಳಾರಿ, ಸೆ.4:  ತಾಲೂಕಿನ  ಮೋಕ ಗ್ರಾಮ ಪಂಚಾಯತಿಗೆ ರೂರ್ಬನ್ ಯೋಜನೆಯಡಿ 50 ಕೋಟಿ ರೂಪಾಯಿ ಅನುದಾನ ಬಂದಿದೆ.
ಈ ಅನುದಾನದಿಂದ ನಗರ ಮಾದರಿಯಲ್ಲಿ ಮೋಕ ಗ್ರಾಮವನ್ನು ಸಮಗ್ರವಾಗಿ   ಅಭಿವೃದ್ಧಿಗೊಳಿಸಲು ನಿನ್ನೆ ಏರ್ಪಡಿಸಿದ್ದ ಗ್ರಾಮ ಸಭೆಯಲ್ಲಿ  ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ  ಜಾನಕಿರಾಮ್ ಯೋಜನೆಯ ವಿವರ ನೀಡಿದರು

ಮೋಕ ಗ್ರಾಮವನ್ನು ಮಾದರಿ ಗ್ರಾಮ ವಾಗುತ್ತದೆ ಮತ್ತು ಮುಂದೆ ಇದು ಪಟ್ಟಣ ಪಂಚಾಯತಿ ಆಗಲು ಸಾಧ್ಯವಿದೆ ಈ ನಿಟ್ಟಿನಲ್ಲಿ ರೂರ್ಬನ್ ಯೋಜನೆ ಜಾರಿಗೆ ತರುತ್ತಿದೆಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪತ್ತಾರ್ ನಾಗಮ್ಮ  ಜಿಲ್ಲಾ ಪಂಚಾಯತಿ ಸದಸ್ಯೆ ಹಂಪಮ್ಮ ತಾಲೂಕ ಪಂಚಾಯತಿ ಸದಸ್ಯ ಚನ್ನಪ್ಪ  ಇದ್ದರು.ಗ್ರಾಮ ಪಂಚಾಯಿತಿಯ ಎಲ್ಲಾ  ಸದಸ್ಯರು. ಅನುಷ್ಠಾನ ಇಲಾಖೆ ಅಧಿಕಾರಿಗಳು ಸಭೆಗೆ ಹಾಜರಾಗಿದ್ದರು.

Leave a Comment